ಸುದ್ದಿಮೂಲ ವಾರ್ತೆ ರಾಯಚೂರು, ೆ.23:
ಕೇಂದ್ರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆ ಹಿಂಪಡೆಯಬೇಕು, 250 ದಿನ ಕಟ್ಟಡ ಕಾರ್ಮಿಕರಿಗೆ ಕೂಲಿ ಖಾತ್ರಿಿ ಒದಗಿಸಲು ಸೇರಿ ವಿವಿಧ ಬೇಡಿಕೆ ಈಡೇರಿಸಲು ಕಟ್ಟಡ ಕಟ್ಟುವ ಕಲ್ಲು ಕ್ವಾಾರಿ ಕಾರ್ಮಿಕರ ಸಂಘ ಪ್ರತಿಭಟನಾ ಧರಣಿ ನಡೆಸಿತು.
ನಗರದ ಟಿಪ್ಪುು ಸುಲ್ತಾಾನ ಉದ್ಯಾಾನವನದಲ್ಲಿ ಪ್ರತಿಭಟನಾ ಧರಣಿ ಕುಳಿತ ಕಾರ್ಮಿಕರು 44 ಕಾರ್ಮಿಕ ಕಾನೂನುಗಳನ್ನು ಪುನಃ ಸ್ಥಾಾಪಿಸಿ ಆಯಾ ರಾಜ್ಯ, ಪ್ರಾಾದೇಶಿಕ ಸ್ಥಿಿತಿಗಳಿಗನುಗುಣವಾಗಿ ರಚನೆಗೆ ಅವಕಾಶ ಕೊಡಬೇಕು, ಎಲ್ಲ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ವಾರ್ಷಿಕ 36 ಸಾವಿರ ಮಾಸಿಕ ವೇತನ ನಿಗದಿ ಮಾಡಬೇಕು, 60 ವರ್ಷ ಮೀರಿದ ನೈಜ ಕಟ್ಟಡ ಕಾರ್ಮಿಕರಿಗೆ ಮಾಸಿಕ 6 ಸಾವಿರ ಪಿಂಚಣಿ ನಿಗದಿ ಪಡಿಸಬೇಕು, ಬಿಲ್ಡರ್ಗಳಿಂದ ಶೇ.2ರಷ್ಟು ಕಟ್ಟಡ ತೆರಿಗೆ ನಿಗದಿಗೊಳಿಸಬೇಕು, ಸರ್ಕಾರ ಕಲ್ಯಾಾಣ ಮಂಡಳಿಗೆ ಸಮಾನವಾದ ಅನುದಾನ ಒದಗಿಸಬೇಕು, ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ಕೊಡಬೇಕು, ಮನೆ, ನಿವೇಶನ ಇಲ್ಲದವರಿಗೆ ಭೂಮಿ ಸಹಿತ ಸೌಕರ್ಯ ನೀಡಬೇಕು ಎಂದು ಕೋರಿದರು.
ಪ್ರತಿಭಟನೆಯಲ್ಲಿ ಜಿಲ್ಲಾಾಧ್ಯಕ್ಷ ಆನಂದಪ್ಪಘಿ, ಕಲ್ಲಪ್ಪಘಿ, ಚಂದ್ರಶೇಖರ, ಹನುಮಂತಪ್ಪಘಿ, ಕಲ್ಲಪ್ಪಘಿ, ನಾಗರಾಜ ಇತರರಿದ್ದರು.
ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ

