ಸುದ್ದಿಮೂಲ ವಾರ್ತೆ ರಾಯಚೂರು , ಡಿ.10:
ಬೀದಿದೀಪ ನಿರ್ವಾಹಕರ ನೇರ ನೇಮಕಾತಿ ನೇರ ಪಾವತಿಗೆ ಕ್ರಮ ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಪೌರಸೇವಾ ನೌಕರರ ಬೀದಿ ದೀಪ ಕಾರ್ಮಿಕರ ಸಂಘ ಒತ್ತಾಾಯಿಸಿದೆ.
ಇಂದು ಪಾಲಿಕೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು ಸುಮಾರು 25 ವರ್ಷಗಳಿಂದ ಹೊರಗುತ್ತಿಿಗೆ ಆಧಾರದ ಮೇಲೆ ಎಲ್ಲಾ ಸ್ಥಳೀಯ ಸಂಸ್ಥೆೆಗಳಲ್ಲಿ ಕಾರ್ಯವಹಿಸುತ್ತಿಿದ್ದು, ಗುತ್ತಿಿಗೆದಾರರು ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ನೀಡದೆ ಕೆಲಸ ಮಾಡಿಸಿಕೊಳ್ಳಲಾಗುತ್ತಿಿದೆ ಎಂದು ದೂರಿದರು.
ವಿದ್ಯುತ್ ಚಾಲ್ತಿಿಯಲ್ಲಿರುವ ಸಮಯದಲ್ಲಿ ಕೆಲಸ ಮಾಡುತ್ತಿಿದ್ದು ಹಲವು ಕಾರ್ಮಿಕರು ವಿದ್ಯುತ್ ಆಘಾತಕ್ಕೆೆ ಒಳಗಾಗಿದ್ದಾಾರೆ ಕೆಲವರು ಪ್ರಾಾಣ ಕಳೆದುಕೊಂಡಿದ್ದು ಕ್ರಮ ವಹಿಸಲು ಆಗ್ರಹಿಸಿದರು.
ಕಾರ್ಮಿಕ ಇಲಾಖೆಯ ಅನ್ವಯ ಕನಿಷ್ಟ ವೇತನ, ಪಿಎ್, ಇಎಸ್ಐ ಸೌಲಭ್ಯ ಒದಗಿಸಬೇಕು, ಗುತ್ತಿಿಗೆದಾರರು 5-6 ತಿಂಗಳಾದರೂ ವೇತನ ನೀಡಿಲ್ಲ ಕ್ರಮ ವಹಿಸಬೇಕು, ವೇತನ ಕೇಳಿದರೆ ತತ್ಸಮಾನ ಪದವಿ ಕೇಳಿ ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಹಾಕುವುದು ನಿಲ್ಲಬೇಕು, ಸಂಕಷ್ಟ ಪರಿಹಾರ ಭತ್ಯೆೆ ನೀಡಬೇಕು, ಈಗಿರುವ ವೇತನದಿಂದ ಬದುಕು ಕಷ್ಟವಾಗಿದ್ದು ವೇತನ ಹೆಚ್ಚಿಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಎಂ.ಆನಂದ, ಬಸಪ್ಪಘಿ,ಸಾಗರ, ರಘು, ಅಜಗರ್ ಅಲಿ, ಜಾವಿದ್ಅಲಿ, ಹರೀಶ, ತಿರುಮಲೇಶ, ಪರಶುರಾಮ, ಬಡೆಪ್ಪಘಿ, ಮಾರಪ್ಪ ಸೇರಿ ಇತರರಿದ್ದರು.

