ಸುದ್ದಿಮೂಲ ವಾರ್ತೆ ರಾಯಚೂರು, ಡಿ.16:
ಗುರು ಶಿಷ್ಯ ಪರಂಪರೆ ಸಂಗೀತದ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಮೂಲಕ ಉತ್ತಮ ಕೆಲಸ ಮಾಡಲಾಗುತ್ತಿಿದೆ ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.
ನಾದ ಲೋಕ ಕಲಾಬಳಗ (ರಿ) ರಾಯಚೂರು ವತಿಯಿಂದ ಗಾನಯೋಗಿ ಸಂಗೀತ ಪಾಠಶಾಲೆಯ 5ನೇ ವರ್ಷದ ವಾರ್ಷಿಕೋತ್ಸವ ಸಂಗೀತ ಕಾರ್ಯಕ್ರಮ ಹಾಗೂ ಗದುಗಿನ ವೀರೇಶ್ವರ ಪುಣ್ಯ ಆಶ್ರಮದ ಪೀಠದ ಡಾ. ಪರಮಪೂಜ್ಯ ಕಲ್ಲಯ್ಯ ಅಜ್ಜನವರ ತುಲಾಭಾರ ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಮಾತನಾಡಿದರು. ಚಿಕ್ಕ ಮಕ್ಕಳಿಗೆ ಒತ್ತಡ ನಿಭಾಯಿಸುವುದನ್ನು ಸಂಗೀತದ ಮೂಲಕ ಕಲಿಸಿಕೊಡುತ್ತಿಿರುವುದು ಶ್ಲಾಾಘನೀಯ ಎಂದರು.
ಈ ಕಾರ್ಯಕ್ರಮಕ್ಕೆೆ ಸಾನಿಧ್ಯ ವಹಿಸಿದ್ದ ಕಿಲ್ಲೆೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು, ಸೋಮವಾರಪೇಟೆ ಹಿರೇಮಠದ ಅಭಿನವ ಶ್ರೀ ರಾಚೋಟಿವೀರ ಶಿವಾಚಾರ್ಯರು, ಮಂಗಳವಾರ ಪೇಟೆ ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ ಪುಟ್ಟರಾಜ ಗುರುಗಳ ಈ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾಾರೆ ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೊಳೂರು, ಪಂ. ಸೂಗೂರೇಶ್ ಅಸ್ಕಿಿಹಾಳ್, ಗುರುಪಾದಯ್ಯ ಸ್ವಾಾಮಿ, ದೊಡ್ಡಯ್ಯ ಮಾಸ್ದೊಡ್ಡಿಿ, ವೀರೇಂದ್ರ ಪಾಟೀಲ್, ಲಕ್ಷ್ಮಣ ದಾಸರಿ, ರಂಗಮುನಿದಾಸ್, ಪರಮೇಶ್ವರ ಸಾಲಿಮಠ, ಸಂಸ್ಥೆೆ ಅಧ್ಯಕ್ಷ ರಾಘವೇಂದ್ರ ಆಶಾಪೂರು ವಿದ್ಯಾಾರ್ಥಿಗಳು, ಪಾಲಕರಿದ್ದರು.
ಗಾನಯೋಗಿ ಸಂಗೀತ ಪಾಠಶಾಲೆ ವಾರ್ಷಿಕೋತ್ಸವ, ತುಲಾಭಾರ ಗುರುಶಿಷ್ಯ ಪರಂಪರೆ ಕಲಿಕೆ ಶ್ಲಾಘನೀಯ – ದದ್ದಲ್

