ಸುದ್ದಿಮೂಲ ವಾರ್ತೆ ಬೀದರ್, ನ.15:
ಬಿಜೆಪಿಯವರು ಇತ್ತೀಚೆಗೆ ಹುಮನಾಬಾದ್ನಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ, ಹೋರಾಟದ ದಿಕ್ಕು ತಪ್ಪಿಿಸಿ ತಾವೇ ಹೋರಾಟ ಮಾಡಿದಂತೆ ತೋರಿಸಿಕೊಳ್ಳುವ ಮೂಲಕ ಬೇರೆಯವರ ಹಂದರದಲ್ಲಿ ತಾವು ಮದುವೆಯಾಗಲು ಕೇಸರಿ ಕಲಿಗಳು ಹೊರಟಂತಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಆರೋಪಿಸಿದ್ದಾರೆ.
ಶನಿವಾರ ನಗರದ ಜಿಲ್ಲಾ ಪತ್ರಿಿಕಾ ಭವನದಲ್ಲಿ ಪತ್ರಿಿಕಾಗೋಷ್ಟಿಿ ಉದ್ದೇಶಿಸಿ ಮಾತನಾಡಿರುವ ಅವರು, ನವೆಂಬರ್ 12ರಂದು ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಲು ಮುಂದಾಗಿದ್ದ ಅನ್ನದಾತರಿಗೆ ಬೆಂಬಲ ಸೂಚಿಸುವ ನೆಪದಲ್ಲಿ ಪೋಲಿಸ್ರು ಹಾಕಿದ ಬ್ಯಾಾರಿಕೇಡ್ಗಳನ್ನು ಹಾರಿ ಗಲಾಟೆ ಮಾಡಿದಾಗ ಬಂಧಿಸದೇ ಮತ್ತೇನು ಇವರಿಗೆ ಮುತ್ತು ಕೊಡುವರೆ? ಎಂದು ಪ್ರಶ್ನೆೆ ಮಾಡಿದರು. ಪೋಲಿಸರು ನಮ್ಮನ್ನು ಸಹ ಬ್ಯಾಾರಿಕೇಡ್ನಲ್ಲೇ ತಡೆದರು. ನಾವು ಕಾನೂನು ಮುರಿದು ಮುಂದೆ ಬಂದಿಲ್ಲ. ಹಾಗಾಗಿ ನಮ್ಮನ್ನು ಬಂಧಿಸಿಲ್ಲ. ಆದರೆ ಬಿಜೆಪಿಯವರಿಗೆ ರೈತರ ಮೇಲೆ ಮೊಸಳೆ ಕನಿಕರ ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ಪರಿ ನಿಜಕ್ಕೂ ನಾಚಿಕೆ ಪಡುವ ಸಂಗತಿಯಾಗಿದೆ ಎಂದು ಹರಿಹಾಯ್ದರು.
ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲರು ಮಾತೆತ್ತಿಿದರೆ ದಮ್ಮು, ತಾಕತ್ತು ಎನ್ನುತ್ತಾಾರೆ. ನಿಮ್ಮ ದಮ್ಮು ಹಾಗೂ ತಾಕತ್ತು ವಿಷ ಉಗುಳುತ್ತಿಿರುವ ಕಾರ್ಖಾನೆಗಳನ್ನು ಬಂದ್ ಮಾಡಿಸುವಲ್ಲಿ ತೋರಿಸಿ ಹಾಗೂ ಕೇಂದ್ರ ಸರ್ಕಾರದಿಂದ ಎನ್.ಸಿ.ಡಿ.ಸಿ ಹಣ ತಂದು ಬಿ.ಎಸ್.ಎಸ್.ಕೆ ಪ್ರಾಾರಂಭಿಸಿ. ತಮ್ಮ ಅವಧಿಯಲ್ಲಿ ಮಾಡಿದ ರಸ್ತೆೆಯನ್ನು ಪುನಃ ಉದ್ಘಾಾಟಿಸಿ ನಿಮ್ಮ ಪುರುಷಾರ್ಥ ತೋರಿಸಬೇಡಿ. ಹುಡಗಿ ಬಳಿ ನಿರ್ಮಿಸಿದ 10 ಲಕ್ಷ ಮೊತ್ತದ ರಸ್ತೆೆ ಕಳಪೆ ಮಟ್ಟದಿಂದ ಕೂಡಿದೆ. ರಾಜೇಶ್ವರ, ಮೋಳಕೇರಾ, ಗಡವಂತಿ, ಬಸಂತಪುರ ಜನರು ಕಾರ್ಖಾನೆಯಿಂದ ಬಿಡುತ್ತಿಿರುವ ವಿಷಪೂರಿತ ನೀರಿನಿಂದ ನಿತ್ಯ ಪರದಾಡುತ್ತಿಿದ್ದು, ಅದನ್ನು ತಪ್ಪಿಿಸಲು ನಿಮ್ಮ ತಾಕತ್ತು ಬಳಿಸಿ ಎಂದರು.
ಎಂಎಲ್ಸಿಿ ಡಾ. ಚಂದ್ರಶೇಖರ ಪಾಟೀಲ್, ಮಾಜಿ ಎಂಎಲ್ಸಿಿ ಅರವಿಂದಕುಮಾರ ಅರಳಿ, ಅಬ್ದುಲ್ ಮನ್ನಾಾನ ಸೇಠ, ವೀರಣ್ಣ ಪಾಟೀಲ್, ಅ್ಸರಮಿಯ್ಯಾಾ, ಅಭಿಷೇಕ ಪಾಟೀಲ್, ಉಮೇಶ ಜಂಬಗಿ, ಮಲ್ಲಿಕಾರ್ಜುನ ಮಾಶೆಟ್ಟಿಿ, ದತ್ತು ಮೂಲಗೆ, ಓಂಕಾರ ತುಂಬಾ ಮತ್ತಿಿತರರು ಪತ್ರಿಿಕಾಗೋಷ್ಠಿಿಯಲ್ಲಿ ಇದ್ದರು.
ಬಿಎಸ್ಎಸ್ಕೆೆ ಏಕೆ ಆರಂಭಿಸಿಲ್ಲ ?
ವಿಧಾನ ಸಭಾ ಚುನಾವಣೆಗೂ ಮುನ್ನ ಯಡಿಯೂರಪ್ಪ, ಅಮಿತ್ ಶಾ ಅವರು ನಮ್ಮ ಸರ್ಕಾರ ಬಂದರೆ ಬಿಎಸ್ಎಸ್ಕೆೆ ಕಾರ್ಖಾನೆ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು. ಇಲ್ಲಿಯವರೆಗೆ ಆಗಿಲ್ಲ. ಅಲ್ಲದೇ 2023ರ ಚುನಾವಣೆಯಲ್ಲಿ ನಾನು ಶಾಸಕನಾದರೆ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುತ್ತೇನೆ ಹಾಗೂ ಮಲ್ಟಿಿ ಸ್ಪೇಷಾಲಿಟಿ ಆಸ್ಪತ್ರೆೆ ಆರಂಭಿಸುತ್ತೇನೆ ಎಂದು ಭರವಸೆ ನೀಡಿದರು. ಆದರೆ ಇಲ್ಲಿಯವರೆಗೆ ಶಾಸಕರು ಎಲ್ಲಿಯಾದರು ಭೂಮಿ ಕೂಡ ಗುರುತು ಮಾಡಿಲ್ಲ. ಹೀಗೆ ಜನರಿಗೆ ಸುಳ್ಳು ಭರವಸೆ ನೀಡಿದ್ದಾರೆ ಎಂದರು.

