ಸುದ್ದಿಮೂಲ ವಾರ್ತೆ
ಕೆ.ಆರ್.ಪುರ: ಅ.17:ವೈಟ್ ಫೀಲ್ಡ್ ನ ಕಿಂಡರ್ ಆಸ್ಪತ್ರೆಯು ಆಪರೇಷನ್ ಸ್ಮೈಲ್ ಮತ್ತು ಇಂಗಾ ಹೆಲ್ತ್ ಫೌಂಡೇಶನ್ ಸಹಯೋಗದೊಂದಿಗೆ “ದಿ ಫ್ಯೂಚರ್ ಆಫ್ ಸ್ಮೈಲ್ಸ್ ಮಿಷನ್” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕರ್ನಾಟಕದ ವಿವಿಧ ಪ್ರದೇಶಗಳಿಂದ ಆಗಮಿಸಿದ, ಆರ್ಥಿಕವಾಗಿ ಹಿಂದುಳಿದ 76 ಕ್ಕೂ ಅಧಿಕ ಮಕ್ಕಳಿಗೆ ಉಚಿತ ಸೀಳು ತುಟಿ ಮತ್ತು ಸೀಳು ಅಂಗುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅಕ್ಟೋಬರ್ 8 ರಿಂದ ಮಕ್ಕಳಿಗೆ ಸ್ಕ್ರೀನಿಂಗ್ ಮತ್ತು ಸರ್ಜಿಕಲ್ ಕೇರ್ ನಡೆಸಿ, ಶಸ್ತ್ರಚಿಕಿತ್ಸೆ ಮತ್ತು ನಂತರದ ಆರೈಕೆ ಮಾಡಲಾಗಿದೆ. ಒಟ್ಟು 140 ಮಕ್ಕಳು ಸಮಗ್ರ ವೈದ್ಯಕೀಯ ಪರೀಕ್ಷೆಗೆ ಒಳಗಾದರು.
ಕಿಂಡೋರಮಾ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ನ ಅಧ್ಯಕ್ಷ ಡಾ.ವಿ.ಕೆ.ಪ್ರದೀಪ್ ಕುಮಾರ್ ಮಾತನಾಡಿ, ಶಸ್ತ್ರಚಿಕಿತ್ಸಾ ಶಿಬಿರದ ಮೂಲಕ 76 ಮಕ್ಕಳು ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಪಡೆದಿದ್ದಾರೆ. ಭಾರತದಾದ್ಯಂತ ವೈದ್ಯಕೀಯ ಮತ್ತು ವೈದ್ಯಕೀಯೇತರ ಸ್ವಯಂಸೇವಕರ ಬಹುಶಿಸ್ತೀಯ ತಂಡವನ್ನು ಒಳಗೊಂಡಿತ್ತು. ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ಮಕ್ಕಳ ವೈದ್ಯರು, ದಾದಿಯರು, ವಾಕ್ ಚಿಕಿತ್ಸಕರು, ದಂತವೈದ್ಯರು ಮತ್ತು ಮನೋ ಆರೈಕೆ ಒದಗಿಸುವವರು ಈ ಮಕ್ಕಳ ತಮ್ಮ ನ್ಯೂನ್ಯತೆಯನ್ನ ಹೋಗಲಾಡಿಸಿಕೊಳ್ಳುವಲ್ಲಿ ಪ್ರಮುಖವಾಗಿ ನೆರವಾಗಿದ್ದಾರೆ” ಎಂದರು.
ಭಾರತದ ಕಿಂಡರ್ ಗ್ರೂಪ್ನ ಸಿಇಒ ರಂಜಿತ್ ಕೃಷ್ಣನ್, ಕಾರ್ಯನಿರ್ವಾಹಕ ನಿರ್ದೇಶಕ ಅಭಿಷೇಕ್ ಸೇನ್ಗುಪ್ತಾ, ರಾಮ್ ರಂಗರಾಜನ್ ಇದ್ದರು.