ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.25:
ತಾಲೂಕಿನಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿಯಿಂದ ವಿದ್ಯಾಾರ್ಥಿ-ಯುವಜನರು ದುಶ್ಚಟಕ್ಕೆೆ ಬಲಿಯಾಗುತ್ತಿಿದ್ದು, ಇದನ್ನು ತಡೆಯಲು ಪೊಲೀಸ್, ಅಬಕಾರಿ ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಗೊಂಡ ಸಭೆ ಕರೆದು ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಮಾದಕ ದ್ರವ್ಯ ನಿರ್ಮೂಲನಾ ಒಕ್ಕೂಟ ತಾಲ್ಲೂಕು ಘಟಕ ಒತ್ತಾಾಯಿಸಿತು.
ನಗರದಲ್ಲಿ ಗಾಂಜಾ ಹಾಗೂ ಮಾದಕ ವಸ್ತುಗಳ ಹಾವಳಿ ದಿನದಿಂದ ದಿನಕ್ಕೆೆ ಮಿತಿ ಮೀರುತ್ತಿಿದೆ. ಕೂಡಲೇ ಎಚ್ಚೆೆತ್ತುಕೊಂಡು ಕಡಿವಾಣ ಹಾಕದೇ ಹೋದರೆ ಸಾಮಾಜಿಕ ಹಾನಿಗೆ ದಾರಿ ಮಾಡಿಕೊಡುವ ಸಂಭವ ಹೆಚ್ಚಿಿದೆ. ನಗರದ ವಿವಿಧ ವಾರ್ಡ್ಗಳು, ನಗರಕ್ಕೆೆ ಹೊಂದಿಕೊಂಡ ನಿರ್ಜನ ಪ್ರದೇಶ ಹಾಗೂ ಇತರೆಡೆ ಗಾಂಜಾ ಪ್ಯಾಾಕೆಟ್ ತಯಾರಿಸಿ ವ್ಯಸನಿಗಳಿಗೆ ಮಾರಾಟ ಮಾಡುತ್ತಿಿದ್ದಾಾರೆ. ಗಾಂಜಾ ಮತ್ತು ಮಾದಕ ವಸ್ತುಗಳ ಪೆಡ್ಲರ್ಗಳು ವಿದ್ಯಾಾರ್ಥಿ, ಯುವ ಜನರನ್ನು ಗುರಿಯಾಗಿಟ್ಟುಕೊಂಡು ವ್ಯವಸ್ಥಿಿತವಾಗಿ ಜಾಲ ಹೆಣೆದು, ಮುಗ್ದರನ್ನು ಬಲಿಪಶು ಮಾಡುತ್ತಿಿದ್ದಾಾರೆ. ಇಷ್ಟೇ ಅಲ್ಲದೇ ಗಾಂಜಾ ಮತ್ತು ಮಾದಕ ವಸ್ತು ಸೇವಿಸಿದ ಯುವಕರು ನಶೆಯಲ್ಲಿ ನಗರದ ವಾರ್ಡ್ಗಳಲ್ಲಿ ಸೈಕಲ್ ಮೋಟರ್ಗಳನ್ನು ಮನ ಬಂದಂತೆ ಚಲಾಯಿಸುವುದು, ಬಡಿಗೆ ಇಲ್ಲವೇ ಇನ್ನಿಿತರೆ ವಸ್ತುಗಳನ್ನು ಕೈಯಲ್ಲಿ ತಿರುಗಿಸುತ್ತಾಾ ಸಾರ್ವಜನಿಕರಿಗೆ ಬಹಿರಂಗವಾಗಿ ಹೆದರಿಸುವುದು-ಬೆದರಿಸುವುದು ಮಾಡುತ್ತಿಿದ್ದಾಾರೆ. ದಿನವೂ ಒಂದಿಲ್ಲೊೊಂದು ವಾರ್ಡ್ನಲ್ಲಿ ಈ ತರಹದ ಘಟನೆಗಳು ನಡೆಯುತ್ತಿಿದ್ದು, ಇದರಿಂದ ಜನರು ಆತಂಕಕ್ಕೀಡಾಗಿದ್ದಾಾರೆ ಎಂದು ಸಂಚಾಲಕ ಚಂದ್ರಶೇಖರ ಗೊರಬಾಳ ಗಮನ ಸೆಳೆದರು.
ಜಮಾ ಅತೆ ಇಸ್ಲಾಾಮಿ ಹಿಂದ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಹುಸೇನ್ಸಾಬ್ ಮಾತನಾಡಿ, ನಗರದ ಮಹೆಬೂಬಿಯಾ ಕಾಲೋನಿ, ಶರಣಬಸವೇಶ್ವರ ಕಾಲೋನಿ, ಇಂದಿರಾನಗರ, ಪ್ರಶಾಂತನಗರ, ಖದರಿಯಾ ಕಾಲೋನಿ, ಜವಳಗೇರಾ ಹಾಗೂ ಕೆಲ ಪುನರ್ವಸತಿ ಕ್ಯಾಾಂಪ್ಗಳಲ್ಲಿ ಗಾಂಜಾ ಮಾರಾಟ ರಾಜಾರೋಷವಾಗಿ ನಡೆಯುತ್ತಿಿದೆ. ಚಾಕೊಲೇಟ್ನಲ್ಲಿ ಮಾದಕ ವಸ್ತುವನ್ನು ಸೇರಿಸಿ ಮಾರಾಟ, ಡ್ರಗ್ಸ್ ಒಳಗೊಂಡ ಇಂಜೆಕ್ಷನ್ ಮಾರಾಟ ಮಾಡಲಾಗುತ್ತಿಿದೆ. ಇಷ್ಟೆೆಲ್ಲಾಾ ನಡೆಯುತ್ತಿಿದ್ದರೂ ಪೊಲೀಸ್ ಇಲಾಖೆ ಇದನ್ನು ತಡೆಯಲು ಕಠಿಣ ಕ್ರಮಕ್ಕೆೆ ಮುಂದಾಗುತ್ತಿಿಲ್ಲ ಎಂದು ಆಪಾದಿಸಿದರು.
ಈ ಕುರಿತು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಅಧಿಕಾರಿಗಳ ಮತ್ತು ತಾಲೂಕು ದಂಡಾಧಿಕಾರಿಗಳ ಸಭೆ ಕರೆದು, ವಿಸ್ತೃತವಾಗಿ ಚರ್ಚಿಸಿ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಒಕ್ಕೂಟದ ಸಂಚಾ ಲಕರು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ, ಈ ಕುರಿತಂತೆ ಜನವರಿ 2026ರ ಮೊದಲ ವಾರದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ವಿಸ್ತೃತವಾಗಿ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಒಕ್ಕೂಟದ ಸಂಚಾಲಕರಾದ ಬಾಬರ್ಪಾಷಾ ವಕೀಲ, ಎಸ್.ಎ.ಖಾದರ್ಸುಬಾನಿ, ಬಸವರಾಜ ಬಾದರ್ಲಿ, ಕೆ.ಜಿಲಾನಿಪಾಷಾ, ಚಿಟ್ಟಿಿ ಬಾಬು ಬೂದಿವಾಳ ಕ್ಯಾಾಂಪ್, ಶಂಕರ ಗುರಿಕಾರ, ಬಸವಂತರಾಯಗೌಡ ಕಲ್ಲೂರು, ರೆಹಮಾನ್ ಸಾಬ್, ಅಬುಲೈಸ್ ನಾಯ್ಕ್, ಬಸವರಾಜ ಹಳ್ಳಿಿ, ಸರ್ರಾಜ್ಖಾನ್ ಮತ್ತಿಿತರರು ಇದ್ದರು.
ಮಾದಕ ವಸ್ತುಗಳಿಗೆ ಕಡಿವಾಣ ಹಾಕಲು ಒತ್ತಾಯ

