ಸುದ್ದಿಮೂಲವಾರ್ತೆ
ಕೊಪ್ಪಳ, ಆ.18: ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ನೀಡಿದ ಭರವಸೆ ಈಡೇರಿಲ್ಲ. 2024 ರ ಚುನಾವಣೆಯ ಮುನ್ನ ಗಂಗಾಮತಸ್ಥರ ಒಳಜಾತಿಗಳ ಹೆಸರನ್ನು ಜಾತಿ ಪಟ್ಟಿ ಸೇರಿಸದಿದ್ದರೆ ತಕ್ಕ ಪಾಠ ಕಲಿಸುವುದಾಗಿ ಗಂಗಾಮತಸ್ಥ ಮುಖಂಡರು ಎಚ್ಚರಿಸಿದರು.
ಇಂದು ಕೊಪ್ಪಳ ಗಂಗಾಮತಸ್ಥ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಗಂಗಾಮತಸ್ಥ ಒಳಪಂಗಡಗಳನ್ನು ಜಾತಿ ಪಟ್ಟಿಯಲ್ಲಿ ಸೇರಿಸಲು ಆಗ್ರಹಿಸಿದರು.
ಕೊಲಿ, ಕಬ್ಬಲಿಗ, ಅಂಬಿಗ ಸೇರಿ 39 ಜಾತಿಗಳನ್ನು ಕೇಂದ್ರದ ಜಾತಿ ಪಟ್ಟಿಯಲ್ಲಿ ಸೇರಿಸಬೇಕು.
2019ರಲ್ಲಿ ಪ್ರಧಾನ ಮಂತ್ರಿಗಳು ಕಲಬುರಗಿಗೆ ಆಗಮಿಸಿದಾಗ ಜಾತಿ ಪಟ್ಟಿಯಲ್ಲಿ ಸೇರಿಸುವ ಭರವಸೆ ನೀಡಿದ್ದರು
ಆದರೆ ಇಲ್ಲಿಯವರೆಗೂ ಭರವಸೆ ಈಡೇರಿಲ್ಲ.
ಇದರಿಂದ ಬೇಸತ್ತು ಇತ್ತೀಚಿನ ವಿಧಾನಸಭಾದಲ್ಲಿ ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್ ಬೆಂಬಲಿಸಲಾಗಿದೆ.ಇದೇ ಧೋರಣೆ ಮುಂದುವರಿದರೆ ಮತ್ತೆ ಬಿಜೆಪಿಯಿಂದ ಗಂಗಾಮತಸ್ಥರು ದೂರವಾಗುತ್ತಾರೆ. ಚುನಾವಣೆಯ ಮುನ್ನ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಹಂಪಿ ಕನ್ನಡ ವಿವಿಯಿಂದ ಕುಲಶಾಸ್ತ್ರ ಅಧ್ಯಯನ ವರದಿ ಸಲ್ಲಿಕೆಯಾದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಿಸಿದರು. ಗಂಗಾಮತಸ್ಥ ಸಮಾಜದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಘೋಷಣೆ ಹಾಕಿದರು.
ನಗರದ ಸಿರಸಪ್ಪಯ್ಯನಮಠದಿಂದ ಬೃಹತ್ ಮೆರವಣಿಗೆ
ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗಳು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಲಬುರಗಿಯ ಮಲ್ಲಿನಾಥ ಸ್ವಾಮೀಜಿ. ಶಿವಾಜಿ.ರಾಮಣ್ಣ ಚೌಡಿ. ಮಂಜುನಾಥ ಕಂಪಸಾಗರ.ವಸಂತ್ ಕುಮಾರ್ ಸಿ ಬುಡ್ಡಪ್ಪ ಬಾರಕೇರ್ ಗವಿ ಜಾಡರ್ ಲೋಕೇಶ್ ಬಾರಕೇರ್ ಪ್ರಜ್ವಲ್ ಬಾರಕೇರ್ ಗೋಣಿಬಸವ ಕರಿಕೆಹಳ್ಳಿ ಇದ್ದರು.