ಸುದ್ದಿಮೂಲ ವಾರ್ತೆ
ಬೆಂಗಳೂರು ಮಾ,20: ಬೆಂಗಳೂರು ನಗರದ ಮಾರತ್ ಹಳ್ಳಿಯ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ವೀರಭದ್ರಸ್ವಾಮಿ ಉಚಿತ ವಿದ್ಯಾರ್ಥಿ ವಸತಿ ಶಾಲೆ ವತಿಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವಸತಿ ಶಾಲೆಗೆ ಪ್ರವೇಶಾತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಶ್ರೀ ಷ.ಬ್ರ. ಡಾ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಗ್ರಾಮೀಣ ಪ್ರದೇಶದ ಎಲ್ಲಾ ವರ್ಗದ ಬಡಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಜ್ಜಲ ಭವಿಷ್ಯವನ್ನು ರೂಪಿಸಿ, ತನ್ಮೂಲಕ ಸುಸಂಸ್ಕೃತ ರಾಷ್ಟ್ರನಿರ್ಮಾಣದ ಸತ್ಸಂಕಲ್ಪ ಮಾಡಿದ್ದಾರೆ. ಆದರಿಂದ 6 ರಿಂದ 10 ನೇ ತರಗತಿಯವರೆಗು ಓದಲಿಚ್ಚಿಸುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಯೋಗ, ಸಂಗೀತ,ಮತ್ತು ಕ್ರೀಡಾ ಶಿಕ್ಷಣವನ್ನೊಳಗೊಂಡ ವಸತಿ ಶಾಲೆಯನ್ನು ಪ್ರಾರಂಭಿಸಲಾಗಿದೆ
ಆಂಗ್ಲ ಮಾಧ್ಯಮದಲ್ಲಿ ಅಧ್ಯಯನ ಮಾಡಲು ಇಚ್ಚಿಸುವ ಗ್ರಾಮೀಣ ಪ್ರದೇಶದ ಎಲ್ಲಾ ವರ್ಗದ ಬಾಲಕ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ 07 ರಂದು ಬೆಳಗ್ಗೆ 9 ಘಂಟೆಗೆ ಬೆಂಗಳೂರಿನ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದಲ್ಲಿ ನಡೆಸಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಇತ್ತೀಚಿನ ಎರಡು ಭಾವಚಿತ್ರ, ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ಗಳೊಂದಿಗೆ ನೇರವಾಗಿ ಪ್ರವೇಶ ಪರೀಕ್ಷೆಗೆ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9738245665, 9448670372 ಸಂಖ್ಯೆಯನ್ನು ಬೆಳ್ಳಗೆ 10ರಿಂದ ಮಧ್ಯಾಹ್ನ 3 ಘಂಟೆಯ ವರೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.