ಸುದ್ದಿಮೂಲ ವಾರ್ತೆ ಬೆಂಗಳೂರು, ಅ.03:
ಅತಿವೃಷ್ಟಿಿಗೆ ತುತ್ತಾಾಗಿರುವ ಕಲ್ಯಾಾಣ ಕರ್ನಾಟಕದ ರೈತರಿಗೆ ಸರ್ಕಾರ ಮೀನಾಮೇಷ ಎಣಿಸದೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಶೀಘ್ರವೇ ನಾನೂ ಪ್ರವಾಸ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಪಕ್ಷದ ಕಚೇರಿಯಲ್ಲಿ ಶುಕ್ರವಾರ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದ ಅವರು, ಮಳೆಯಿಂದ ಕಲ್ಯಾಾಣ ಕರ್ನಾಟಕದ ಎಷ್ಟು ಪ್ರದೇಶ ಹಾನಿಗೆ ಒಳಗಾಗಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವರು 48 ತಾಸಿನಲ್ಲಿ ಮಾಹಿತಿ ನೀಡಬೇಕು. ಶೀಘ್ರದಲ್ಲೇ ನಾನೇ ಸ್ವತಃ ಕಲಬುರ್ಗಿ ಸೇರಿದಂತೆ ಮಳೆಯಿಂದ ಹಾನಿಯಾಗಿರುವ ಪ್ರದೇಶದ ಸಮೀಕ್ಷೆ ನಡೆಸಿ ವಾಸ್ತವ ಹೇಳುತ್ತೇನೆ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಾಮಿ ಅವರು ಪರಿಹಾರಕ್ಕೆೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆೆ ಪತ್ರ ಬರೆದಿದ್ದಾರೆ. ಸಾಧ್ಯವಾದರೆ ನಾನು ಕೂಡ ಸಮೀಕ್ಷೆ ನಡೆಸಿ ದೆಹಲಿಗೆ ತೆರಳಿ ಪ್ರಧಾನಿ ಅವರನ್ನು ಒತ್ತಾಾಯಿಸುತ್ತೇನೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದರು.
ಗ್ಯಾಾರಂಟಿಯಿಂದ ರಾಜ್ಯ ಬರಡು:
ಕಾಂಗ್ರೆೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾಾರಂಟಿ ಯೋಜನೆಗಳನ್ನು ಅನುಷ್ಠಾಾನಕ್ಕೆೆ ತರಲು ಮುಂದಾಗಿ ರಾಜ್ಯವನ್ನು ಬರಡು ಮಾಡಿದೆ. ಇದರಿಂದ ಹಣಕಾಸು ಸ್ಥಿಿತಿ ಹದಗೆಟ್ಟಿಿದೆ. ಹಣಕಾಸು ಸ್ಥಿಿತಿ ಹದಗೆಟ್ಟಿಿರುವ ಬಗ್ಗೆೆ ನಾನು ಹೇಳುತ್ತಿಿಲ್ಲ. ಕಾಂಗ್ರೆೆಸ್ ಶಾಸಕರೇ ಹೇಳುತ್ತಿಿದ್ದಾರೆ. ಸರ್ಕಾರದ ಖಜಾನೆಯಲ್ಲಿ ದುಡ್ಡಿಿಲ್ಲ ಎನ್ನುತ್ತಿಿದ್ದಾರೆ. ರಾಜ್ಯದಲ್ಲಿ ದೊಡ್ಡ ಮಟ್ಟದ ಅತಿವೃಷ್ಟಿಿಯಾಗಿದೆ. ಇಂತ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಸಂಪನ್ಮೂಲದಿಂದಲೇ ಪರಿಹಾರವನ್ನು ನೀಡಬೇಕು. ಆದರೆ ಸರ್ಕಾರ ಈ ವಿಚಾರದಲ್ಲಿ ಗೊಂದಲಕ್ಕೆೆ ಸಿಲುಕಿದೆ ಎಂದು ದೇವೇಗೌಡರು ಆಕ್ರೋೋಶ ವ್ಯಕ್ತಪಡಿಸಿದರು.
ಬಿಡದಿ ಟೌನ್ ಶಿಪ್ ನಿರ್ಮಾಣದ ಬಗ್ಗೆೆ ಕಾಂಗ್ರೆೆಸ್ ನಾಯಕರು ನನ್ನ ಹಾಗೂ ಎಚ್ಡಿಕೆ ವಿರುದ್ಧ ಮಾತನಾಡುತ್ತಿಿದ್ದಾರೆ. ನಾನು ’ಬೇರೊಬ್ಬರ ಹೆಸರು ಹೇಳಿ ಚರ್ಚೆ ಮಾಡುವುದಿಲ್ಲ.
ನಾನು ಆ ವಿಚಾರದಲ್ಲಿ ಯಾವುದೇ ಹೇಳಿಕೆ ಕೊಡುವುದಿಲ್ಲ. ಅದರ ಹಿಂದೆ ಯಾವ ಶಕ್ತಿಿ ಇದೆ ಎಂಬ ಚರ್ಚೆಯೂ ಬೇಡ. ನಮ್ಮದು ಸಣ್ಣ ಪ್ರಾಾದೇಶಿಕ ಪಕ್ಷ ಅದನ್ನು ಉಳಿಸಲು ಹೋರಾಟ ಮಾಡಬೇಕು ಎಂದರು.
ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕಳೆದ 20 ವರ್ಷಗಳ ಹಿಂದೆ ಚುನಾವಣೆ ಎದುರಿಸಿದ್ದೆ. ಅಲ್ಲಿಂದ ಇಲ್ಲಿವರೆಗೂ ಅವರ ಬಗ್ಗೆೆ ನಾನು ಮಾತನಾಡಿಲ್ಲ. ಈಗಲೂ ಮಾತನಾಡುವುದಿಲ್ಲ.
ಸಚಿವ ಕುಮಾರಸ್ವಾಾಮಿ ಅವರ ಆರೋಗ್ಯದಲ್ಲಿ ಸಮಸ್ಯೆೆ ಎದುರಾದ ಹಿನ್ನೆೆಲೆಯಲ್ಲಿ ನಾನು ಪಕ್ಷದ ಸಂಘಟನೆ ಮಾಡುತ್ತಿಿದ್ದೇನೆ. ಕುಮಾರಸ್ವಾಾಮಿ ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡಿಲ್ಲ. ಈಗ ಕುಮಾರಸ್ವಾಾಮಿ ಆರೋಗ್ಯ ಸಂಪೂರ್ಣ ಚೇತರಿಕೆ ಆಗಿದೆ ಮುಂದೆ ಅವರು ಪಕ್ಷ ಸಂಘಟನೆಗೆ ಬರುತ್ತಾಾರೆ. ಚನ್ನಪಟ್ಟಣ ಚುನಾವಣೆಯಲ್ಲಿ ನಿಖಿಲ್ ಸೋತ ಬಳಿಕ ಅವರು ಹೆಚ್ಚು ಓಡಾಡಿ ಪಕ್ಷ ಸಂಘಟನೆ ಮಾಡುತ್ತಿಿದ್ದಾರೆ ಎಂದರು.
ಅ.12ರಂದು ಮಹಿಳೆಯರ ಸಮಾವೇಶ
ಬೆಂಗಳೂರಿನಲ್ಲಿ ಅಕ್ಟೋೋಬರ್ 12 ರಂದು ಕನಿಷ್ಠ ಐವತ್ತು ಸಾವಿರ ಹೆಣ್ಣುಮಕ್ಕಳನ್ನು ಸೇರಿಸಿ ಶಕ್ತಿಿ ಪ್ರದರ್ಶನ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ಹೆಣ್ಣು ಮಕ್ಕಳನ್ನು ಸೇರಿಸಬೇಕು. ಆ ಮೂಲಕ ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ನಿಲ್ಲಲು ಶಕ್ತಿಿ ಇದೆ ಎಂಬುದನ್ನು ಸಾಬೀತು ಮಾಡಬೇಕು ಎಂದು ದೇವೇಗೌಡರು ಹೇಳಿದರು..
ಬಿಜೆಪಿ ಜೊತೆ ಮೈತ್ರಿಿಯಲ್ಲಿ ಬಿರುಕು ಇಲ್ಲ
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಿಯಲ್ಲಿ ಯಾವುದೇ ಬಿರುಕು ಇಲ್ಲ. ಹೀಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿಿಗೆ ಯಾವುದೇ ಆತಂಕ ಇಲ್ಲ. ಸ್ಥಳೀಯ ಸಂಸ್ಥೆೆಗಳ ಚುನಾವಣೆಯಲ್ಲಿಯೂ ಮೈತ್ರಿಿ ಮುಂದುವರಿಯುತ್ತದೆ ಎಂದು ದೇವೇಗೌಡರು ಹೇಳಿದರು.
ಬೆಂಗಳೂರಿನ ಐದು ನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮೈತ್ರಿಿಗೆ ಭಂಗ ಆಗುವುದಿಲ್ಲ. ಪ್ರಧಾನಿ ಮೋದಿ ಮತ್ತು ನನ್ನ ಸಂಬಂಧ ಯಾವುದೇ ಕಾರಣಕ್ಕೂ ಯಾರೂ ಕೂಡ ಬದಲಾವಣೆ ಮಾಡಲು ಆಗುವುದಿಲ್ಲ. ಎಂದಿಗೂ ನಾನು ಪ್ರಧಾನಿ ಮೋದಿ ಬಗ್ಗೆೆ ಲಘುವಾಗಿ ಮಾತನಾಡಿಲ್ಲ ಎಂದರು.
ಪಕ್ಷದ ಯುವ ರಾಜ್ಯಾಾಧ್ಯಕ್ಷ ನಿಖಿಲ್ ಕುಮಾರಸ್ವಾಾಮಿ ಹೋದಾಗ ಜನ ಸೇರುತ್ತಾಾರೆ. ಸ್ಥಳೀಯ ಸಮಸ್ಯೆೆ ಬಗ್ಗೆೆ ಮಾತನಾಡುತ್ತಾಾರೆ. ಆದರೆ, ನಮ್ಮ ಶಕ್ತಿಿ ಚುನಾವಣೆ ಬಂದಾಗ ಪ್ರದರ್ಶನ ಆಗುತ್ತದೆ. ಇದನ್ನು ತಪ್ಪಿಿಸಬೇಕಾಗಿದೆ. ಹಣಕಾಸಿನ ಅಡಚಣೆ ಇದ್ದರೆ ನನಗೆ ಮಾಹಿತಿ ನೀಡಿ. ನಾನು ಸಂಪೂರ್ಣ ಹೊಣೆ ಹೊರುತ್ತೇನೆ. ಆದರೆ, ಹಿಂದೆ ಬೀಳಬಾರದು. ಬೆಂಗಳೂರು ನಗರ ಪಾಲಿಕೆಯಲ್ಲಿ ಕನಿಷ್ಟ 50 ಸೀಟುಗಳನ್ನು ಗೆಲ್ಲಬೇಕು. ಇದನ್ನು ಸಾಧಿಸಿ ತೋರಿಸುತ್ತೇವೆ ಎಂದು ದೇವೇಗೌಡರು ಹೇಳಿದರು.

