ಸುದ್ದಿಮೂಲ ವಾರ್ತೆ ರಾಯಚೂರು, ಡಿ.26:
ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ನೋಂದಣಿ ಪ್ರಕ್ರಿಿಯೆ ಡಿ.29ರಿಂದ ಆರಂಭಿಸಲಾಗುವುದು ಎಂದು ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಪತಂಗೆ ಜಯವಂತರಾವ್ ತಿಳಿಸಿದ್ದಾಾರೆ.
ಗ್ರಾಾಹಕ ವ್ಯವಹಾರಗಳ ಇಲಾಖೆಯ ರಾಷ್ಟ್ರೀಯ ಸಹಕಾರಿ ಗ್ರಾಾಹಕರ ಒಕ್ಕೂಟ ನಿಯಮಿತ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ ಬೆಂಬಲ ಬೆಲೆಯಡಿ ಉತ್ತಮ ಗುಣಮಟ್ಟದ ಕೆಂಪು ತೊಗರಿ ಖರೀದಿ ಪ್ರಕ್ರಿಿಯೆ ರೈತರ ನೋಂದಣಿ ಆರಂಭಿಸಲಾಗುವುದು. ಆದರೆ, ಪ್ರೋೋಟ್ಸ್ ತಂತ್ರಾಾಂಶದಲ್ಲಿ ಕಡ್ಡಾಾಯವಾಗಿ ಬೆಳೆ ಸಮೀಕ್ಷೆ ನೋಂದಣಿಯಾದ ರೈತರಿಂದ ಎಕರೆಗೆ 4 ಕ್ವಿಿಂಟಲ್ನಂತೆ ಪ್ರತಿ ಕ್ವಿಿಂಟಲ್ ತೊಗರಿಗೆ 8 ಸಾವಿರ ಬೆಂಬಲ ಬೆಲೆ ನಿಗದಿ ಪಡಿಸಲಾಗಿದೆ. ನೋಂದಣಿಗೆ ಬರುವ ರೈತರು ಕಡ್ಡಾಾಯವಾಗಿ ಆಧಾರ ಕಾರ್ಡ, ಪಹಣಿ, ಬ್ಯಾಾಂಕ್ ಪುಸ್ತಕ ನಕಲು ಹಾಗೂ ನೋಂದಾಯಿತ ಸಂಖ್ಯೆೆಯ ಮೊಬೈಲ್, ರೈತರ ಬೆರಳಚ್ಚು ನೀಡುವುದು ಕಡ್ಡಾಾಯವಾಗಿದೆ. ರೈತರು ಬೆಂಬಲ ಬೆಲೆ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಪತಂಗೆ ಜಯವಂತ ರಾವ್ ಮನವಿ ಮಾಡಿದ್ದಾಾರೆ.
ಡಿ.29ರಿಂದ ತೊಗರಿ ಖರೀದಿ ನೋಂದಣಿ ಆರಂಭ – ಪತಂಗೆ

