ಸುದ್ದಿಮೂಲ ವಾರ್ತೆ
ಬೆಂಗಳೂರು,ಮೇ.2:ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಪ್ರಚಾರ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸಿರುವುದು ಸಂತೋಷದ ವಿಚಾರ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನಹರಿಸಿದೆ. ಆದರೆ ಜನರ ಗಮನವನ್ನು ಸಮಸ್ಯೆಗಳಿಂದ ಬೇರೆಡೆಗೆ ಎಳೆಯುವ ಪ್ರಯತ್ನಗಳಾಗುತ್ತಿವೆ. ಹೀಗಾಗಿ ಇಂದು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಯಸುತ್ತೇನೆ.
ಪ್ರಚಿ ಚುನಾವಣೆಯಲ್ಲಿ ಜನರು ತಮ್ಮ ಜೀವನ ಉತ್ತಮವಾಗಿದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ನಂತರ ಪ್ರಸ್ತುತ ಪರಿಸ್ಥಿತಿ ಮುಂದುವರಿದರೆ, ನಮ್ಮ ಹಾಗೂ ನಮ್ಮ ಮಕ್ಕಳ ಮುಂದಿನ ಜೀವನ ಸುಧಾರಣೆ ಕಾಣಲಿದೆಯೇ ಎಂದು ಕೇಳಿಕೊಳ್ಳಬೇಕು. ಈ ಎರಡು ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಪಡೆಯಬೇಕು. ಈ ಪ್ರಶ್ನೆಯನ್ನು ರಾಜ್ಯದ ಜನ ಕೇಳಿಕೊಂಡಾಗ ಅವರಿಗೆ ಬರುವ ಉತ್ತರ, ಇಲ್ಲ ಎಂದು.
ರಾಜ್ಯದ ಜನ ಬಿಜೆಪಿ ಸರ್ಕಾರವನ್ನು ಆರಿಸಿರಲಿಲ್ಲ. ಕುದುರೆ ವ್ಯಾಪಾರ, ಮೋಸ ಹಾಗೂ ಹಣಬಲದಿಂದ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಲ್ಲಿಂದ ಇಲ್ಲಿಯವರೆಗೂ ಬಿಜೆಪಿ ಹಾಗೂ ಸರ್ಕಾರದ ಗುರಿ ಹಣ ಮಾಡುವುದಾಗಿದೆ. ಹೀಗಾಗಿ ರಾಜ್ಯದಲ್ಲಿ ನಿರಂತರವಾಗಿ ಹಗರಣಗಳ ಸರಮಾಲೆ ಇದೆ. ಭೂಕಬಳಿಕೆ, ಟಿಡಿಆರ್ ಹಗರಣ, ನೇಮಕಾತಿ ಹಗರಣ, ಪಿಎಸ್ಐ ನೇಮಕಾತಿ, ನಕಲಿ ಬಿಲ್ ಹಗರಣ ಹೆಚ್ಚಾಗಿವೆ. ಬಿಜೆಪಿ ಅಧಿಕಾರದಲ್ಲಿ ಮುಂದುವರಿದರೆ ರಾಜ್ಯದ ಮಾನ ಮತ್ತಷ್ಟು ಹರಾಜಾಗಲಿದೆ.
ಶಿಕ್ಷಣ ಕ್ಷೇತ್ರದಲ್ಲಿ 75 ಸಾವಿರ ತರಗತಿ ಹಾಳಾಗಿವೆ, 328 ಶಾಲೆಗಳು ಬಾಲಕರಿಗೆ ಶೌಚಾಲಯರಹಿತವಾಗಿದೆ. ಇನ್ನು ಒಂದು ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ. ಬಿಜೆಪಿ ಕೃಷಿ ವಿವಿ ವಿದ್ಯಾರ್ಥಿಗಳಿಗೆ ಉಚಿತ ಲಾಪ್ ಟಾಪ್ ನೀಡುವ ಭರವಸೆ ನೀಡಿತ್ತು. ಆದರೆ ನೀಡಲಿಲ್ಲ. ಇನ್ನು ಆರೋಗ್ಯ ಕ್ಷೇತ್ರದ ಬಗ್ಗೆ ನೋಡುವುದಾದರೆ, ಕೋವಿಡ್ ಸಮಯದಲ್ಲಿ ಜನರ ಸಂಕಷ್ಟಕ್ಕೆ ಬಿಜೆಪಿ ಸರ್ಕಾರದ ನೆರವಿನ ಹಸ್ತ ತೀರಾ ನೀರಸವಾಗಿತ್ತು. ದುರಾಡಳಿತಕ್ಕೆ ಈ ಸಮಯ ಸಾಕ್ಷಿಯಾಗಿತ್ತು. ಇನ್ನು ಕೃಷಿ ಕ್ಷೇತ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿತ್ತು. ಆದರೆ ರೈತರು ಮತ್ತಷ್ಟು ಬಡವರು, ಸಾಲಗಾರರಾಗಿದ್ದಾರೆ. 2020-21ರ ರಾಷ್ಟ್ರೀಯ ಅಪರಾಧ ಬ್ಯೂರೋ ಅಂಕಿ ಅಂಶಗಳ ಪ್ರಕಾರ 20%ರಷ್ಟು ರೈತರ ಆತ್ಮಹತ್ಯೆ ಕರ್ನಾಟಕ ರಾಜ್ಯದವರಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ವಿಳಂಬ ಲಕ್ಷಾಂತರ ರೈತರ ಜೀವನದ ಮೇಲೆ ಪರಿಣಾಮ ಬೀರಿದೆ. ಕಬ್ಬು ಬೆಳೆಗಾರರ ಬಾಕಿ 4-5 ವರ್ಷಗಳಿಂದ ಬಾಕಿ ಉಳಿದಿದೆ.
ರೈತ ಬಂಧು ಆವರ್ತ ನಿಧಿ ಬೆಂಬಲ ಬೆಲೆ ಏನಾಯ್ತು? ಮಂಡ್ಯದಲ್ಲಿ ಆಹಾರ ಪಾರ್ಕ್, ಪ್ರತಿ ಜಿಲ್ಲೆಯಲ್ಲಿ ಸಂಜೀವಿನಿ ಆರ್ಗಾನಿಕ್ ಸ್ಟೋರ್ ಹಾಗೂ ಪಶು ಮೇವಿನ ಘಟಕ ಸ್ಥಾಪನೆ ಏನಾಯ್ತು? ಇನ್ನು ಉದ್ಯೋಗ ಕ್ಷೇತ್ರದಲ್ಲಿ ಯುವಕರಿಗೆ ವಿಶ್ವೇಶ್ವರಯ್ಯ ಉದ್ಯೋಗ ಯೋಜನೆ ಭರವಸೆ ಏನಾಯ್ತು? ಆಟೋ ಚಾಲಕರಿಗೆ ಶೇ.50% ಎಲೆಕ್ಟ್ರಿಕ್ ಆಟೋ ಸಬ್ಸಿಡಿ ಏನಾಯ್ತು? ಇನ್ನು ರಾಜ್ಯದ ಆರ್ಥಿಕತೆ ಬಹಳ ಶೋಚನೀಯವಾಗಿದೆ. ರಾಜ್ಯದ ಸಾಲದ ಪ್ರಮಾಣ 5.19 ಲಕ್ಷ ಕೋಟಿ ಆಗಿದೆ. 2020ರ ನಂತ 1258 ಕಂಪನಿಗಳು ಬಂದ್ ಆಗಿವೆ. ಇದರಿಂದ 83,191 ಉದ್ಯೋಗಗಳು ನಷ್ಟವಾಗಿವೆ. ಇನ್ನು 13 ಸಾರ್ವಜನಿಕ ಉದ್ದಿಮೆಗಳು ನಿಷ್ಕ್ರಿಯವಾಗಿವೆ. 37 ಸಾರ್ವಜನಿಕ ಉದ್ದಿಮೆಗಳು 6 ಸಾವಿರ ಕೋಟಿ ನಷ್ಟ ಅನುಭವಿಸಿವೆ. ಮೂಲಭೂತ ಸೌಕರ್ಯ ವಿಚಾರವಾಗಿ ನೇಡಿದರೆ ಕಳೆದ ಸೆಪ್ಟೆಂಬರ್ ನಲ್ಲಿ ಬಿದ್ದ ಮಳೆಗೆ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಬೆಂಗಳೂರಿನ ಮಾನ ದೇಶದ ಮುಂದೆ ಹರಾಜಾಗಿತ್ತು. ಇದರಿಂದ ಅನೇಕ ಕಂಪನಿಗಳು ಬೇರೆ ರಾಜ್ಯಗಳತ್ತ ವಲಸೆ ಹೋಗುವಂತಾಗಿದೆ.
ಇನ್ನು ಕರ್ನಾಟಕವನ್ನು ಧರ್ಮದ ಹೆಸರಿನಲ್ಲಿ ಕೋಮು ಸಂಘರ್ಷದ ಪ್ರಯೋಗಲಾಯವನ್ನಾಗಿ ಮಾಡಿಕೊಂಡು ಸಮಾಜ ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಹಿಜಾಬ್, ಹಲಾಲ್, ಲವ್ ಜಿಹಾದ್ ಕುರಿತು ಕಾಲಹರಣ ಮಾಡಿದ್ದಾರೆ. ಐದು ಜಿಲ್ಲೆಗಳಲ್ಲಿ ವಾಲ್ಮೀಕಿ ಭವನ, ಈಡಿಗ ಹಾಗೂ ಬಿಲ್ಲವ ಸಮುದಾಯಗಳಿಗೆ ಕ್ಷೇಮಾಭಿವೃದ್ಧಿಗೆ ನಾರಯಣ ಕ್ಷೇಮಾಭಿವೃದ್ಧಿ ಮಂಡಳಿ, 400 ಕೋಟಿ ಮೊತ್ತದ ವೃದ್ಧಾಶ್ರಮ ಉನ್ನತೀಕರಣ ಯೋಜನೆಗಳು ಏನಾದವು?
ಇನ್ನು ಡಬಲ್ ಇಂಜಿನ್ ಸರ್ಕಾರ ಅನಾಹುಗಳನ್ನು ಮಾಡಿವೆ. ಈ ಡಬಲ್ ಇಂಜಿನ್ ಸರ್ಕಾರ ನಿರುದ್ಯೋಗ ಪ್ರಮಾಣವನ್ನು 7.8%ರಷ್ಟು ಏರಿಕೆ ಮಾಡಿದೆ. ಕಾರ್ಮಿಕರ ಭಾಗವಹಿಸುವಂಕಿ ಪ್ರತಿ ತಿಂಗಳು ಇಳಇಕೆಯಾಗುತ್ತಿದೆ. ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಾವಾಗಿದೆ. ರಾಜ್ಯವನ್ನು ಮೋದಿ ನಿಯಂತ್ರಣಕ್ಕೆ ನೀಡಿ ಎಂದು ಗೃಹಮಂತ್ರಿಗಳು ಹೇಳುತ್ತಾರೆ. ಪ್ರಧಆನಿಮಂತ್ರಿಗಳು ಎಲ್ಲಾ ರಾಜ್ಯ ಹಾಗೂ ಪಾಲಿಕೆಗಳನ್ನು ಆಳ್ವಿಕೆ ಮಾಡುತ್ತಾರಾ? ದೇಶವನ್ನು ಸರ್ವಾಧಿಕಾರಿ ಆಡಳಿತಕ್ಕೆ ಕರೆದುಕೊಂಡು ಹೋಗಲಾಗುತ್ತಿದೆಯೇ? ಕನ್ನಡ ಸಂಸ್ಕೃತಿ, ಪರಂಪರೆ, ಜೀವನಶೈಲಿಯನ್ನು ಒಬ್ಬ ವ್ಯಕ್ತಿ ನಿಯಂತ್ರಿಸಲು ಸಾಧ್ಯವಿಲ್ಲ. ಪ್ರತಿ ರಾಜ್ಯಗಳು ಅದರದೇ ಆದ ಭಾಷೆ ಹಾಗೂ ಸಂಸ್ಕೃತಿ ಹೊಂದಿದ್ದು, ಒಬ್ಬ ವ್ಯಕ್ತಿ ನಿಯಂತ್ರಣಕ್ಕೆ ನೀಡುವುದು ಸರಿಯಲ್ಲ. ಇನ್ನು ಗೃಹಮಂತ್ರಿಗಳು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಗಳಾಗುತ್ತವೆ ಎಂಬ ಹೇಳಿಕೆ ನೀಡಿರುವುದು ಆಘಾತಕಾರಿ ಸಂಗತಿಯಾಗಿದೆ.
ಇನ್ನು ಬಿಜೆಪಿ ನಾಯಕರು ನಮಗೆ ಮುಸಲ್ಮಾನರ ಮತ ಬೇಡ ಎಂದು ಹೇಳುತ್ತಾರೆ. ಇದು ಕನ್ನಡಿಗರ ಅಸ್ಮಿತೆಗೆ ಧಕ್ಕೆಯಾಗಿದೆ. ಇದು ರಾಜ್ಯದ ಭವಿಷ್ಯಕ್ಕೆ ಮಾರಕವಾಗಿದೆ. ಕರ್ನಾಟಕ ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ಅಗ್ರ ಸ್ಥಾನಗಳಲ್ಲಿ ಕಾಣಿಸಿಕೊಂಡಿಲ್ಲ. ತಲಾದಾಯದಲ್ಲಿ 27 ರಾಜ್ಯಗಳ ಪೈಕಿ ಕರ್ನಾಟಕ 14ನೇ ಸ್ಥಾನದಲ್ಲಿದೆ. ಶಿಕ್ಷಣದಲ್ಲಿ 30 ರಾಜ್ಯಗಳ ಪೈಕಿ 20ನೇ ಸ್ಥಾನ, ಪರಿಸರ ವಿಚಾರದಲ್ಲಿ 30 ರಾಜ್ಯಗಳ ಪೈಕಿ 19-25 ಮಧ್ಯೆ ಸ್ಥಾನಪಡೆದಿದೆ. ಕರ್ನಾಟಕ ಉತ್ತಮ ಭವಿಷ್ಯ ಹೊಂದಬೇಕಿದೆ. ಬಿಜೆಪಿ ರಾಜ್ಯದ ಭವಿಷ್ಯಕ್ಕೆ ಮಾರಕವಾಗಿದ್ದು, ಈ ಬಾರಿ ಮತದಾರರು ಬದಲಾವಣೆಗೆ ಮತ ಹಾಕಬೇಕಿದೆ.