ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 22; ಸಾಹಸ ಕ್ರೀಡೆಯತ್ತ ಯುವ ಸಮೂಹ ಒಳಗೊಂಡಂತೆ ಎಲ್ಲಾ ವಯೋಮಾನದವರನ್ನು ಸೆಳೆಯಲು ಗರುಡಾ ಮಾಲ್ ನಲ್ಲಿ ಸ್ಕೈಜಂಪರ್ ಭಾಗವಾದ ರಾಷ್ಟ್ರೀಯ ಟ್ರ್ಯಾಂಪೊಲೈನ್ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮೊದಲ ಹಾಗೂ ಎರಡನೇ ಬಹುಮಾನವನ್ನು ಮುಂಬೈನ ಆದರ್ಶ್ ಬಿಹೋರ್, ರಾಹಿ ಪಕ್ಲೆ, ತೃತೀಯ ಬಹುಮಾನ ಔರಂಗಬಾದ್ ನ ಆಯುಷ್ ಮುಲೆ ಪಡೆದುಕೊಂಡರು. ಜಿಮ್ನಾಸ್ಟಿಕ್ ಫೆಡರೇಷನ್ ಆಫ್ ಇಂಡಿಯಾದ ಖಜಾಂಚಿ ಕೌಶಿಕ್ ಬಿಡಿವಾಲ ಅವರು ಬಹುಮಾನ ವಿತರಿಸಿದರು.
ಸ್ಕೈ ಜಂಪರ್ ಟ್ರ್ಯಾಂಪೊಲೈನ್ ಕ್ರೀಡೆಯನ್ನು ಜನಪ್ರಿಯಗೊಳಿಸಲು ಮತ್ತು ಪ್ರೋತ್ಸಾಹಿಸಲು ಈ ಸ್ಪರ್ಧೆ ಆಯೋಜಿಸಲಾಗಿತ್ತು. ಕ್ರೀಡಾಪಟುಗಳಾದ ಆಜಯ್ ಸಂಜಯ್ ಮುಲ್ಯ, ಅಜಯ್ ವಿಜಯ್ ಪವುಕ್ಕರ್, ತ್ರಿಶೂಲ್ ಗೌಡ, ಆದರ್ಶ್ ಆನಿಲ್, ರಾಹಿ ನಿಖಿಲ್ ,ಸೇಜಲ್ ಸುಹಾಸ್ ಜಾಧವ್, ಉದಿತಿ ಚೌಹ್ಹಣ್, ಅಭಿಜಿತ್ ಸುರೇಂದ್ರ ನಿಂಬಾಲ್ಕರ್, ಶಾಹಿ ಯಾಸಿನ್, ಸೂರಜ್, ಆನಿಲ್ ರಾಜೇಂದ್ರನ್ ಅನ್ವಿತ್ ಸಚ್ಚಿನ್ ಸೈಜಂಪರ್ ಟ್ರ್ಯಾಂಪೊಲೈನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಕೌಶಿಕ್ ಬಿಡಿವಾಲ ಮಾತನಾಡಿ, ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸ್ರೈಜಂಪ್ ಟ್ರ್ಯಾಂಪೊಲೈನ್ ಪಂದ್ಯ ಆಯೋಜಿಸಲಾಗಿತ್ತು. ಮಕ್ಕಳು,ಯುವ ಸಮುದಾಯ ಆರೋಗ್ಯ ಮತ್ತು ದೈಹಿಕ, ಮಾನಸಿಕವಾಗಿ ಸದೃಢವಾಗಿರಲು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಕೈಜಂಪ್ ಟ್ರ್ಯಾಂಪೊಲೈನ್ ವಿದೇಶಿ ಕ್ರೀಡೆಯಾಗಿದ್ದು ಇದು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿದೆ. ದೇಶ ಮತ್ತು ರಾಜ್ಯದ ಯುವ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡುವುದರಿಂದ ನಮ್ಮ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿ ಎನ್ನುವ ಕಾರಣಕ್ಕಾಗಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.