ಸುದ್ದಿಮೂಲವಾರ್ತೆ
ಹೊಸಕೋಟೆ, ಆ.27: ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ನಡೆದ ಚುನವಣೆಯಲ್ಲಿ 8 ಸ್ಥಾನ ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ,4 ಸ್ಥಾನ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಒಟ್ಟು362 ಸದಸ್ಯರನ್ನು ಹೊಂದಿರುವ ನೆಲವಾಗಿಲು ಎಂಪಿಸಿಎಸ್ನ 12 ನಿರ್ದೇಶಕರ ಆಯ್ಕೆಗೆ ಚುನಾವಣೆಯನ್ನು ನಡೆಸಲಾಯಿತು. ಚುನಾವಣೆಗೆ ಬಿಜೆಪಿ ಬೆಂಬಲಿತ 12, ಕಾಂಗ್ರೆಸ್ ಬೆಂಬಲಿತ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ 8. ಬಿಜೆಪಿ ಬೆಂಬಲಿತ 4 ಸದಸ್ಯರು ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಗೆಲುವನ್ನು ಸಾಧಿಸಿದರು.
ನೂತನ ನಿರ್ದೇಶಕರುಗಳಾಗಿ ಗಿರೀಶ್, ಎನ್.ಜೆ.ನಾಗೇಶ್, ಎನ್.ಮಂಜುನಾಥ್, ನಂಜುಂಡೇಶ್ವರ, ರಾಕೇಶ್, ಎನ್.ಎಂ.ಸತೀಶ್, ಎಸ್.ಎನ್.ಭೀರೇಶ್, ಭಾರತಿ, ಉಮಾ, ಎಸ್.ಆರ್.ಭೀರೇಶ್ ಕುಮಾರ್, ಎಸ್.ಸಿ.ಮೂರ್ತಿ, ಎನ್.ಎಂ.ಕಿರಣ್ ಚುನಾವಣೆಯಲ್ಲಿ ಗೆಲುವು ಸಾಧಿಸಿ ಆಯ್ಕೆಯಾದರು.
ನೂತನ ನಿರ್ದೇಶಕರನ್ನು ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಅಭಿನಂದಿಸಿ ಮಾತನಾಡಿ, ಗೆಲುವು ಸಾಧಿಸಿರುವ ಎಲ್ಲಾ ನಿರ್ದೇಶಕರು ಪಕ್ಷಾತೀತವಾಗಿ ಹಾಲು ಉತ್ಪಾದಕರ ಹಿತವನ್ನು ಕಾಪಾಡುವ ಕೆಲಸ ಆಗಬೇಕು. ಸಾಕಷ್ಟು ಡೈರಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಪ್ರಶ್ನೆ ಮಾಡಲು ನಿರ್ದೇಶಕರು ಮುಂದೆ ಬರುವುದಿಲ್ಲ. ಮುಖ್ಯವಾಗಿ ಸಭೆಗೆ ನಿರ್ದೇಶಕರು ಹಾಜರಾಗುವುದಿಲ್ಲ. ಆದ್ದರಿಂದ ನಿರ್ದೇಶಕರು ಪ್ರತಿ ಸಭೆಗೆ ಆಗಮಿಸಿ ಡೈರಿ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಬೇಕು. ಹೈನು ಸಾಕಾಣಿಕೆದಾರರ ಅಭಿವೃದ್ದಿಗೆ ಸರ್ಕಾರಗಳು ಸಾಕಷ್ಟು ವಿಶೇಷ ಯೋಜನೆಗಳನ್ನು ರೂಪಿಸುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಸರ್ಕಾರದ ಯೋಜನೆಗಳನ್ನು ನಿರ್ದೇಶಕರು ಹಾಲು ಉತ್ಪಾದಕರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಆಗಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರ್ಗೌಡ, ಹಾಪ್ಕಾಮ್ಸ್ ನಿರ್ದೇಶಕ ಎಂ.ಬಿ. ವೆಂಕಟೇಶ್, ಎಸ್ಎಫ್ಸಿಎಸ್ ಅಧ್ಯಕ್ಷ ಎಸ್. ಮಂಜುನಾಥ್, ನಿರ್ದೇಶಕರಾದ ಎನ್.ಡಿ.ರಮೇಶ್, ನಾರಾಯಣಗೌಡ, ಎ.ಆರ್. ಕೃಷ್ಣಪ್ಪ, ಚುನಾವಣಾಕಾರಿ ಶಿವಕುಮಾರ್ ಡೈರಿ ಕಾರ್ಯದರ್ಶಿ ಜಯಣ್ಣ, ಗ್ರಾಪಂ ಸದಸ್ಯ ಶೋಭಾನಾಗೇಶ್, ಮಧುಸೂದನ್, ಸೊಣ್ಣೇಗೌಡ, ಗ್ರಾಪಂನ ಮಾಜಿ ಅಧ್ಯಕ್ಷ ಚಂದ್ರಪ್ಪ, ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿದರು.