ಇಸ್ಲಾಮಾಬಾದ್ ಡಿ.20:
ಪಾಕಿಸ್ತಾಾನದ ಮಾಜಿ ಪ್ರಧಾನಿ ಇಮ್ರಾಾನ್ ಖಾನ್ ಮತ್ತು ಅವರ ಪತ್ನಿಿ ಬುಷ್ರಾಾ ಬೀಬಿಗೆ ಪಾಕಿಸ್ತಾಾನ ನ್ಯಾಾಯಾಲಯ ತಲಾ 17 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ತೋಷಖಾನಾದ ಎರಡು ಭ್ರಷ್ಟಾಾಚಾರ ಪ್ರಕರಣಗಳಲ್ಲಿ ಕೋರ್ಟ್ ತೀರ್ಪು ನೀಡಿದೆ.
2023ರ ಆಗಸ್ಟ್ನಿಂದ ಜೈಲಿನಲ್ಲಿರುವ 73 ವರ್ಷದ ಖಾನ್ 2022ರ ಏಪ್ರಿಿಲ್ನಲ್ಲಿ ಅಧಿಕಾರದಿಂದ ಪದಚ್ಯುತಗೊಂಡ ಬಳಿಕ ಅವರ ವಿರುದ್ಧ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ತೋಷಖಾನಾದ ಎರಡು ಪ್ರಕರಣಗಳು 2021ರಲ್ಲಿ ಸೌದಿ ಸರ್ಕಾರದಿಂದ ಪಡೆದ ಉಡುಗೊರೆಗಳಿಗೆ ಸಂಬಂಧಿಸಿದ ವಂಚನೆ ಆರೋಪವನ್ನು ಒಳಗೊಂಡಿದೆ.
ಪಾಕಿಸ್ತಾಾನ ತೆಹ್ರೀೀಕ್ ಇ ಇನ್ಸಾ್ಾ ಸಂಸ್ಥಾಾಪಕ ಪ್ರಸ್ತುತ ಬಂಧನದಲ್ಲಿರುವ ರಾವಲ್ಪಿಿಂಡಿಯಾ ಅಡಿಯಾಲಾ ಜೈಲಿನಲ್ಲೇ ಪ್ರಕರಣದ ತೀರ್ಪು ವಿಶೇಷ ನ್ಯಾಾಯಾಲಯದ ನ್ಯಾಾಯಾಧೀಶ ಶಾರುಖ್ ಅರ್ಜುಮಂಡ್ ಪ್ರಕಟಿಸಿದರು.
ಖಾನ್ ಮತ್ತು ಬುಷ್ರಾ ಅವರಿಗೆ ಪಾಕಿಸ್ಥಾಾನ ದಂಡ ಸಂಹಿತೆಯ ಸೆಕ್ಷನ್ 409ರ ಅಡಿಯಲ್ಲಿ 10 ವರ್ಷಗಳ ಕಠಣಿ ಜೈಲು ಶಿಕ್ಷೆ ಮತ್ತು ಭ್ರಷ್ಟಾಾಚಾರ ತಡೆ ಕಾಯ್ದೆೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ನ್ಯಾಾಯಾಲಯವು ಇಮ್ರಾಾನ್ ಅಹ್ಮದ್ ಖಾನ್ ನಿಯಾಜಿಯ ವೃದ್ಧಾಾಪ್ಯವನ್ನು ಹಾಗೂ ಬುಷ್ಟಾಾ ಇಮ್ರಾಾನ್ ಖಾನ್ ಒಬ್ಬ ಮಹಿಳೆ ಎಂಬ ಅಂಶವನ್ನು ಪರಿಗಣಿಸಿದೆ. ಈ ಎರಡೂ ಅಂಶಗಳನ್ನು ಪರಿಗಣಿಸಿ ಕಠಿಣ ಶಿಕ್ಷೆಯನ್ನು ನೀಡದೇ ಸಾಧಾರಣ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಕೋರ್ಟ್ ವಿಚಾರಣೆ ವೇಳೆ 21 ಸಾಕ್ಷ್ಯಗಳನ್ನು ಪರಿಗಣಿಸಿದೆ ಎಂದು ತಿಳಿದು ಬಂದಿದೆ.

