ಸುದ್ದಿಮೂಲ ವಾರ್ತೆ
ಹೊಸಕೋಟೆ,ಅ.3: ಗಾಂಧೀಜಿ ಜಯಂತಿ ಹಾಗೂ ಸಂಸದ ಬಿ.ಎನ್ ಬಚ್ಚೇಗೌಡರ ಹುಟ್ಟು ಹಬ್ಬದ ಪ್ರಯುಕ್ತ ನಗರದ ಸಾರ್ವಜನಿಕ ಸರ್ಕಾರಿ ಒಳರೋಗಿ, ಹೊರ ರೋಗಿಗಳಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಣ್ಣು, ಬ್ರೆಡ್ ಹಾಗೂ ಕುಡಿಯುವ ನೀರಿನ ಸ್ಟೀಲ್ ಬಾಟಲಿಗಳನ್ನು ವಿತರಣೆ ಮಾಡುತ್ತಿರುವುದಾಗಿ ಜಿಟಿಬಿ ಗ್ರೂಪ್ ಮಾಲೀಕ ಎಚ್.ಎಂ. ತ್ಯಾಗರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಟಿಬಿ ಗ್ರೂಪ್ ನ ಮುಖ್ಯಸ್ಥ ಸುಭಾಷ್ ಗೌಡ ಗಾಂಧಿಜಿ ರವರು ಸ್ವತಂತ್ರ್ಯ ತರುವಲ್ಲಿ ಅಹಿಂಸಾ ಮಾರ್ಗ ಹಾಗೂ ಸತ್ಯದ ಮಾರ್ಗವನ್ನುಲ್ಆರಿಸಿಕೊಂಡು ಜಾತಿ ಧರ್ಮಗಳನ್ನು ಪ್ರೀತಿಯಿಂದ ಕಾಣುವ ಮೂಲಕ ತಮ್ಮ ನಾಯಕತ್ವದ ಗುಣಗಳನ್ನು ಸಾರಿದರು.
ಅದೇ ರೀತಿ ತಾಲೂಕಿ ಬಿ.ಎನ್ ಬಚ್ಚೇಗೌಡರು ಸಹ ಸಮಾಜದ ಎಲ್ಲಾ ಸಮುದಾಯದ ಜನರನ್ನು ಪ್ರೀತಿಸುವ ಮೂಲಕ ತಾಲೂಕಿನಲ್ಲಿ ಉತ್ತಮ ನಾಯಕರನ್ನು ಹುಟ್ಟು ಹಾಕುವ ಮೂಲಕ ಸಮಾನತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ,ತಮ್ಮ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲದ ರಾಜಕಾರಣಿ ಎಂದೆನಿಸಿಕೊಂಡಿರುವ ಬಚ್ಚೇಗೌಡರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು, ತಾಲೂಕಿನ ಸಮಗ್ರ ಅಭಿವೃದ್ದಿಯ ಹರಿಕಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಸತೀಶ್,ಮುಖಂಡರಾದ ವೆಂಕಟೇಶ್, ಚಂದ್ರು, ಬಾಬು ಮೊದಲಾದವರು ಹಾಜರಿದ್ದರು.