ಸುದ್ದಿಮೂಲ ವಾರ್ತೆ ಕೊಪ್ಪಳ, ಅ.08:
ಗಂಗಾವತಿ ಮಂಡಲದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವೆಂಕಟೇಶ ಕುರುಬರ ಸಿನಿಮೀಯ ರೀತಿಯಲ್ಲಿ ಕೊಲೆಯಾಗಿದ್ದಾಾನೆ.ರಾತ್ರಿಿ 2 ಗಂಟೆ ಸುಮಾರಿಗೆ ರಾಯಚೂರು ರಸ್ತೆೆಯ ಲೀಲಾವತಿ ಆಸ್ಪತ್ರೆೆ ಮುಂಭಾಗದಲ್ಲಿ ಬೈಕ್ ಮೇಲೆ ಸ್ನೇಹಿತರೊಂದಿಗೆ ಬರುತ್ತಿಿದ್ದ ವೆಂಕಟೇಶ ಕುರುಬರ ನಿಗೆ ಕಾರಿನಿಂದ ಡಿಕ್ಕಿಿ ಹೊಡೆಸಿದ್ದಾಾರೆ. ಈ ವೇಳೆ ಬೈಕ್ ನಿಂದ ವೆಂಕಟೇಶ ನ ಮೇಲೆ ದುಷ್ಕರ್ಮಿಗಳು ಮಚ್ಚಿಿನಿಂದ ಎಲ್ಲೆೆಂದರಲ್ಲಿ ಕೊಚ್ಚಿಿ ಭೀಕರವಾಗಿ ಕೊಲೆ ಮಾಡಿದ್ದಾಾರೆ.ತಡರಾತ್ರಿಿ ಎರಡು ಮೂವತ್ತರ ಸುಮಾರಿಗೆ ಲಕ್ಷ್ಮೀ ಕ್ಯಾಾಂಪ್ ನಿಂದ ಬರ್ತಿದ್ದ ವೆಂಕಟೇಶ್ ನನ್ನ ಪಕ್ಕಾಾ ಪ್ಲ್ಯಾಾನ್ ಮಾಡಿ ಹತ್ಯೆೆ ಮಾಡಿದ್ದಾಾರೆ.ಇಷ್ಟೊೊಂದು ಭೀಕರ ಕೊಲೆಗೆ ಕಾರಣವಾಗಿದ್ದು ಹಳೇ ದ್ವೇಷ ಎನ್ನಲಾಗಿದೆ.
ಬಾಕ್ಸ್ :
ನಗರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಹತ್ಯೆೆ ವಿಷಯ ತಿಳಿಯುತ್ತಲೇ ಗಂಗಾವತಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿಿ ಮಾಜಿ ಶಾಸಕ ಪರಣ್ಣ ಮುನವಳ್ಳಿಿ ವೆಂಕಟೇಶ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.ಈ ವೇಳೆ ಮೃತ ವೆಂಕಟೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿಿತ್ತು.ತನ್ನ ಮಗನನ್ನ ಕಳೆದುಕೊಂಡ ತಂದೆ ಹಂಪಣ್ಣ ಹತ್ಯೆೆ ಆರೋಪಿಗಳನ್ನ ನಮ್ಮ ಕೈಗೆ ಕೊಡಿ ಎಂದು ಆಕ್ರೋೋಶ ಹೊರಹಾಕಿದರು.ವೆಂಕಟೇಶ್ ತಾಯಿ ಕೂಡಾ ಮಗನ ಹತ್ಯೆೆ ಮಾಡಿದವರಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ರು.
ಇನ್ನು ಕೊಲೆ ಮಾಡಿದ ಬಳಿಕ ಆರೋಪಿಗಳು ಇಂಡಿಕಾ ಕಾರ್ನಲ್ಲಿ ಪರಾರಿಯಾಗುತ್ತಿಿದ್ದ ವೇಳೆ ಕಾರ್ ಟೈರ್ ಬ್ಲಾಾಸ್ಟ್ ಆಗಿದೆ. ಹೀಗಾಗಿ ಕಾರ್ನ್ನು ಕೊಟ್ಟೂರೇಶ್ವರ ಕ್ಯಾಾಂಪ್ ನಲ್ಲಿಯೇ ಬಿಟ್ಟು ಓಡಿ ಹೋಗಿ,ಶರಣಾಗಿದ್ದಾಾರೆ.ಇನ್ನೂ ಪ್ರಕರಣದ ಕುರಿತು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ರವಿ ಹಾಗೂ ಸಹಚರರ ಮೇಲೆ ದೂರು ದಾಖಲಾಗಿದೆ. ಇನ್ನು ಕಳೆದ ಕೆಲ ದಿನಗಳ ಹಿಂದೆ ವೆಂಕಟೇಶ್ಗೆ ರವಿ ಆ್ಯಂಡ್ ಗ್ಯಾಾಂಗ್ ಬೆದರಿಕೆ ಹಾಕಿತ್ತು.ಪೊಲೀಸರು ನಿರ್ಲಕ್ಯವೇ ಕೊಲೆಗೆ ಕಾರಣ ಎನ್ನಲಾಗ್ತಿಿದೆ.ಇದೀಗ ಪೊಲೀಸರು ನಾಲ್ವರನ್ನು ವಶಕ್ಕೆೆ ಪಡೆದಿದ್ದು ಇನ್ನು ಕೆಲ ಆರೋಪಿಗಳಿಗೆ ತಂಡ ರಚನೆ ಮಾಡಿದ್ದಾಾರೆ.ಪೊಲೀಸರ ತನಿಖೆಯ ನಂತರವೇ ವೆಂಕಟೇಶ್ ಕೊಲೆಯ ರಹಸ್ಯ ಬಯಲಾಗಲಿ
ಹಳೆಯ ದ್ವೇಷದ ಹಿನ್ನೆೆಲೆ: ಗಂಗಾವತಿ ಬಿಜೆಪಿ ಮುಖಂಡನ ಹತ್ಯೆೆ
