ಸುದ್ದಿಮೂಲ ವಾರ್ತೆ
ಚೇಳುರು, ನ.18: ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಚಾಕವೇಲು ಪಟ್ಟಣದಿಂದ ಕಳ್ರೋಲಪಲ್ಲಿ ರಾಮಾನುಪಡಿ, ಬೆಸ್ತಲಪಲ್ಲಿ ಮಾರ್ಗವಾಗಿ ಪಾತಪಾಳ್ಯ ಕಡೆ ಹೋಗುವ ರಸ್ತೆಯಲ್ಲಿ ಎಚ್ಚರಿಕೆ ವಹಿಸುವ ಸೂಚನಾ ಫಲಕಗಳು ಅಳವಡಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಳ್ಳಿಗಳ ಸಂಪರ್ಕ ಕಲಿಸುವ ಜಿಲ್ಲಾ ಮುಖ್ಯ ರಸ್ತೆ ಇದಾಗಿದ್ದು, ಈ ರಸ್ತೆಗೆ ಕೆಲ ತಿಂಗಳ ಹಿಂದೆ ಸುಮಾರು ಕೋಟಿಗಳ ವೆಚ್ಚದಲ್ಲಿ ಬೆಸ್ತಲಪಲ್ಲಿಯಿಂದ ಚಾಕವೇಲು ಪಟ್ಟಣದವರೆಗೂ ಡಾಂಬರೀಕರಣ ಮಾಡಲಾಗಿದೆ.
ಕಾಮಗಾರಿ ಮುಗಿದ ಬಳಿಕ ಆಯ ಹಳ್ಳಿಗಳ ಹತ್ತಿರ ಹಳ್ಳಿಗಳ ನಾಮ ಫಲಕ, ಹಾಗು ತಿರುವುಗಳಲ್ಲಿ ತಿರುವನ್ನ ಸೂಚಿಸುವ ನಾಮ ಫಲಕ ಅಳವಡಿಸಬೇಕು. ಆದರೆ, ಯಾವುದೇ ಸೂಚನಾ ಫಲಕಗಳು ಅಳವಡಿಸಿಲ್ಲ.
ಇದರಿಂದ ತಿರುವುಗಳಲ್ಲಿ ರಾತ್ರಿ ಸಮಯ ವಾಹನಗಳ ಪ್ರಯಾಣಕ್ಕೆ ತೊಂದರೆ ಆಗುತ್ತಿದೆ ಎಂದು ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಪಘಾತಗಳಿಗೆ ಲೋಕೋಪಯೋಗಿ ಇಲಾಖೆ ಕಾರಣವಾಗುತ್ತಿದೆ ಎಂದು ಇದೆ ಎಂದು ಅಸಮಾಧಾನ ಕೂಡ ಹೊರ ಹಾಕಿದ್ದಾರೆ.
ಡಾಂಬರೀಕರಣ ಮುಗಿದು ಆರೇಳು ತಿಂಗಳು ಕಳೆದರು ಇದುವರೆಗೂ ರಸ್ತೆ ಪಕ್ಕ ಬೋರ್ಡ್ಗಳು ಹಾಕಿಲ್ಲಾ, ಇದರಿಂದ ಸಂಬಂದಪಟ್ಟ ಇಲಾಖೆ ಫಲಕಗಳನ್ನ ಅಳವಡಿಸಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.