ಸುದ್ದಿಮೂಲ ವಾರ್ತೆ ಮಾನ್ವಿ, ಜ.04:
ಸೌಹಾರ್ದ ಸಹಕಾರಿ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಕಲಬುರ್ಗಿ ಪ್ರಾಾಂತೀಯ ಕಚೇರಿ, ಶ್ರೀ ವಿರೂಪಾಕ್ಷೇಶ್ವರ ಪತ್ತಿಿನ ಸೌಹಾರ್ದ ಸಹಕಾರಿ ಸಂಘ ಮಾನ್ವಿಿ, ಲಯನ್ಸ್ ಕ್ಲಬ್ ಮಾನ್ವಿಿ ಹಾಗೂ ಕೆ. ಪಿ. ಎಸ್. ವಿ. ಎಸ್ ಆಯುರ್ವೇದಿಕ್ ಕಾಲೇಜು ಮಾನ್ವಿಿ ಇವರ ಸಹಯೋಗದಲ್ಲಿ ಸಹಕಾರಿ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾನ್ವಿಿ ಪಟ್ಟಣದ ಶ್ರೀ ವಿರೂಪಾಕ್ಷೇಶ್ವರ ಸಹಕಾರಿ ಸೌಧದಲ್ಲಿ ಹಮ್ಮಿಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಆರ್. ತಿಮ್ಮಯ್ಯ ಶೆಟ್ಟಿಿ ಶಿಬಿರ ಉದ್ಘಾಾಟಿಸಿ ಮಾತನಾಡಿದರು.
ಬ್ಯಾಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು, ತಮ್ಮ ದೈನಂದಿನ ಕೆಲಸ ಕಾರ್ಯಗಳ ಒತ್ತಡದಿಂದಾಗಿ ತಮ್ಮ ಆರೋಗ್ಯದ ಕಡೆ ಗಮನ ಹರಿಸುವುದು ಕಡಿಮೆ. ಸಿಬ್ಬಂದಿಗಳು ತಮ್ಮ ಅರೋಗ್ಯ ಕಾಪಾಡಿಕೊಳ್ಳುವುದೇ ನಿಜವಾದ ಸಂಪತ್ತು ಎಂದು ತಿಳಿಸಿದರು.
ಅಧ್ಯಕ್ಷತೆ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಹಿಳಾ ತಜ್ಞೆ ವೈದ್ಯೆೆ ಡಾ. ರೋಹಿಣಿ ಮಾನ್ವಿಿಕರ್, ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಾಚಾರ್ಯ ಡಾ. ಜೀವನೇಶ್ವರಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ನಾಗರಾಜ ಉಪಸ್ಥಿಿತರಿದ್ದರು.
ಈ ಶಿಬಿರದಲ್ಲಿ ಮಾನ್ವಿಿ ಮತ್ತು ಸಿರವಾರ ತಾಲ್ಲೂಕಿನ ಸೌಹಾರ್ದ ಸಹಕಾರಿಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ, ಶಿಬಿರದ ಪ್ರಯೋಜನ ಪಡೆದರು.
ಮಾನ್ವಿ: ಸಹಕಾರಿ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ

