ಸುದ್ದಿಮೂಲ ವಾರ್ತೆ ಬೆಂಗಳೂರು, ಜ.21:
ರಾಜ್ಯದ ಅಬಕಾರಿ ಇಲಾಖೆಯಲ್ಲಿ ಆನ್ಲೈನ್ ಕ್ರಾಾಂತಿ ಸದ್ದಿಲ್ಲದೇ ನಡೆಯುತ್ತಿಿದೆ. ಇದೇ ಮೊದಲ ಬಾರಿಗೆ ಈ ವರ್ಷ 13 ಸಾವಿರಕ್ಕೂ ಅಧಿಕ ಪರವಾನಗಿ ನವೀಕರಣಗಳನ್ನು ಆನ್ಲೈನ್ ಪ್ರಕ್ರಿಿಯೆ ಮೂಲಕ ಕೇವಲ ಮೂರು ದಿನದಲ್ಲಿ ಪೂರ್ಣಗೊಳಿಸಿ ದಾಖಲೆ ನಿರ್ಮಿಸಲಾಗಿದೆ.
ಕಳೆದೊಂದು ವರ್ಷದಿಂದ ಅಬಕಾರಿ ಇಲಾಖೆ ಸಂಪೂರ್ಣ ಆನ್ಲೈನ್ ಮಯವಾಗಿದೆ. ಇಲಾಖೆಯ ಶೇ.99ರಷ್ಟು ಕಡತಗಳ ವಿಲೇವಾರಿ ಆನ್ಲೈನ್ ಮೂಲಕವೇ ನಡೆಯುತ್ತಿಿದೆ. ಕೇವಲ ನ್ಯಾಾಯಾಲಯಕ್ಕೆೆ ಸಲ್ಲಿಸುವ ದಾಖಲೆಗಳು ಮತ್ತು ಕಾನೂನಾತ್ಮಕ ಕಡತಗಳು ಮಾತ್ರ ಲಿಖಿತ ಕಡತಗಳು ಇವೆ. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಇದ್ದ ಆನ್ಲೈನ್ ವ್ಯವಸ್ಥೆೆಯನ್ನು ಈಗ ಜಿಲ್ಲಾ ಮಟ್ಟಕ್ಕೂ ವಿಸ್ತರಿಸಲಾಗಿದೆ.
ಆನ್ಲೈನ್ ವ್ಯವಸ್ಥೆೆ ಜಾರಿ ಮಾಡಿದ ಬಳಿಕ ಕಡತಗಳ ವಿಲೇವಾರಿ ಶೀಘ್ರವಾಗಿ ನಡೆಯುತ್ತಿಿದೆ. ಈ ಹಿಂದೆ ಯಾವುದೇ ಕೆಲಸಕ್ಕೆೆ ಅರ್ಜಿ ಸಲ್ಲಿಸಿದರೆ ಅದು ಹಲವು ತಿಂಗಳುಗಳವರೆಗೆ ಕಚೇರಿಗಳಲ್ಲಿಯೇ ಕೊಳೆಯುತ್ತಿಿತ್ತು. ಈಗ ಆನ್ಲೈನ್ ವ್ಯವಸ್ಥೆೆ ಜಾರಿ ಮಾಡಿದ ಬಳಿಕ ಕಡತ ವಿಲೇವಾರಿ ಪ್ರಕ್ರಿಿಯೆ ಸುಗಮವಾಗಿದೆ. ಅಲ್ಲದೆ, ಜನಸಾಮಾನ್ಯರಿಗೂ ಸುಲಭಕ್ಕೆೆ ಇಲಾಖೆ ಕೆಲಸ ಕಾರ್ಯಗಳು ಆಗುತ್ತಿಿವೆ ಎನ್ನುತ್ತಾಾರೆ ಅಬಕಾರಿ ಇಲಾಖೆ ಅಧಿಕಾರಿಗಳು.
ಜನರ ನೇರ ಭೇಟಿಗೆ ಅವಕಾಶ ಬೇಡ :
ಅಬಕಾರಿ ಸನ್ನದು ಮಂಜೂರು, ಸನ್ನದು ನವೀಕರಣ, ಸ್ಥಳಾಂತರ, ವರ್ಗಾವಣೆ, ನೀಲಿ ನಕಾಶೆ ಮಂಜೂರು, ಸಾಂದರ್ಭಿಕ ಲೈಸ್ಸ್ ಮಂಜೂರಾತಿ, ನಿಯಮ 5(2)ರಡಿ ವಿನಾಯಿತಿ, ಮದ್ಯಸಾರ, ಮದ್ಯ, ಕಾಂಕಂಬಿ ಸಾಗಾಣಿಕೆ, ಆಮದು -ರ್ತು ನಿರಾಕ್ಷೇಪಣೆ, ರಹದಾರಿ, ಲೇಬಲ್ ಅನುಮೋದನೆ ಸೇರಿ ಒಟ್ಟಾಾರೆ 41 ಸೇವೆಗಳನ್ನು ತ್ವರಿತವಾಗಿ ಒದಗಿಸಲು ವರ್ಷನ್-2 ಆನ್ಲೈನ್ ತಂತ್ರಾಾಂಶದಡಿ ಸುಲಭವಾಗಿ ಜನರಸಾಮಾನ್ಯರಿಗೆ ಸೇವೆಗಳನ್ನು ಒದಗಿಸಲಾಗುತ್ತಿಿದೆ.
ಹೀಗಾಗಿ ಈ ರೀತಿಯ ಯಾವುದೇ ಸೇವೆಯ ಆಗತ್ಯ ಇರುವವರು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ಆನ್ಲೈನ್ ಮೂಲಕವೇ ಒದಗಿಸಬೇಕು. ಒಂದು ವೇಳೆ ಯಾವುದಾದರೂ ದಾಖಲಾತಿ ಕೊರತೆ ಇದ್ದಲ್ಲಿ ಅವರಿಗೆ ಪತ್ರ ಬರೆಯಲಾಗುತ್ತದೆ. ನೇರವಾಗಿ ಕಚೇರಿಗೆ ಬಂದು ಅಧಿಕಾರಿ, ಸಿಬ್ಬಂದಿಯನ್ನು ಭೇಟಿ ಮಾಡುವುದನ್ನು ನಿಯಂತ್ರಣ ಮಾಡುವ ಪ್ರಕ್ರಿಿಯೆ ನಡೆಯುತ್ತಿಿದೆ ಎನ್ನುತ್ತಾಾರೆ ಇಲಾಖೆಯ ಹಿರಿಯ ಅಧಿಕಾರಿಗಳು.
ಆನ್ಲೈನ್ ಕೌನ್ಸೆೆಲಿಂಗ್ ಮೂಲಕ ವರ್ಗಾವಣೆ : ಅಬಕಾರಿ ಇಲಾಖೆಯಲ್ಲಿ ಮೊದಲ ಬಾರಿಗೆ 2025ರಲ್ಲಿ ಅಧಿಕಾರಿ ಮತ್ತು ನೌಕರುಗಳ ವರ್ಗಾವಣೆಯನ್ನು ಆನ್ಲೈನ್ ಮೂಲಕ ನಿಸ್ಪಕ್ಷಪಾತವಾಗಿ ನಡೆಸಲಾಗಿದೆ. ಗ್ರೂಪ್ ಸಿ ವೃಂದಗಳಾದ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರು, ಮುಖ್ಯಪೇದೆ ಮತ್ತು ಅಬಕಾರಿ ಪೇದೆಗಳನ್ನು ಡಿಜಿಟಲ್ ಕೌನ್ಸೆೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಿಯೆ ಪೂರ್ಣಗೊಳಿಸಲಾಗಿದೆ. ಈ ಪ್ರಕ್ರಿಿಯೆಲ್ಲಿ 145 ಅಬಕಾರಿ ನಿರೀಕ್ಷಕರು, 112 ಅಬಕಾರಿ ಉಪ ನಿರೀಕ್ಷಕರು, 7 ಅಬಕಾರಿ ಮುಖ್ಯ ಪೇದೆಗಳು ಮತ್ತು 415 ಅಬಕಾರಿ ಪೇದೆಗಳನ್ನು ನಿಸ್ಪಕ್ಷಪಾತವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಸುದ್ದಿಮೂಲ ಕ್ಕೆೆ ಮಾಹಿತಿ ಒದಗಿಸಿದ್ದಾರೆ.

