ಸುದ್ದಿಮೂಲ ವಾರ್ತೆ
ಕೆಜಿಎಫ್, ಸೆ.1: ಡಾ. ಶಿವಾಸ್ ಆಸ್ಪತ್ರೆ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಬೇತಮಂಗಲದ ಶ್ರೀ ರಾಘವೇಂದ್ರ ಆಸ್ಪತ್ರೆಯಲ್ಲಿ ಉಚಿತ ಮೂಳೆ ಮತ್ತು ಕೀಲು ತಪಸಣೆ ಶಿಬಿರವನ್ನು ಹಮಿಕೊಳ್ಳಲಾಗಿತ್ತು.
ಪಟ್ಟಣದ ಕೆಜಿಎಫ್ ಮುಖ್ಯರಸ್ತೆಯ ಬಳಿ ಇರುವ ಶ್ರೀ ರಾಘವೇಂದ್ರ ಆಸ್ಪತ್ರೆ ಮತ್ತು ಡಾ, ಶಿವಾಸ್ ಆಸ್ಪತ್ರೆ ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಮೂಳೆ ಮತ್ತು ಕೀಲು ತಪಸಣೆ ಶಿಬಿರವನ್ನು ಆಸ್ಪತ್ರೆಯ ಮಾಲೀಕರಾದ ಡಾ, ಮಲ್ಲೇಶ್ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ವೇಳೆ ಮಾತನಾಡಿದ ಡಾ. ಮಲ್ಲೇಶ್, ಗ್ರಾಮೀಣ ಪ್ರದೇಶಗಳಲ್ಲಿ ವಯೋವೃದ್ದರು ಮೂಳೆ ಮತ್ತು ಕೀಲು ಸಮಸ್ಯೆಯಿಂದ ನೋವು ಅನುಭವಿಸುತ್ತಿರುತ್ತಾರೆ, ಆದುದರಿಂದ ಬಡವರಿಗೆ ಉಪಯುಕ್ತವಾಗಲಿ ಎಂಬ ಉದ್ದೇಶದಿಂದ ಈ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದರು.
ಸಾರ್ವನಿಕರು ಮೂಳೆ ವಿರೂಪತೆಯ ತಪಾಸಣೆ, ಮೂಳೆ ಮತ್ತು ಕೀಲು ನೋವು ತಪಾಸಣೆ, ಶಸ್ತ್ರ ಚಿಕಿತ್ಸೆಯ ನಂತರದ ನೋವಿನ ತಪಾಸಣೆ, ಕೀಲು ವಾಯು ನೋವಿನ ತಪಾಸಣೆ, ಮೂಳೆ ಮುರಿತದ ಚಿಕಿತ್ಸೆ, ಮುಂತಾದ ಸಮಸ್ಯೆಗಳಿಗೆ ಸಾರ್ವಜನಿಕರು ನುರಿತ ವೈದ್ಯತಜ್ಙರಿಂದ ಸಲಹೆ ಪಡೆದರು.
ಈ ಸಂದರ್ಭದಲ್ಲಿ ಡಾ. ಶಿವಪ್ರಸಾದ್, ಡಾ,ರಾಹುಲ್, ಡಾ.ಪ್ರತಿಭಾ, ಸಿಬ್ಬಂದಿ ವೀಣಾ, ಸೋನಿಯಾ, ಆರತಿ, ಸೇರಿದಂತೆ ಸಾರ್ವನಿಕರು ಶಿಬಿರದಲ್ಲಿ ಭಾಗಿಯಾಗಿದ್ದರು.