ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.21:ಬಾಲಗಂಗಾಧರ ತಿಲಕರು ಜನರಲ್ಲಿ ಏಕತೆ ಮೂಡಿಸುವ ಸಲುವಾಗಿ ಗಣೇಶ ಚತುರ್ಥಿಯ ಮಹತ್ವವವನ್ನು ಅರಿತು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಕರೆ ಕೊಟ್ಟರು. ಗಣಪತಿ ಉತ್ಸವ ಆಚರಣೆ ಮಾಡುವುದರ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ವುರ್ಪೆಲ್ ಕುರ್ಚೆ ಕಂಪನಿಯ ಸಿಇಒ ನವೀನ್ ಎನ್.ಜೆ. ಹೇಳಿದರು.
ತಾಲೂಕಿನ ಸೂಲಿಬೆಲೆ ಹೋಬಳಿಯ ಬೇಗೂರು ಕೈಗಾರಿಕಾ ಪ್ರದೇಶದಲ್ಲಿರುವ ವುರ್ಪೆಲ್ ಕುರ್ಚೆ ಕಂಪನಿ ಲಿಮಿಟೆಡ್ನ ಆವರಣದಲ್ಲಿ ಗುರುವಾರ ನಡೆದ 6ನೇ ವರ್ಷದ ಗಣೇಶ ಪ್ರತಿಷ್ಠಾಪನ ಪೂಜಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಯುವ ಸಮುದಾಯ ದೇಶದ ಏಳಿಗೆಗೆ ಶ್ರಮಿಸುವಂತಾಗಬೇಕು. ಯುವಕರು ಭವ್ಯ ಭಾರತದ ನಿಮಾತೃಗಳಾಗಿ, ದೇಶವನ್ನು ಪ್ರಗತಿಯ ಪಥದಲ್ಲಿ ಮುನ್ನೆಡೆಸುವ ಚೈತನ್ಯ ಶೀಲರಾಗಬೇಕು. ಸಂಘರ್ಷಕ್ಕೆ ಅವಕಾಶ ಕೊಡದೆ ಎಲ್ಲರೂ ಸಂಘಟಿತರಾಗಬೇಕು. ದೇಶ ರಕ್ಷಣೆಗೆ ಪಣ ತೊಟ್ಟು, ನಿಷ್ಠೆ ಪ್ರಾಮಾಣಿಕ ದುಡಿಮೆಯನ್ನು ರೂಢಿಸಿಕೊಳ್ಳಬೇಕು. ಗಣೇಶೋತ್ಸವವನ್ನು ರಾಷ್ಟ್ರೀಯ ಹಬ್ಬವಾಗಿ ಸಮರ್ಪಕವಾಗಿ ಬಳಸಿಕೊಂಡು ಜನರಲ್ಲಿ ದೇಶಾಭಿಮಾನ ಬೆಳೆಯಲು ಸಾಧ್ಯವಾಯಿತು. ಪುರಾತನ ಕಾಲದಿಂದಲೂ ಹಿರಿಯರು ನಿಗದಿತ ಕಾಲಕ್ಕೆ ಅನುಗುಣವಾಗಿ ಹಬ್ಬಗಳ ಆಚರಣೆಯನ್ನು ರೂಢಿಸಿಕೊಂಡಿದ್ದಾರೆ. ಧಾರ್ಮಿಕ ಆಚರಣೆಗಳಿಂದ ಮನುಷ್ಯನಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಭಾವನೆ ಮೂಡುವಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಕಂಪನಿಯ ಪಂಕಜ್ ಭಾಟಿಯಾ, ಕನ್ನೆಂದ್ರ ಬರ್ಮನ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.