ಸುದ್ದಿಮೂಲ ವಾರ್ತೆ ರಾಯಚೂರು, ನ.12:
ರಾಯಚೂರು ಜಿಲ್ಲೆೆಯ ಗಡಿಗೆ ಹೊಂದಿಕೊಂಡ ತೆಲಂಗಾಣದ 13 ಗ್ರಾಾಮಗಳ ಕನ್ನಡ ಶಾಲೆಗಳಲ್ಲಿ ಅಭ್ಯಾಾಸ ಮಾಡಿದ ವಿದ್ಯಾಾರ್ಥಿಗಳ ಉನ್ನತ ವ್ಯಾಾಸಾಂಗಕ್ಕೆೆ ಕರ್ನಾಟಕದಲ್ಲಿ ಎದುರಾಗುತ್ತಿಿರುವ ತಾಂತ್ರಿಿಕ ಸಮಸ್ಯೆೆ ಪರಿಹರಿಸಲು ಸರ್ಕಾರ ಮಧ್ಯೆೆ ಪ್ರವೇಶಿಸಲು ಕೃಷ್ಣ ಮಂಡಲದ ವಿದ್ಯಾಾರ್ಥಿ ಸಂಘ ಒತ್ತಾಾಯಿಸಿದೆ.
ಇಂದು ಜಿಲ್ಲಾಾಧಿಕಾರಿ ಕೆ.ನಿತೀಶ್ ಅವರ ಭೇಟಿಯಾದ ಪಾಲಕರು ತಮ್ಮ ಮಕ್ಕಳಿಗೆ ಆಗುತ್ತಿಿರುವ ತಾಂತ್ರಿಿಕ ಸಮಸ್ಯೆೆಗಳ ಕುರಿತು ಮಾಹಿತಿ ನೀಡಿದರು. 1956 ರಲ್ಲಿ ಭಾಷಾವಾರು ರಾಜ್ಯಗಳ ವಿಂಗಡಣೆಯಾದ ನಂತರ ರಾಯಚೂರು ಜಿಲ್ಲೆಗೆ ಹೊಂದಿಕೊಂಡಿರುವ ತೆಲಂಗಾಣದ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಕೃಷ್ಣ ಮಂಡಲ(ಹೋಬಳಿ)ದ ಗ್ರಾಾಮಗಳಲ್ಲಿ 13 ಶಾಲೆಗಳು ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿಿದ್ದು ಪ್ರತಿ ವರ್ಷ 150 ವಿದ್ಯಾಾರ್ಥಿ 10ನೇ ತರಗತಿ ಉತ್ತೀರ್ಣರಾಗಿ ಕರ್ನಾಟಕದಲ್ಲಿ ಉನ್ನತ ವ್ಯಾಾಸಂಗಕ್ಕಾಾಗಿ ಪ್ರವೇಶಾತಿಗಳನ್ನು ಪಡೆಯುತ್ತಿಿದ್ದಾರೆ. ಆದರೆ ವಿದ್ಯಾಾರ್ಥಿಗಳು ಕರ್ನಾಟಕ ಸರ್ಕಾರದಿಂದ ಸಿಗುವ ಮೀಸಲಾತಿ, ವಿದ್ಯಾಾರ್ಥಿ ವೇತನ, ವಸತಿ ನಿಲಯಗಳ ಸೌಲಭ್ಯ ಹಾಗೂ ಸಾರಿಗೆಯಲ್ಲಿ ಉಚಿತ ಪಾಸು ಸೌಲಭ್ಯಗಳಿಂದ ವಂಚಿತರಾಗುತ್ತಿಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತೆಲಂಗಾಣ ರಾಜ್ಯದಲ್ಲಿ ಜಾರಿ ಮಾಡಿರುವ ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ಗಳನ್ನು ಕರ್ನಾಟಕದಲ್ಲಿ ಪರಿಗಣಿಸುತ್ತಿಿಲ್ಲ. ಈ ಕಾರಣಗಳಿಂದ 10ನೇ ತರಗತಿಯಾದ ನಂತರ ವಿದ್ಯಾಾರ್ಥಿಗಳು ಉನ್ನತ ವ್ಯಾಾಸಂಗಕ್ಕೆೆ ಹಿಂದೇಟು ಹಾಕುವಂತಾಗಿದೆ. ವಿದ್ಯಾಾರ್ಥಿಗಳ ಭವಿಷ್ಯದ ದೃಷ್ಟಿಿಯಿಂದ ಪೋಷಕರು ಶಾಲೆಗಳನ್ನು ಕನ್ನಡ ಮಾಧ್ಯಮದಿಂದ ಇತರ ಮಾಧ್ಯಮಕ್ಕೆೆ ಬದಲಾವಣೆ ಮಾಡಬೇಕೆಂದು ತೀವ್ರ ಬೇಡಿಕೆ ಒತ್ತಾಾಯಿಸುತ್ತಿಿದ್ದಾಾರೆ.
ಈ ಹಿನ್ನೆೆಲೆಯಲ್ಲಿ ಈ ಸಮಸ್ಯೆೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾಾರ್ಥಿ ನಾಯಕರಾದ ಮಹೇಶ, ಭೀಮಾಶಂಕರ, ಸುರೇಶ್ ಸಜ್ಜನ್, ಮಹೇಶ, ಕಾವೇರಿ, ಗಡಿನಾಡು ಕನ್ನಡ ಸಂಘದ ನಿಜಾಮುದ್ದೀನ್, ರಾಮಲಿಂಗಪ್ಪ, ನಾಗಭೂಷಣ, ಅನಿಲ್ ಕುಮಾರ ಇತರರಿದ್ದರು.
ಗಡಿನಾಡ ಕನ್ನಡ ಶಾಲೆ ವಿದ್ಯಾಾರ್ಥಿಗಳ ತಾಂತ್ರಿಿಕ ಸಮಸ್ಯೆೆ ಪರಿಹರಿಸಲು ಆಗ್ರಹ

