ಸುದ್ದಿಮೂಲ ವಾರ್ತೆ ಕಲಬುರಗಿ, ಜ.11:
ರಾಜಕಾರಣದಲ್ಲಿ ‘ಘೋಷಣೆ’ ಮಾಡುವುದು ಸುಲಭ, ಆದರೆ ಆ ಘೋಷಣೆಗೆ ಜೀವ ತುಂಬಿ ಕಟ್ಟಕಡೆಯ ಮನುಷ್ಯನಿಗೆ ಅದರ ಪ್ರಯೋಜನ ತಲುಪಿಸುವುದು ಅಪ್ಪಟ ಜನಪರ ಕಾಳಜಿಯಿದ್ದಾಗ ಮಾತ್ರ ಸಾಧ್ಯ. ಕಲ್ಯಾಾಣ ಕರ್ನಾಟಕದ ಭಾಗದಲ್ಲಿ ಇಂದು ಅಂಥದ್ದೊಂದು ಮೌನಕ್ರಾಾಂತಿ ನಡೆಯುತ್ತಿಿದೆ.
ಈ ಕ್ರಾಾಂತಿಯ ನೇತೃತ್ವವನ್ನು ಮುಖ್ಯಮಂತ್ರಿಿ ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರಾದ ಡಾ. ಅಜಯ್ ಧರ್ಮಸಿಂಗ್ ವಹಿಸಿದ್ದಾರೆ.
ಬೋರ್ಡ್ಗಷ್ಟೇ ಸೀಮಿತವಾಗಿರುವ ತಾಲ್ಲೂಕುಗಳಿಗೆ ಈಗ ‘ಸೌಧ’ದ ಸೌಭಾಗ್ಯ.
ಕಳೆದಒಂದು ಐತಿಹಾಸಿಕ ಇತಿಹಾಸವನ್ನು ಕೆದಕಿದರೆ ಹೊಸ ತಾಲ್ಲೂಕುಗಳ ಘೋಷಣೆಯೂ ಒಂದು ರಾಜಕೀಯ ದಾಳವಾಗಿತ್ತು. 2013 ರಿಂದ 2019 ರ ಅವಧಿಯವರೆಗೆ ಹಂತಹಂತವಾಗಿ ಸುಮಾರು 65 ಕ್ಕೂ ಹೆಚ್ಚು ಹೊಸ ತಾಲ್ಲೂಕುಗಳು ಘೋಷಣೆಯಾದವು. ಆದರೆ, ನಂತರ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇವು ಕೇವಲ ಕಾಗದದ ಮೇಲಿನ ವಿಷಯಗಳಾಗಿವೆ. ಹಾರೋಹಳ್ಳಿಿಯಂತಹ ತಾಲ್ಲೂಕುಗಳು ಕಾರ್ಯರೂಪಕ್ಕೆೆ ಬರಲು ಐದುವರ್ಷಗಳು ಆಗಿದ್ದರೆ ಅಂದಿನ ಆಡಳಿತದ ಇಚ್ಛಾಾಶಕ್ತಿಿಯ ಕೊರತೆ ಎದ್ದು ಕಾಣುತ್ತದೆ.
ಹೊಸ ತಾಲ್ಲೂಕುಗಳ ಗಡಿ ನಿಗದಿಯಾಗಿರಲಿಲ್ಲ, ಕಚೇರಿಗಳಿರಲಿಲ್ಲ. ತಹಸೀಲ್ದಾಾರ ಕಚೇರಿಗಳು ಪಾಳುಬಿದ್ದ ಕಟ್ಟಡಗಳು, ನಾಡ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿಿವೆ. ಒಂದು ಕೆಲಸ ಬಿಟ್ಟರೆ ಉಳಿದೆಲ್ಲದಕ್ಕೂ ಜನರು ಹಳೆ ತಾಲ್ಲೂಕುಗಳಿಗೇ ಅಲೆಯಬೇಕಿತ್ತು. ಜನರ ಈ ನೋವನ್ನರಿತ ಅಜಯ ಧರ್ಮಸಿಂಘ್ ಅವರು ಇಂದು ’ಪ್ರಜಾಸೌಧ’ಎಂಬ ವಿಶಿಷ್ಟಧ್ವನಿಯನ್ನು ಜಾರಿಗೆ ತಂದಿದ್ದಾರೆ.
ಏನಿದು ಪ್ರಜಾಸೌಧ? : ಕಲ್ಯಾಾಣ ಕರ್ನಾಟಕದಾದ್ಯಂತ 163.55 ಕೋಟಿ ರೂಪಾಯಿ ವೆಚ್ಚದಲ್ಲಿ 17 ಪ್ರಜಾಸೌಧಗಳನ್ನು ನಿರ್ಮಿಸಲಾಗುತ್ತಿಿದೆ. ಇದು ಬರೀ ಇಟ್ಟಿಿಗೆ-ಸಿಮೆಂಟಿನ ಕಟ್ಟಡವಲ್ಲ; ಇದು ಜನರ ಆಶೋತ್ತರಗಳ ತಾಣ.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಒಂದೇ ಸೂರಿನಡಿ ಎಲ್ಲ ಇಲಾಖೆಗಳೂ ಕಾರ್ಯನಿರ್ವಹಿಸಲಿವೆ. ರೈತರು, ಮಹಿಳಾ ಕಚೇರಿಯ ಕಚೇರಿಗೆ ಅಲೆಯುವ ಸಂಕಷ್ಟಕ್ಕೆೆ ಇಲ್ಲಿ ಪೂರ್ಣ ವಿರಾಮ ಬೀಳಲಿದೆ.
ಅಕ್ಷರ ಆವಿಷ್ಕಾಾರ : ಶಿಕ್ಷಣವೇ ಪ್ರಗತಿಯ ಮೂಲಮಂತ್ರ ಕಲ್ಯಾಾಣ ಕರ್ನಾಟಕ ಹಿಂದುಳಿದಿದೆ ಎಂಬ ಹಣೆಪಟ್ಟಿಿಯನ್ನು ಕಿತ್ತೊೊಗೆಯಲು ಶಿಕ್ಷಣವೇ ಮೊದಲ ಅಸ ಎಂದು ನಂಬಿರುವವರು ಅಜಯ ಧರ್ಮಸಿಂಗ್. ಮಂಡಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಒಟ್ಟು ಅನುದಾನದ ಶೇ. 25ರಷ್ಟು ಹಣವನ್ನು ಕೇವಲ ಶಿಕ್ಷಣಕ್ಕಾಾಗಿ ಮೀಸಲಿಟ್ಟಿಿರುವುದು ಒಂದು ಐತಿಹಾಸಿಕ ದಾಖಲೆ.
ಕರ್ನಾಟಕ ಪಬ್ಲಿಿಕ್ ಶಾಲೆಗಳ (ಕೆಪಿಎಸ್) ಕ್ರಾಾಂತಿ : ಮಕ್ಕಳು ಶಾಲೆಯಿಂದ ಹೊರಗುಳಿಯಬಾರದೆಂದು (ಡ್ರಾಾಪ್ಔಟ್) ಗ್ರಾಾಮ ಪಂಚಾಯತಿ ಮಟ್ಟದಲ್ಲಿ ಎಲ್ಕೆೆಜಿಯಿಂದ ಪಿಯುಸಿ ವರೆಗೆ ಸೂರಿನಡಿ ಶಿಕ್ಷಣ ನೀಡುವ ಕೆ.ಪಿ.ಎಸ್ ಶಾಲೆಗಳನ್ನು ಬಲಪಡಿಸಲಾಗುತ್ತಿಿದೆ.
ಕಲ್ಯಾಾಣ ಕರ್ನಾಟಕದಲ್ಲಿ ಮುಂದಿನ ಎರಡು ವರ್ಷಗ ಳಲ್ಲಿ 300 ಹೊಸ ಕೆ.ಪಿ.ಎಸ್ ಶಾಲೆಗಳು ತಲೆ ಎತ್ತಲಿವೆ.
ಸುಸಜ್ಜಿಿತ ಪ್ರಯೋಗಾಲಯ, ಲೈಬ್ರರಿ, ಕ್ರೀೆಡಾಂಗಣ ಮತ್ತು ವಿಷಯವಾರು ಶಿಕ್ಷಕರ ನೇಮಕಾತಿಗೆ ಆದ್ಯತೆ.
10,703 ಶಾಲೆಗಳ ಜಾಲವನ್ನು ಹೊಂದಿರುವ ಈ ಭಾಗದಲ್ಲಿ ‘ಅಕ್ಷರಆವಿಷ್ಕಾಾರ’ ಯೋಜನೆಯು ಗುಣಮಟ್ಟದ ಶಿಕ್ಷಣದ ಭರವಸೆ ನೀಡಿದೆ.
ಅನುದಾನದ ಮಹಾಪೂರ : 13,000 ಕೋಟಿಗಳ ಅಭಿವೃದ್ಧಿಿ ಪಥ
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಭಿವೃದ್ಧಿಿಯನ್ನು ಬದಿಗೊತ್ತಿಿ ಕೇವಲ ಮತ ಬ್ಯಾಾಂಕ್ ರಾಜಕಾರಣದಲ್ಲಿ ತೊಡಗಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರ ಬಂದ ಮೇಲೆ ಕಲ್ಯಾಾಣ ಕರ್ನಾಟಕಕ್ಕೆೆ ಹೊಸ ಚೈತನ್ಯ ಬಂದಿದೆ.
ಈ ವರ್ಷವೊಂದಕ್ಕೆೆ 5000 ಕೋಟಿ ರೂ. ಅನುದಾನ ಘೋಷಣೆಯಾಗಿದೆ.
ಒಟ್ಟಾಾರೆಯಾಗಿ 13,000 ಕೋಟಿಗಳ ಬೃಹತ್ಮೊೊತ್ತವನ್ನು ಈಭಾಗದ ಮೂಲಭೂತ ಸೌಕರ್ಯ, ಆರೋಗ್ಯ ಮತ್ತು ಶಿಕ್ಷಣಕ್ಕಾಾಗಿ ವಿನಿಯೋಗಿ ಸಲಾಗುತ್ತಿಿದೆ.
ನುಡಿದಂತೆ ನಡೆಯುವ ಆಡಳಿತ, ನಡೆಯುವುದನ್ನೆೆ ನುಡಿಯುವ ಶಿಕ್ಷಣ.
ಮಲ್ಲಿಕಾರ್ಜುನ ಖರ್ಗೆ ಅವರು ಮತ್ತು ದಿವಂಗತ ಧರಂಸಿಂಗ್ಅವರು 371(ಜೆ) ಮೀಸಲಾತಿಗಾಗಿ ನಡೆಸಿದ ಸನ್ಮಾಾನ ಹೋರಾಟದ ಲ ಇಂದು ಈಭಾಗದ ಜನರಿಗೆ ಸಿಗುತ್ತಿಿದೆ. ನಂಜುಂಡಪ್ಪ ವರದಿಯಆಶಯದಂತೆ ಪ್ರಾಾದೇಶಿಕ ಅಸಮಾನತೆ ತೊಲಗಿಸಲು ಅಜಯಧರ್ಮಸಿಂಗ್ ಅವರು ಶ್ರಮಿಸುತ್ತಿಿದ್ದಾರೆ.
ಇತರೆ ಸಚಿವ ಕೃಷ್ಣಭೈರೇಗೌಡರ ಕ್ರಿಿಯಾಶೀಲತೆ ಮತ್ತು ಅಜಯಧರ್ಮಸಿಂಗ್ ಅವರ ಅಭಿವೃದ್ಧಿಿ ಪರ ನಿಲುವುಗಳು ಸೇರಿ ಇಂದು ಕಲ್ಯಾಾಣ ಕರ್ನಾಟಕ ’ಅಭಿವೃದ್ಧಿಿಯ ಮಾದರಿ’ಯಾಗಿಮಾಡುತ್ತಿಿವೆ. ಕೇವಲ ಘೋಷಣೆಗಳಿಂದ ಬೆಳೆದ ಕಲ್ಯಾಾಣ ಕರ್ನಾಟಕ, ಇಂದು ‘ಪ್ರಜಾಸೌಧ’ ಮತ್ತು ‘ಕೆಪಿಎಸ್ ಶಾಲೆ’ಗಳ ಮೂಲಕ ವಾಸ್ತವದಲ್ಲಿ ಬೆಳಗುತ್ತಿಿದೆ. ಇದು ಕಲ್ಯಾಾಣದ ಹೊಸಯುಗ.
ಕಲ್ಯಾಣದ ಹೊಸ ಭಾಷ್ಯ: ಘೋಷಣೆಗಳ ಗುಂಗಿನಿಂದ ‘ಪ್ರಜಾಸೌಧ’ದ ಸಂಕಲ್ಪದವರೆಗೆ

