ಸುದ್ದಿಮೂಲಮಾರ್ತೆ
ಕೊಪ್ಪಳ ಆ ೦6:ಗಂಗಾವತಿ ನಗರವನ್ನು ಸಹ ಅಮೃತ ಭಾರತ ಯೋಜನೆಗೆ ಒಳಪಡಿಸಲು ಒತ್ತಾಯಿಸಿದ್ದೇವೆ. ಈ ಸ್ಟೇಷನ್ ಸೇರುವ ಯೋಜನೆ ಇದೆ ಎಂದು ಸಂಗಣ್ಣ ಕರಡಿ ಹೇಳಿದರು.
ಅವರು ಇಂದು ಅಮೃತ ಭಾರತ ಯೋಜನೆಯಲ್ಲಿ ಕೊಪ್ಪಳದ ನಗರದ ರೈಲು ನಿಲ್ದಾಣಕ್ಕೆ ಶಂಕು ಸ್ಥಾಪನೆ ಮಾಡಿ ಮಾತನಾಡಿ ಇವತ್ತು ನಾವು ಇರುತ್ತವೆ. ನಾಳೆ ಇರಲಿಕ್ಕಿಲ್ಲ ಆದರೆ ಮೋದಿ ಸರಕಾರದಲ್ಲಿ ಆಗಿರುವ ಅಭಿವೃದ್ದಿಯಾಗುತ್ತದೆ ಎಂಬುವುದು ಹೆಮ್ಮೆ ಇದೆ.
ಜಗತ್ತು ಮೆಚ್ಚಿದ ನಾಯಕ ನರೇಂದ್ರ ಅವರು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಭಾರತದ ಮುಂದಿನ ದಿನಗಳಲ್ಲಿ ಏನಾಗಬೇಕು ಎಂಬ ದೂರದೃಷ್ಠಿ ಹೊಂದಿದ್ದಾರೆ. 25 ಸಾವಿರ ಕೋಟಿ ರೂಪಾಯಿಯಲ್ಲಿ ಭಾರತದ 508 ರೈಲು ನಿಲ್ದಾಣಗಳು ಅಭಿವೃದ್ಧಿ ಗಾಗುತ್ತದೆ. ಭಾರತ ಈಗ ಬದಲಾವಣೆಯಾಗುತ್ತಿದೆ. ಈ ಬದಲಾವಣೆಯನ್ನು ಜಗತ್ತು ನೋಡುತ್ತಿದೆ ಎಂದರು.
ಸಿದ್ದರಾಮಯ್ಯನವರು ಮೋದಿ ದೇಶವನ್ನು ಹಾಳು ಮಾಡಿದ್ದಿರಿ ಎಂದಿದ್ದಾರೆ ಎಂದಿದ್ದಾರೆ. ಆದರೆ ಮತ್ಸರದಿಂದ ಈ ರೀತಿ ಮಾತನಾಡಬಾರದು. ರಸ್ತೆಯಲ್ಲಿ ತೊಟ್ಟಿಲು ಕಟ್ಟುವಂತೆ ರಸ್ತೆಗಳಾಗಿವೆ
ಜನಪರ ಯೋಜನೆಗಳನ್ನು ನಿಲ್ಲಿಸಬಾರದು. ಖಜಾನೆಯಲ್ಲಿದ್ದ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸುತ್ತಿದ್ದಾರೆ. ಅಭಿವೃದ್ದಿಗೆ ಹಣವೇ ಇಲ್ಲ ಕೇವಲ ಮೋದಿಯನ್ನು ಟೀಕಿಸುವುದು ಬಿಡಬೇಕು ಎಂದರು.
ಲೋಕಸಭಾ ಕ್ಷೇತ್ರದಲ್ಲಿ 9 ರೈಲು ಸೇತುವೆಗಳ ನಿರ್ಮಾಣವಾಗಿವೆ. ಸ್ವಾಮಿ ವಿವೇಕಾನಂದ. ಮೆಡಿಕಲ್ ಕಾಲೇಜು ವಿವಿಧ ಸೇತುವೆಗಳು ನಿರ್ಮಾಣವಾಗಲಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯ ಮಾಡಲಾಗಿದೆ ಎಂದರು.
ಗದಗ ವಾಡಿ ಯೋಜನೆಯಲ್ಲಿ ಕುಷ್ಟಗಿಗೆ ರೈಲು ಬರಲಿದೆ. ಮಹಿಬೂಬನಗರ ಮುನಿರಾಬಾದ್ ರೈಲು ಸೆಪ್ಟಂಬರ್ ಗೆ ಸಿಂಧನೂರು ವರೆಗೂ ರೈಲು ಬರಲಿದೆ. ಚಿತ್ರದುರ್ಗಾದಿಂದ ಕೊಪ್ಪಳ ಮಾರ್ಗವಾಗಿ ರೈಲು ಬರಲಿದೆ ಈ ಕುರಿತು ಸಮಿಕ್ಷೆ ನಡೆಯುತ್ತಿದೆ ಎಂದರು. ಪುನಾ ರಾಯಚೂರು ಹಾಗು ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಳು ಮಂಜೂರಾಗಿವೆ. ಈಗಿನ ಸರಕಾರ ರಾಜಕೀಯ ಮಾಡದೆ ವಿಮಾನ ನಿಲ್ದಾಣಕ್ಕೆ ಒತ್ತು ನೀಡಬೇಕು ಎಂದರು
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಹೇಮಲತಾ ನಾಯಕ ಮುಂದಿನ ದಿನಗಳಲ್ಲಿ ಕೊಪ್ಪಳ ರೈಲು ನಿಲ್ದಾಣ ದೊಡ್ಡ ನಗರಗಳಲ್ಲಿರುವ ರೈಲು ನಿಲ್ದಾಣದಂತೆ ಅಭಿವೃದ್ದಿ ಪಡಿಸಲಾಗುವುದು . ರೈಲು ನಿಲ್ದಾಣಗಳಲ್ಲಿ ಪುಸ್ತಕ ಹಾಗು ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಬೇಕೆಂದರು.
ಸ್ವಾಗತವನ್ನು ಹೆಚ್ವುವರಿ ವಿಭಾಗೀಯ ವ್ಯವಸ್ಥಾಪಕ ಸಂಜಯಕುಮಾರ ಸಿಂಗ್ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದರು ಕೊಪ್ಪಳ ಮೇಲಂಸ್ತು ಹಾಗು ಸುಂದರೀಕರಣ ಮಾಡಲು 21 ಕೋಟಿ ರೂಪಾಯಿ ಮಂಜೂರಾಗಿದೆ. ಆನೇಗೊಂದಿ ಹಾಗು ಹಂಪಿಗೆ ಬರುವ ಪ್ರವಾಸಿಗರಿಗಾಗಿ ಈ ಸ್ಟೇಷನ್ ಮಾದರಿಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ ಈ ಹಿಂದೆ ರೈಲು ನಿಲ್ದಾಣಕ್ಕೆ ಆಗಮಿಸಿದರೆ ಮೂಗು ಮುಚ್ಚಿಕೊಂಡು ಬರಬೇಕಾಗಿತ್ತು. ಆದರೆ ಈಗ ರೈಲು ನಿಲ್ದಾಣಗಳು ಅಭಿವೃದ್ದಿ ಹೊಂದುತ್ತವೆ. ಜೂನ ತಿಂಗಳಲ್ಲಿ ಕುಷ್ಟಗಿಗೂ ರೈಲು ಬರಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕರಾದ ದೊಡ್ಡನಗೌಡ ಪಾಟೀಲ ಹೇಮಲತಾ ನಾಯಕ, ಮಾಜಿ ಶಾಸಕ ಕೆ ಶರಣಪ್ಪ , ಬಸವರಾಜ ದಡೇಸಗೂರು, ನಗರಸಭಾ ಸದಸ್ಯರಾದ ರಾಜಶೇಖರ ಆಡೂರು, ವಿದ್ಯಾ ಹೆಸರೂರು, ಉಮಾ ಪಾಟೀಲ, ಸರ್ವೇಶ ಬನ್ನಿಕೊಪ್ಪ, ದೇವಕ್ಕ ಕಂದಾರಿ, ಜಿಲ್ಲಾಧಿಕಾರಿ ಸುಂದರೇಶ ಬಾಬು, ಎಸ್ಪಿ ಯಶೋದಾ ವಂಟಿಗೋಡಿ