ಬೆಂಗಳೂರು,ಆ.23:ರಾಜಾಜಿನಗರ ವಿಧಾನಸಭಾ ಕ್ಷೇತ್ರ:ಶ್ರೀ ರಾಮ ಸೇವಾ ಮಂಡಳಿ ರಾಜಾಜಿನಗರ, ಶ್ರೀರಾಮಮಂದಿರ ದೇವಸ್ಥಾನ ಅವರಣದಲ್ಲಿ 63ಅಡಿ ಶ್ರೀ ರಾಮಾಂಜನೇಯರ ಬೃಹತ್ ಪ್ರತಿಮೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಹರಿಹರಪುರ ಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ, ಸಿದ್ದಗಂಗಾ ಮಠ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಅಮೃತ ಹಸ್ತದಿಂದ ಶಂಕುಸ್ಥಾಪನೆ ನೇರವೆರಿತು.
ಮುಖ್ಯ ಅತಿಥಿಗಳಾಗಿ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ರಶ್ಮಿ ರವಿಕಿರಣ್, ಸಮಾಜ ಸೇವಕರಾದ ಹೆಚ್.ಎಂ.ಕೃಷ್ಣಮೂರ್ತಿ, ಶ್ರೀರಾಮ ಸೇವಾ ಮಂಡಳಿ ಅಧ್ಯಕ್ಷರಾದ ಕೆ.ಎಸ್.ಶ್ರೀಧರ್ ರವರು ಭಾಗವಹಿಸಿದ್ದರು.
ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮೀಜಿ ಮಾತನಾಡಿ ಭಗವಾನ್ ಶ್ರೀ ರಾಮಚಂದ್ರ ಭಾರತದ ಆಸ್ಮಿತೆ.
ಲಕ್ಷಾಂತರ ವರ್ಷಗಳಿಂದ ಎಲ್ಲರ ಹೃದಯದಲ್ಲಿ ರಾಮನ ಆದರ್ಶವಿದೆ.
ಶ್ರೀರಾಮ ಎಂದರೆ ಸಕಲ ದೈವ ಗುಣಗಳವುಳ್ಳ ಮೂರ್ತಿ ಸ್ವರೂಪವಾಗಿದೆ. ರಾಷ್ಟ್ರಪಿತ ಮಹಾತ್ಮಗಾಂಧಿ ಹಲವಾರು ಬಾರಿ ರಾಮರಾಜ್ಯವಾಗಬೇಕು ಎಂದು ಹೇಳಿದ್ದರು.
ರಾಮ ಧರ್ಮದ ಪ್ರತೀಕ
ಧರ್ಮ ಎಂದರೆ ಸತ್ಯ ಹೇಳುವುದು, ಸಾಮಾನತೆಯಿಂದ ಬದುಕುವುದು, ಪರೋಪಕಾರ ದಯೆ, ಕ್ಷಮೆಯಿಂದ ಬದುಕುವುದು ಒಟ್ಟಾಗಿ ಸೇರಿಸಿದರೆ ಶ್ರೀ ರಾಮನಾಗುತ್ತಾನೆ ಎಂದರು.
ಸಿದ್ದಲಿಂಗಾ ಸ್ವಾಮೀಜಿ ಮಾತನಾಡಿ, ತತ್ವ, ನಿತಿಯಿಂದ ಮನುಷ್ಯ ಬದುಕಬೇಕು ಎಂದರೆ ಶ್ರೀ ರಾಮನ ಆದರ್ಶಗುಣಗಳು ಆಳವಡಿಸಿಕೊಳ್ಳಬೇಕು. ವಿಜ್ಞಾನ, ಜ್ಞಾನ ಎಷ್ಟೆ ಬೆಳವಳಿಗೆ ಯಾದರು, ದೈವದ ಆಶೀರ್ವಾದ ಇರಬೇಕು ಎಂದು ಹೇಳಿದರು.
ಸಾವಿತ್ರಿ ಸುರೇಶ್ ಕುಮಾರ್, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮೋಹನ್ ಕುಮಾರ್, ಜಯರತ್ನ, ದೀಪಾ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.