ಸುದ್ದಿಮೂಲ ವಾರ್ತೆ ರಾಯಚೂರು, ನ.12:
ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಅವರು ನವೆಂಬರ್ 11ರಂದು ಸಂಜೆ ರಾಯಚೂರು ನಗರದಲ್ಲಿ ಬಿರುಸಿನ ಸಿಟಿ ಸಂಚಾರ ಕೈಗೊಂಡು, ರಸ್ತೆೆಯಲ್ಲಿನ ತಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯ ಮತ್ತು ಚರಂಡಿ ಸರಿಪಡಿಸುವ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದರು.
ಪಾಲಿಕೆ ಎಂಜಿನಿಯರಿಂಗ್ ತಂಡ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ನಗರ ಸುತ್ತಾಾಡಿದ ಆಯುಕ್ತರು, ಬಾಕಿ ಇರುವ ಎಲ್ಲಾ ರಸ್ತೆೆಗಳ ಮತ್ತು ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮುಂದಿನ 3 ತಿಂಗಳ ಕಾಲಾವಕಾಶದ ಗಡುವು ವಿಧಿಸಿದರು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಿಿನ ಸೂಚನೆ ನೀಡಿದರು.
ಈ ವರ್ಷ ಆಗಸ್ಟ್, ಸೆಪ್ಟೆೆಂಬರ್ ಮತ್ತು ಅಕ್ಟೋೋಬರ್ ತಿಂಗಳುಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ರಾಯಚೂರು ನಗರದಲ್ಲಿ, ನಿರೀಕ್ಷಿತ ಮಟ್ಟದಲ್ಲಿ ರಸ್ತೆೆ ಮತ್ತು ಸಿವಿಲ್ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಹಲವು ವರ್ಷಗಳ ನಂತರ ಮೊದಲ ಬಾರಿಗೆ ಪಾಲಿಕೆಯಿಂದ ರಸ್ತೆೆ ನಿರ್ವಹಣಾ ಟೆಂಡರ್ ಕರೆಯಲಾಗಿದೆ. ಪಾಲಿಕೆಯಿಂದ 1 ಕೋಟಿ ರೂ.ಗಳ ಟೆಂಡರ್ ಮೊತ್ತದೊಂದಿಗೆ, ರಸ್ತೆೆಗಳಲ್ಲಿನ ತಗ್ಗು ಗುಂಡಿ ಮುಚ್ಚುವ ಕೆಲಸ ಪ್ರಾಾರಂಭಿಸಲಾಗಿದೆ. ಈ ಕಾರ್ಯವು ಹಗಲು, ರಾತ್ರಿಿ ನಡೆಯಬೇಕು. ಕಾಮಗಾರಿಯ ಗುಣಮಟ್ಟದ ಬಗ್ಗೆೆ ವಿಶೇಷ ಕಾಳಜಿ ವಹಿಸಬೇಕು ಎಂದು ಅವರು ಕಟ್ಟುನಿಟ್ಟಿಿನ ನಿರ್ದೇಶನ ನೀಡಿದರು.
ಪಾಲಿಕೆಯಿಂದ 8 ಕಾರ್ಯ ನಿರೀಕ್ಷಕರ ತಂಡವನ್ನು ರಚಿಸಲಾಗಿದ್ದು, ತಂಡದವರು ಪ್ರತಿದಿನ 5-6 ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಬೇಕು. ನಿಧಾನಗತಿಯ ಕೆಲಸ ಮತ್ತು ಗುಣಮಟ್ಟದ ಬಗ್ಗೆೆ ಯಾವುದೇ ದೂರುಗಳು ಬಂದಲ್ಲಿ ಕೂಡಲೇ ಸ್ಪಂದಿಸಿ ಯುದ್ಧೋೋಪಾದಿಯಲ್ಲಿ ಪರಿಹರಿಸಬೇಕು ಎಂದು ಅವರು ತಿಳಿಸಿದರು.
ಎಲ್ಲಾ ಏಜೆನ್ಸಿಿಗಳ ಕೆಲಸ ಮತ್ತು ಎಂಜಿನಿಯರಿಂಗ್ ತಂಡಗಳು ಮಹಾನಗರ ಪಾಲಿಕೆಯಿಂದ ಅನುಮತಿ ಮತ್ತು ಸ್ಥಳ ಗುರುತು ಪಡೆಯಬೇಕು. ಗುಣಮಟ್ಟದ ಪರಿಶೀಲನೆಯ ನಂತರ ಮಾತ್ರ ಕಾಮಗಾರಿಗಳನ್ನು ವಹಿಸಿಕೊಡಲಾಗುತ್ತದೆ. ಕಾಮಗಾರಿ ಕಳಪೆ ಮತ್ತು ಅವೈಜ್ಞಾನಿಕವಾಗಿದೆ ಎಂದು ಕಂಡುಬಂದಲ್ಲಿ ಪಾಲಿಕೆಯು ಎನ್ಒಸಿಯನ್ನು ತಿರಸ್ಕರಿಸುತ್ತದೆ. ಮತ್ತು ಹಸ್ತಾಾಂತರವನ್ನು ತೆಗೆದುಕೊಳ್ಳುವುದಿಲ್ಲ. ಮತ್ತು ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳಿಗೆ ವರದಿ ಮಾಡುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳಿಂದ ಪರಿಶೀಲನೆ ನಡೆದಿದೆ: ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಎರಡು ವಾರಗಳ ಹಿಂದೆ ರಾಯಚೂರಿನ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳ ಕುರಿತು ಪರಿಶೀಲನಾ ಸಭೆ ನಡೆಸಿದ್ದರು. ನಗರ ಮತ್ತು ಜಿಲ್ಲೆಯೊಳಗಿನ ಲೋಕೋಪಯೋಗಿ ಇಲಾಖೆಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ಎಲ್ಲಾ ಮುಖ್ಯ ರಸ್ತೆೆ ನಿರ್ವಹಣೆ ಮತ್ತು ಹೊಸ ರಸ್ತೆೆ ನಿರ್ಮಾಣ ಕಾರ್ಯವನ್ನು ಯುದ್ಧೋೋಪಾದಿಯಲ್ಲಿ ಮಾಡಬೇಕೆಂದು ತಿಳಿಸಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ನಗರ ಸಂಚಾರ ನಡೆಸಿ ರಸ್ತೆೆ ಕಾಮಗಾರಿಗಳ ಬಗ್ಗೆೆ ಪರಿಶೀಲನೆ ಮಾಡಲಾಗುತ್ತಿಿದೆ ಎಂದು ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದರು.
ಭೇಟಿ ವೇಳೆ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ್ ಗಲಗ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್, ವಿಭಾಗ ಅಧಿಕಾರಿಗಳು ಮತ್ತು ನಿಗಮದ ವಲಯ ಆಯುಕ್ತ ಹೆಬ್ಬಾಾಳ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿರ್ಯ ರಶ್ಮಿಿ, ಸಹಾಯಕ ಎಂಜಿನಿಯರ್ ಮಲ್ಲಿಕ್ ಸೈಯದ್, ಕುಂದುಕೊರತೆ ನೋಡಲ್ ಅಧಿಕಾರಿ ಬಾಬಾ ಖಾನ್, ಸಲಹೆಗಾರ ತಾರಾನಾಥ್ ಮತ್ತು ನಾವೇದ್ ಸೇರಿದಂತೆ ಇತರರು ಇದ್ದರು.
* ಮೊದಲ ಬಾರಿಗೆ ಪಾಲಿಕೆಯಿಂದ ರಸ್ತೆೆ ನಿರ್ವಹಣಾ ಟೆಂಡರ್ * ಕಾಮಗಾರಿ ಪರಿಶೀಲನೆಗಾಗಿ 8 ಕಾರ್ಯ ನಿರೀಕ್ಷಕರ ತಂಡ ರಚನೆ * ಕಾಮಗಾರಿ ಪೂರ್ಣಗೊಳಿಸಲು ಮುಂದಿನ 3 ತಿಂಗಳ ಕಾಲಾವಕಾಶದ ಗಡುವು * ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮಹಾನಗರ ಪಾಲಿಕೆಯಿಂದ ಕ್ರಮ — ರಾಯಚೂರು ನಗರ ಸುತ್ತಿಿದ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ; ರಸ್ತೆೆಗಳಲ್ಲಿನ ತಗ್ಗುಗುಂಡಿ, ಚರಂಡಿ ದುರಸ್ತಿಿ ಕಾಮಗಾರಿಗಳ ಖುದ್ದು ಪರಿಶೀಲನೆ

