ಸುದ್ದಿಮೂಲ ವಾರ್ತೆ
ತುಮಕೂರು, ಏ.5: ಡಾ.ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಯವರ 116 ನೇ ಹುಟ್ಟು ಹಬ್ಬದ ಪುಣ್ಯ ಸ್ಮರಣೆ ಪ್ರಯುಕ್ತ ಶ್ರೀ ಸಿದ್ದಗಂಗಾ ಮಠದಲ್ಲಿ 116 ಮಕ್ಕಳಿಗೆ ಉಚಿತ ನಾಮಕರಣ ಕಾರ್ಯಕ್ರಮ ನಡೆಯಿತು.
ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಜಂಗಮ ಮಠ ಚಕ್ರಭಾವಿ ಶ್ರೀ ಸಿದ್ದಲಿಂಗ ಸ್ವಾಮಿಗಳು ಕಾರ್ಯಮದಲ್ಲಿದ್ದ ಮಕ್ಕಳ ತಂದೆ ತಾಯಿಯರಿಗೆ ಶ್ರೀಗಳ ಸ್ಮರಣೆಯ ಭಾಗ್ಯಶಾಲಿಗಳು ಎಂದರು ಮತ್ತು ಶ್ರೀ ಗಳ ಕಾಲಾವಧಿ ಸ್ಮರಿಸಿ ನಾಮಕರಣಾರ್ತಿಗಳಿಗೆ ಆಶೀವರ್ಚನ ಮಾಡಿದರು.
ಡಾ.ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಅನ್ನದಾನ ಟ್ರಸ್ಟ್ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 120 ಕ್ಕೂ ಹೆಚ್ಚು ಸಲ ರಕ್ತದಾನ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅವಾರ್ಡಿ ಆದ ಮಧುರಾ ಆಶೋಕ್ ಅವರು ಈ ದಿನ ಸಂತರ ದಿನ ನಾಮಕರಣಗೊಂಡ ಮಕ್ಕಲ್ಲಿ ಶ್ರೀಗಳ ಭಾವವನ್ನು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಹಕಾರ ಇಲಾಖೆಯ ಜಂಟಿ ರಿಜಿಸ್ಟ್ರಾರ್ ಲಕ್ಷ್ಮೀಪತಯ್ಯ ಮಾತನಾಡಿ, ಶ್ರೀ ಸಿದ್ದಗಂಗಾ ಮಠ ಭೂ ಮಂಡಲದ ತಪೋಭೂಮಿ. ಸದ್ದಿಲ್ಲದೇ ಸಾಧನೆ ಗೈದ ಸಂತರ ಸಂತ ಶ್ರೀಗಳ ಆಶೀರ್ವಾದ ನಾಮಕರಣಾರ್ಥಿಗಳಿಗೂ ಹಾಗೂ ಎಲ್ಲರಿಗೂ ಲಭಿಸಲಿ ಎಂದರು.
ವಕ್ಫ್ ಬೋರ್ಡ್ನ ಬೆಂಗಳೂರು ಗ್ರಾಮಾಂತರ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಕ್ರಮ್ ಪಾಶ ಮತ್ತು ಕರುನಾಡ ರೈತ ಸಂಘದ ಅಧ್ಯಕ್ಷರಾದ ಮಹಬೂಬ್ ಪಾಶ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಜೈರಾಜ್, ಮಹಾದೇವಯ್ಯ ಹಾಗೂ ರೈಲು ಅಚ್ಚು ಗಾಲಿ ಕಾರ್ಖಾನೆಯ ಕಾರ್ಮಿಕರ ಗೃಹ ಕೋ ಆಪರೇಟಿವ್ ಅಧ್ಯಕ್ಷರಾದ ರಮೇಶ ಮತ್ತು ಇತರ ಮಠಾಧೀಶರುಗಳು, ಟ್ರಸ್ಟ್ನ ಕಾರ್ಯಾಧ್ಯಕ್ಷ ಜಯಣ್ಣ ಉಪಸ್ಥಿತರಿದ್ದರು.