ಸುದ್ದಿಮೂಲ ವಾರ್ತೆ ಬೆಂಗಳೂರು, ನ.21:
ರಾಜ್ಯ ಕಾಂಗ್ರೆೆಸ್ ಸರ್ಕಾರ ಎರಡೂವರೆ ವರ್ಷದ ಬಳಿಕ ಎರಡು ಭಾಗಗಳಾಗಿದೆ. ಒಂದು ಬಣ ಡಿ.ಕೆ. ಶಿವಕುರ್ಮಾ ಅವರನ್ನು ಮುಖ್ಯಮಂತ್ರಿಿ ಮಾಡುವಂತೆ ದಿಲ್ಲಿಯ ಹೈಕಮಾಂಡ್ ನಾಯಕರ ಗಮನ ಸೆಳೆಯಲು ಮುಂದಾಗಿದ್ದರೆ, ಮತ್ತೊೊಂದೆಡೆ ಸಿಎಂ ಬಣದ ಸಚಿವರು ಮತ್ತು ಶಾಸಕರು ಸಿದ್ದರಾಮಯ್ಯ ಅವರೇ ಐದು ವರ್ಷ ಮುಂದುವರಿಸುವ ನಿಟ್ಟಿಿನಲ್ಲಿ ಒತ್ತಡ ತಂತ್ರಗಳನ್ನು ಸದ್ದಿಲ್ಲದೆ ರೂಪಿಸುತ್ತಿಿದ್ದಾರೆ.
ದೇಶದಲ್ಲಿ ಕರ್ನಾಟದಲ್ಲಷ್ಟೇ ಗಟ್ಟಿಿಯಾದ ಕಾಂಗ್ರೆೆಸ್ ಪಕ್ಷದ ಸರ್ಕಾರ ಹೊಂದಿರುವ ಹೈಕಮಾಂಡ್ಗೆೆ ಈಗ ಇಲ್ಲಿನ ಭಿನ್ನ ಚಟುವಟುಕೆಗಳಿಗೆ ತಲೆನೋವಾಗಿ ಪರಿಣಮಿಸಿವೆ. ಈ ಹಿನ್ನೆೆಲೆಯಲ್ಲಿ ಇಲ್ಲಿನ ಭಿನ್ನ ನಡೆಗಳನ್ನು ಇಲ್ಲಿಯೇ ನಿಯಂತ್ರಣಕ್ಕೆೆ ತರುವ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಸದಾಶಿವನಗರದ ಅವರ ನಿವಾಸ ರಾಜಕೀಯ ಕೇಂದ್ರವಾಗಿ ಮಾರ್ಪಟ್ಟಿಿದೆ.
ಸಿಎಂ ಸಿದ್ದರಾಮಯ್ಯ ಅವರು ಇಂದೂ ಸಹ ’ಸಿಎಂ ಸ್ಥಾಾನ ನನಗೇ ಗಟ್ಟಿಿ. ನಾನೇ ಮುಂದುವರಿಯುತ್ತೇನೆ, ನಾನೇ ಬಜೆಟ್ ಮಂಡಿಸುತ್ತೇನೆ, ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ,’ ಎಂದು ಪುನರುಚ್ಛರಿಸಿದರು. ಇತ್ತೀಚಿನ ದಿನಗಳಲ್ಲಿ ಸಿಎಂ ಅವರಿಗೆ ತಾವೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಹೇಳುವುದು ಪರಿಪಾಠ ಮತ್ತು ಅನಿವಾರ್ಯ ಆಗಿರುವುದು ಪರಿಸ್ಥಿಿತಿ ಎಲ್ಲವೂ ಅಂದುಕೊಂಡಂತಿಲ್ಲ ಎಂಬುದನ್ನು ಸೂಚಿಸುತ್ತಿಿದೆ.
ನವೆಂರ್ಬ ಕ್ರಾಾಂತಿ ನಡೆಯುವುದಿಲ್ಲ ಎಂದು ಕಾಂಗ್ರೆೆಸ್ಸಿಿಗರು ಪದೇ ಪದೇ ಹೇಳುತ್ತಿಿದ್ದ ಸಂದರ್ಭದಲ್ಲೈ ಡಿಕೆ ಶಿವಕುರ್ಮಾ ಬಣದ ಶಾಸಕರ ದೆಹಲಿಯಾತ್ರೆೆ ಕ್ರಾಾಂತಿಯ ಮುನ್ಸೂಚನೆ ನೀಡಿದೆ. ಒಟ್ಟಿಿನಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಕುರ್ಚಿ ಆಭಾದಿತ ಎನ್ನುವ ಸನ್ನಿಿವೇಶದಿಂದ ಈಗ ಅಸ್ಥಿಿರತೆಯ ಅಲುಗಾಟ ಆರಂಭವಾದಂತಿದೆ.
ಶಾಸಕರ ವಿಶ್ವಾಾಸ ಪಡೆಯುವಲ್ಲಿ ಡಿಕೆಶಿ ನಿರತ:
ಮತ್ತೊೊಂದೆಡೆ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುರ್ಮಾ, ’ಪಕ್ಷ ನನ್ನ ತಾಯಿ ಇದ್ದಂತೆ. ಬಣ ಗುಂಪುಗಾರಿಕೆ ನನ್ನ ರಕ್ತದಲ್ಲಿಯೇ ಬಂದಿಲ್ಲ,’ ಎಂದು ಹೇಳಿದ್ದಾರೆ. ಆದರೆ, ಶುಕ್ರವಾರ ಮಧ್ಯಾಾಹ್ನದವರೆಗೂ ಡಿಕೆಶಿ ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿಯೇ ಉಳಿದು ತೆರೆಮರೆಯಲ್ಲಿ ತಂತ್ರಗಾರಿಕೆ ರೂಪಿಸಿದರು. ಸಹೋದರ ಡಿ.ಕೆ.ಸುರೇಶ್ ಗೆ ಕಾರ್ಯತಂತ್ರವನ್ನು ಅನುಷ್ಠಾಾನಗೊಳಿಸುವ ಜವಾಬ್ದಾಾರಿ ನೀಡಲಾಗಿದೆ.
ಶಾಸಕರನ್ನು ವಿಶ್ವಾಾಸಕ್ಕೆೆ ಪಡೆಯಲು ನಿರಂತರ ಪ್ರಯತ್ನ ಮುಂದುವರಿಸಿರುವ ಡಿ.ಕೆ. ಶಿವಕುರ್ಮಾ ಅವರು ಇಂದು ಇದ್ದಕ್ಕಿಿದ್ದಂತೆ ಪರಪ್ಪನ ಅಗ್ರಹಾರಕ್ಕೆೆ ತೆರಳಿದರು. ವಿಚಾರಾಧೀನ ಕೈದಿಗಳಾಗಿ ಪರಪ್ಪನ ಅಗ್ರಹಾರದಲ್ಲಿರುವ ಕಾಂಗ್ರೆೆಸ್ ಶಾಸಕರಾದ ವಿನಯ್ ಕುಲಕರ್ಣಿ ಹಾಗೂ ವೀರೇಂದ್ರ ಪಪ್ಪಿಿ ಅವರನ್ನು ಭೇಟಿ ಮಾಡಿ ಸಮಾಧಾನ ತಿಳಿಸಿದರು. ನಿಮ್ಮ ಜೊತೆಗೆ ಇರುವುದಾಗಿ ಧೈರ್ಯ ತುಂಬಿ ಬಂದರು.
ದೆಹಲಿಯಲ್ಲಿಯೂ ಕಾರ್ಯತಂತ್ರ
ಡಿ.ಕೆ. ಶಿವಕುರ್ಮಾ ಅವರ ಬಣದ ಶಾಸಕರು ಗುರುವಾರವೇ ದೆಹಲಿಗೆ ತೆರಳಿದ್ದು, ಅಲ್ಲಿಯೇ ಠಿಕಾಣಿ ಹೂಡುವ ಮೂಲಕ ಕೇಂದ್ರ ನಾಯಕರ ಭೇಟಿ ಪ್ರಯತ್ನ ಮುಂದುವರಿಸಿದ್ದಲ್ಲದೆ ತೆರೆಮರೆಯ ಕಾರ್ಯತಂತ್ರ ರೂಪಿಸುತ್ತಿಿದ್ದಾರೆ. ಶುಕ್ರವಾರ ಮತ್ತಷ್ಟು ಶಾಸಕರು ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತಾಾದರೂ ಅವರಿಗೆ ಇನ್ನೂ ’ಗ್ರೀೀನ್ ಸಿಗ್ನಲ್’ ಸಿಕ್ಕಿಿಲ್ಲ ಎಂದು ಹೇಳಲಾಗುತ್ತಿಿದೆ. ಅಲ್ಲದೆ, ಮಲ್ಲಿಕಾರ್ಜುನ ಖರ್ಗೆ ಅವರೇ ಬೆಂಗಳೂರಿಗೆ ಬಂದಿರುವುದರಿಂದ ಹೆಚ್ಚಿಿನ ಶಾಸಕರು ದೆಹಲಿಗೆ ಹೋಗುವುದು ಒಳಿತಲ್ಲ ಎಂಬ ತೀರ್ಮಾನಕ್ಕೂ ಬರಲಾಗಿದೆ.
ರಾಮನಗರದ ಕ್ಷೈತ್ರದ ಶಾಸಕ ಇಕ್ಬಾಾಲ್ ಹುಸೇನ್ ಮಾತನಾಡಿ, ದೆಹಲಿಗೆ ತೆರಳುವ ಶಾಸಕರು ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿ, ಡಿಕೆ ಶಿವಕುರ್ಮಾ ಅವರಿಗೆ ಬಾಕಿ ಉಳಿದ ಅವಧಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳಲಿದ್ದೇವೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಾಗಿ ಮೇಲ್ನೊಟಕ್ಕೆೆ ಏನೇ ಹೇಳಿಕೆ ನೀಡಿದ್ದರೂ ಆಂತರಿಕವಾಗಿ ಬಣ ಬಡಿದಾಟವಂತೂ ಸ್ಪಷ್ಟವಾಗಿ ಕಾಣುತ್ತಿಿದೆ.
ಖರ್ಗೆ-ಸಿಎಂ ಇಂದು ಭೇಟಿ:
ಕೆಲವು ಶಾಸಕರು ಭಿನ್ನ ಚಟುವಟಿಕೆಗಳನ್ನು ಪ್ರಾಾರಭಿಸಿದ್ದು, ಹೈಕಮಾಂಡ್ನಿಿಂದಲೇ ಅವರ ಬಾಯಿ ಮುಚ್ಚಿಿಸಬೇಕು ಎಂಬ ಒತ್ತಡವನ್ನು ಸಿಎಂ ಬಣದ ಸಚಿವರು, ಶಾಸಕರಿಂದಲೂ ಕೇಳಿಬರುತ್ತಿಿದೆ.
ಈ ಮಧ್ಯೆೆ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಖರ್ಗೆ ಅವರೊಂದಿಗೆ ದೂರವಾಣಿ ಮೂಲಕ ಸುಮಾರು 20 ನಿಮಿಷಗಳ ಕಾಲ ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಶನಿವಾರ ನೇರವಾಗಿ ಅವರನ್ನು ಭೇಟಿ ಮಾಡುವ ಶಾಸಕರು ಚಟುವಟಿಕೆಗಳಿಗೆ ಹೈಕಮಾಂಡ್ನಿಿಂದಲೇ ತಡೆ ಒಡ್ಡುವಂತೆ ಸಿಎಂ ಸಿದ್ದರಾಮಯ್ಯ ಅವರು ಖರ್ಗೆ ಅವರ ಬಳಿ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.
ಕೋಟ್..
ಒಂದು ಪಕ್ಷದ ಶಾಸಕರು ಮಂತ್ರಿಿ, ಮುಖ್ಯಮಂತ್ರಿಿ ಆಗಲು ಅರ್ಹರಿರುತ್ತಾಾರೆ. ಮುಖ್ಯಮಂತ್ರಿಿಗಳು ಐದು ವರ್ಷ ತಾವೇ ಸಿಎಂ ಆಗಿ ಇರುವುದಾಗಿ ಹೇಳಿದ್ದಾರೆ. ಐ ವಿಶ್ ಹಿಮ್ ಆಲ್ ದ ಬೆಸ್ಟ್ (ಅವರಿಗೆ ಶುಭ ಕೋರುತ್ತೇನೆ).
– ಡಿ.ಕೆ. ಶಿವಕುರ್ಮಾ, ಉಪಮುಖ್ಯಮಂತ್ರಿಿ
ಸಿಎಂ ಆಪ್ತ ಸಚಿವರ ಡಿರ್ನ್ನ ಸಭೆ
ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರನ್ನು ಪ್ರಬಲವಾಗಿ ಬೆಂಬಲಿಸುವ ಸಚಿವರಾದ ಸತೀಶ್ ಜಾರಕಿಹೊಳಿ, ಎಚ್. ಸಿ.ಮಹದೇವಪ್ಪ, ಡಾ.ಜಿ.ಪರಮೇರ್ಶ್ವ, ಕೆ.ವೆಂಕಟೇಶ್, ದಿನೇಶ್ ಗುಂಡರಾವ್, ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಬೆಂಗಳೂರಿನಲ್ಲಿ ಗುರುವಾರ ರಾತ್ರಿಿ ಭೋಜನಕೂಟದ ಸಭೆ ನಡೆಸಿದರು. ದೆಹಲಿಯಲ್ಲಿ ಅವರು ಏನೇ ಚರ್ಚೆ ಮಾಡಲಿ ನಾವು ಅದಕ್ಕೆೆ ಪ್ರತಿತಂತ್ರ ರೂಪಿಸಬೇಕು ಎಂದು ಭೋಜನಕೂಟದಲ್ಲಿ ಸಮಾಲೋಚನೆ ನಡೆದಿದ್ದಾರೆ ಎನ್ನಲಾಗಿದೆ.
ದೆಹಲಿ ಯಾತ್ರೆೆ ಮತ್ತು ಭೋಜನಕೂಟದ ನಡುವೆ ಮುಖ್ಯಮಂತ್ರಿಿ ಸಿದ್ದರಾಮಯ್ಯ ಕೂಡ ಇಂದು ಬೆಳಗ್ಗೆೆ ಆಪ್ತ ಸಚಿವರ ಜೊತೆ ಪ್ರತ್ಯೆೈಕ ಮಾತೆಕತೆ ನಡೆಸಿ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿಿದ್ದಾರೆ.

