ಸುದ್ದಿಮೂಲ ವಾರ್ತೆ ಕೊಪ್ಪಳ , ಡಿ.11:
ಅಕ್ಷರ. ಅನ್ನ, ಭಕ್ತಿಿ ತ್ರಿಿವಿಧ ದಾಸೋಹದ ಮಠ ಎಂದು ಖ್ಯಾಾತಿ ಹೊಂದಿರುವ ಕೊಪ್ಪಳ ಗವಿಮಠದಿಂದ ಮತ್ತೊೊಂದು ಸಾಮಾಜಿಕ ಕಾರ್ಯವಾಗಲಿದೆ. ಅದು ಬಡ ಹೆಣ್ಮಕ್ಕಳಿಗೆ ಉಚಿತ ಶಿಕ್ಷಣಕ್ಕೆೆ ಕಾರ್ಯತಂತ್ರ ರೂಪಿಸಲಾಗಿದೆ.
ಕೊಪ್ಪಳದಲ್ಲಿ ಈಗಾಗಲೇ 5000 ವಿದ್ಯಾಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯವಿದೆ. ಇದರಿಂದಾಗಿ ಕೊಪ್ಪಳ ಗವಿಮಠವು ಉತ್ತರ ಕರ್ನಾಟಕದ ಸಿದ್ದಗಂಗಾ ಎಂಬ ಖ್ಯಾಾತಿ ಹೊಂದಿದೆ. ಈ ಮಧ್ಯೆೆ ಈ ಭಾಗದ ಹೆಣ್ಮಕ್ಕಳ ಶಿಕ್ಷಣಕ್ಕಾಾಗಿ ಒಂದು ವಸತಿ ಸಹಿತ ಕಾಲೇಜು ನಿರ್ಮಿಸುವ ಉದ್ದೇಶದಿಂದ ಕೋಳೂರು- ಕಾಟ್ರಳ್ಳಿಿ ಮಧ್ಯೆೆ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿಿದೆ. ಈ ಕಟ್ಟಡದಲ್ಲಿ ಮೊದಲು ಆದ್ಯತೆಯಾಗಿ ಬಡ ಹೆಣ್ಮಕ್ಕಳ ಶಿಕ್ಷಣಕ್ಕಾಾಗಿ ವಸತಿ ಶಾಲೆ. ಕಾಲೇಜು ಆರಂಭವಾಗಲಿದೆ.
ಸುಮಾರು 1500 ವಿದ್ಯಾಾರ್ಥಿನಿಯರಿಗಾಗಿ ವಸತಿ ಸಹಿತ ಕಾಲೇಜಿನಲ್ಲಿ ಮೊದಲು ಆದ್ಯತೆಯಾಗಿ ಅಟೋ ಡ್ರೈವರ್ . ಕೂಲಿಕಾರರ ಹೆಣ್ಮಕ್ಕಳಿಗಾಗಿ ಸಿದ್ದವಾಗುತ್ತಿಿದೆ. ಕೋಳೂರು ಕಾಟ್ರಳ್ಳಿಿ ಮಧ್ಯೆೆ 48 ಎಕರೆ ವಿಸ್ತಾಾರ ಕ್ಯಾಾಂಪಸ್ ನಿರ್ಮಾಣವಾಗುತ್ತದೆ. ಇದರಲ್ಲಿ ನಿರ್ಮಾಣಕ್ಕೆೆ 60 ಕೋಟಿ ರೂಪಾಯಿ ಖರ್ಚು ಮಾಡಿ ಕಾಲೇಜು ಕಟ್ಟಡ ನಿರ್ಮಿಸುತ್ತಿಿದ್ದು ಇಷ್ಟರಲ್ಲಿಯೇ ಇದು ಪೂರ್ಣಗೊಳ್ಳಲಿದೆ.
ಇದೇ ಕ್ಯಾಾಂಪಸ್ ನಲ್ಲಿ ಮಿಯಾವಾಕಿ ತಂತ್ರಜ್ಞಾಾನ ಅರಣ್ಯ ಬೆಳೆಸಲು ಸಿದ್ದತೆ ಮಾಡಿಕೊಳ್ಳಲಿದ್ದು ಇಲ್ಲಿ ಸುಮಾರು 20 ಮರಗಳ ಬೆಳೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಗವಿಮಠದ ಈಗಿನ ಸ್ವಾಾಮೀಜಿಗಳಾದ ಶ್ರೀಗವಿಸಿದ್ದೇಶ್ವರ ಸ್ವಾಾಮಿಗಳು ಭಕ್ತರ ಮುಂದೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಸ್ವಾಾಮೀಜಿಯವರ ಕಾರ್ಯಕ್ಕೆೆ ಪ್ರಶಂಸೆ ವ್ಯಕ್ತವಾಗುತ್ತಿಿದ್ದು ಹೊಸ ಕ್ಯಾಾಂಪಸ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುವ ತರಬೇತಿ ಸೇರಿದಂತೆ ವಿವಿಧ ತಂತ್ರಜ್ಞಾಾನ ಬೆಳೆಸುವ ಕಾಲೇಜು ಆಗಲಿದೆ.

