ಸುದ್ದಿಮೂಲ ವಾರ್ತೆ ಮುದಗಲ್ , ಜ.24:
ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಆಂತರಿಕ ಚುನಾವಣೆಯಲ್ಲಿ ಮುದಗಲ್ನ ಗದ್ದೆಪ್ಪ ಜಕ್ಕೇರಮಡು ಕಾರ್ಯಾಧ್ಯಕ್ಷರಾಗಿ ಆಯ್ಕೆೆಯಾಗಿದ್ದಾರೆಂದು ಜಿಲ್ಲಾ ಆಂತರಿಕ ಮುಖ್ಯ ಚುನಾವಣಾಧಿಕಾರಿ ಅಮರಪ್ಪ ಮಟ್ಟೂರ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿ ಕಾರ್ಯಕರ್ತರು ಹಾಗೂ ಹಡಪದ ಅಪ್ಪಣ್ಣ ಸಮುದಾಯದವರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಜ,20ರಂದು ನಡೆದ ರಾಜ್ಯ ಆಂತರಿಕ ಚುನಾವಣೆಯಲ್ಲಿ 393 ಮತ ಪಡೆದು ರಾಜ್ಯ ಸಂಘಟನೆಗೆ ಕಾರ್ಯಾಧ್ಯಕ್ಷರಾಗಿ ಗದ್ದೆಪ್ಪ ಆಯ್ಕೆೆಯಾಗಿದ್ದಾರೆಂದು ಧಾರವಾಡದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಗಂಗಾಧರ ಎಮ್ಮಿಿಗನೂರು ಜ,23ರಂದು ಸಿದ್ದಾರೂಢ ಮಠದ ಸಭಾಂಗಣದಲ್ಲಿ ಮತ ಎಣಿಕೆ ಪ್ರಕ್ರಿಿಯೆ ನಂತರ ಘೋಷಿಸಿದ್ದಾರೆ ಎಂದು ತಿಳಿಸಿದರು.
ವೆಂಕಟೇಶ ಹಿರೇಮನಿ, ಮುದಗಲ್ ಹಡಪದ ಅಪ್ಪಣ್ಣ ಸಮುದಾಯದ ಗೌರವಾಧ್ಯಕ್ಷ ತಿಪ್ಪಣ್ಣ ಮೇಸ್ತಿಿಪೇಟೆ, ಅಧ್ಯಕ್ಷ ಗುಂಡಪ್ಪ ಕಿಲ್ಲಾ, ಉಪಾಧ್ಯಕ್ಷ ಹನುಮಂತ ಜಕ್ಕೇರಮುಡು, ಶಿವಣ್ಣ ಖೈರವಾಡಗಿ, ದೊಡ್ಡಪ್ಪ ಕಂಬಳಿಹಾಳ, ಗಣೇಶ ರಾಮತ್ನಾಾಳ, ಸೋಮಣ್ಣ, ಅಮರೇಶ ಹಾಗೂ ಇತರರಿದ್ದರು.
ರಾಜ್ಯ ಕಾರ್ಯಾಧ್ಯಕ್ಷರಾಗಿ ಗದ್ದೆಪ್ಪ ಆಯ್ಕೆ- ಅಮರಪ್ಪ

