ಸುದ್ದಿಮೂಲ ವಾರ್ತೆ ಕೊಪ್ಪಳ, ಜ.07:
ಜ. 5 ರಂದು ಕೇಂದ್ರ ಸಚಿವ ವಿ ಸೋಮಣ್ಣರ ಮೇಲೆ ಹಲ್ಲೆೆಗೆ ಯತ್ನ ನಡೆದಿದೆ. ಹಲ್ಲೆೆಗೆ ಯತ್ನಿಿಸಿದ ಕಾಂಗ್ರೆೆಸ್ ಮುಖಂಡರು ಹಾಗು ಕಾರ್ಯಕರ್ತರ ಮೇಲೆ ಸ್ವಯಂ ಪ್ರೇೇರಿತ ದೂರು ದಾಖಲಿಸುವಂತೆ ಜಿಲ್ಲಾಾ ಬಿಜೆಪಿ ಮುಖಂಡರಿಂದ ಕೊಪ್ಪಳ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಗಳಿಗೆ ಒತ್ತಾಾಯ ಮಾಡಲಾಗಿದೆ.
ಇಂದು ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು. ಜನವರಿ 5 ರಂದು ಹಿಟ್ನಾಾಳದಲ್ಲಿ ರೈಲ್ವೆೆ ಮೇಲ್ಸೆೆತುವೆ ಕಾಮಗಾರಿಗೆ ಚಾಲನೆ ನೀಡುವ ವೇಳೆ ಗಲಾಟೆ ನಡೆದಿದ್ದು, ಸಚಿವ ಶಿವರಾಜ ತಂಗಡಗಿ, ರಾಘವೇಂದ್ರ ಹಿಟ್ನಾಾಳ, ಕಾಂಗ್ರೆೆಸ್ ಕಾರ್ಯಕರ್ತರಿಂದ ಕಾರ್ಯಕ್ರಮಕ್ಕೆೆ ಅಡ್ಡಿಿ ಪಡಿಸಿದ್ದಾಾರೆ. ಇದೇ ವೇಳೆ ಶಿವರಾಜ ತಂಗಡಗಿ ವಿ ಸೋಮಣ್ಣರೊಂದಿಗೆ ವಾಗ್ವಾಾದ ಮಾಡಿದ್ದಾಾರೆ. ಕೇಂದ್ರ ಸಚಿವರಿಗೆ ಅವಮಾನವಾಗಿರುವ ದೂರು ದಾಖಲಿಸುವಂತೆ ಎಸ್ಪಿಿಗೆ ಒತ್ತಾಾಯಿಸಿದ್ದಾಾರೆ.
ಎಸ್ಪಿಿ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಾ ಜಿಲ್ಲಾಾ ಅಧ್ಯಕ್ಷ ಬಸವರಾಜ ದಡೇಸಗೂರು, ಶಿವರಾಜ ತಂಗಡಗಿ ತಾವು ಸಚಿವರಾಗಿದ್ದರೂ ಕೇಂದ್ರ ಸಚಿವರಿಗೆ ಕಾರ್ಯಕ್ರಮ ಮಾಡಲು ಬಿಟ್ಟಿಿಲ್ಲ. ಹಿಟ್ನಾಾಳ ಸಹೋದರರು ಹಾಗೂ ತಂಗಡಗಿ ಮಧ್ಯೆೆ ಭಿನ್ನಾಾಭಿಪ್ರಾಾಯ ಈ ಗಲಾಟೆಗೆ ಕಾರಣವಾಗಿದೆ. ಕೇಂದ್ರ ಸರಕಾರ ಅಭಿವೃದ್ಧಿಿ ಕಾರ್ಯ ಮಾಡಬಾರದು ಎಂಬ ಧೋರಣೆ ಅವರಲ್ಲಿದೆ.ಎಸ್ಪಿಿಯವರು ಸ್ವಯಂಪ್ರೇೇರಿತ ದೂರು ದಾಖಲಿಸಿಕೊಳ್ಳದಿದ್ದರೆ ಹಿರಿಯ ಅಧಿಕಾರಿಗಳ ಬಳಿ ದೂರು ನೀಡುತ್ತೇವೆ
ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಬಸವರಾಜ ಕ್ಯಾಾವಟರ್ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ನಿಸ್ಸಾಾಹಾಯಕರಾಗಿದ್ದಾಾರೆ. ಜಿಲ್ಲಾಾ ಉಸ್ತುವಾರಿ ಸಚಿವರ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿಿದ್ದಾಾರೆ. ಆ ಸಂದರ್ಭದ ವರದಿ ತರಿಸಿಕೊಳ್ಳುತ್ತೇನೆ ಎನ್ನುತ್ತಾಾರೆ. ಕಾಂಗ್ರೆೆಸ್ ಗುಂಡಾ ಪ್ರವೃತ್ತಿಿ ಗೆ ನಾವು ಹೋರಾಟ ಮಾಡುತ್ತೇವೆ ಎನ್ನುತ್ತಾಾರೆ ಎಂದರು.
ಈ ಸಂದರ್ಭದಲ್ಲಿ ಕೆ. ಜಿ. ಕುಲಕರ್ಣಿ, ಅಪ್ಪಣ್ಣ ಪದಕಿ, ಪ್ರಾಾಣೇಶ ಮಾದನೂರು, ನೀಲಕಂಠಯ್ಯ ಹಿರೇಮಠ, ಉಮೇಶ ಕುರ್ಡೇಕರ ಸೇರಿ ಹಲವರು ಇದ್ದರು.
ವಿ.ಸೋಮಣ್ಣ ಕಾರ್ಯಕ್ರಮದಲ್ಲಿ ಗಲಾಟೆ ಸ್ವಯಂಪ್ರೇರಿತ ದೂರು ದಾಖಲಿಸಲು ಒತ್ತಾಯ

