ಸುದ್ದಿಮೂಲ ವಾರ್ತೆ
ಆನೇಕಲ್, ಸೆ. 23 : ತಾಲ್ಲೂಕಿನ ಗಡಿಭಾಗ ವಣಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ರಾಜಲಾಂಛನ ಸಂಸ್ಥೆ ಹಾಗೂ ಅಂಬಿಕಾ ಡೆಂಟಲ್ ಕೇರ್ ವತಿಯಿಂದ ಉಚಿತ ದಂತ ತಪಾಸಣಾ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಪಾಸಣೆಯಲ್ಲಿ ಶಾಲೆಯ 60 ಮಕ್ಕಳು ಹಾಗೂ ಗ್ರಾಮಸ್ಥರು ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು.
ಅಂಬಿಕಾ ಡೆಂಟಲ್ ಕೇರ್ ಡಾ.ಶಶಿಕಿರಣ್ ಮಾತನಾಡಿ, ಮಕ್ಕಳು ಪ್ರತಿ ದಿನ ಹಲ್ಲು ಉಜ್ಜಬೇಕು.ರಕ್ತಸ್ರಾವ ಅದಾಗ ತಂದೆತಾಯಿಗೆ ತಿಳಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು..ಸಿಹಿ ತಿನಿಸುಗಳನ್ನ ತಿಂದ ತಕ್ಷಣ ಬಾಯಿಗೆ ನೀರು ಹಾಕಿ ಚೆನ್ನಾಗಿ ಸ್ವಚ್ಚಗೊಳಿಸುವಂತೆ ಹೇಳಿದರು.
ರಾಜಲಾಂಛನ ಜಿಗಣಿ ಘಟಕದ ಅಧ್ಯಕ್ಷರಾದ ತೆಲಗರಹಳ್ಳಿ ಗಣೇಶ್ ಮಾತನಾಡಿ, ಪ್ರತಿ ಗ್ರಾಮದಲ್ಲೂ ಉಚಿತ ದಂತ ತಪಾಸಣಾ ಘಟಕದ ಆರಂಭಿಸುವ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಅರುಣಾ, ಘಟಕದ ಅಧ್ಯಕ್ಷ ಸೋಮಶೇಖರ್ ಸೇರಿದಂತೆ ಶಾಲೆಯ ಸಹ ಶಿಕ್ಷಕರು ಭಾಗವಹಿಸಿದ್ದರು.