ಸುದ್ದಿಮೂಲವಾರ್ತೆ
ಕೊಪ್ಪಳ,ಆ.30:ಹುಟ್ಟಿದ ಮೇಲೆ ಎಷ್ಟು ಸಂಭ್ರಮಿಸುತ್ತೇವು. ಸತ್ತ ಮೇಲೆ ದೇಹ ದಾನ ಮಾಡುವುದು ಸಹ ಅಷ್ಟೆ ಮುಖ್ಯ ಎಂದು ಕೊಪ್ಪಳದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿಗಳು ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಎಂ ಎಂ ಜೋಶಿ ಕಣ್ಣಿನ ಆಸ್ಪತ್ರೆ ಸೇರಿ ವಿವಿಧ ಸಂಘಟನೆಗಳಿಂದ 38 ನೆಯ ನೇತ್ರದಾನ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ ನೇತ್ರದಾನ ಅರಿವು ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇವರ ಮುಂದೆ ದೀಪ ಹಚ್ಚಿದರೆ ಒಂದು ದಿನ ಬೆಳಗಬಹುದು ಆದರೆ ಕಣ್ಣು ನೀಡುವ ದೀಪ ಹಚ್ಚಿದರೆ ಜೀವನ ಪರ್ಯಂತ ದೀಪ ಹಚ್ವಿದಂತೆ. ಕತ್ತಲೆಯಲ್ಲಿದ್ದವರಿಗೆ ಬೆಳಕು ನೀಡಿದ್ದು ಜೋಶಿಯವರು ಎಂದರು.
ಕೊಪ್ಪಳದಲ್ಲಿ ಜಾತ್ರೆಯ ಸಂದರ್ಭದಲ್ಲಿ ಕೃಪಾದೃಷ್ಠಿ ಯೋಜನೆ ಘೋಷಿಸಿದಾಗ ಕೆಲವೇ ದಿನಗಳಲ್ಲಿ 2.50 ಸಾವಿರ ಜನ ಕಣ್ಣು ದಾನಕ್ಕೆ ಮುಂದಾದರು. ಇನ್ನೂ ಪ್ರತಿ ವರ್ಷ 15 ಸಾವಿರಕ್ಕೂ ಅಧಿಕ ಜನ ನೇತ್ರದಾನಕ್ಕೆ ವಾಗ್ದಾನ ಮಾಡುತ್ತಿದ್ದಾರೆ.
ಹುಟ್ಟಿದ ಮೇಲೆ ತೊಟ್ಟಿಲಲ್ಲಿ ಹಾಕೋದು ಎಷ್ಟು ಸಂಭ್ರಮ ನಮ್ಮ ದೇಹ ದಾನ ಮಾಡಿ ಸತ್ತ ನಂತರ ಚಟ್ಟೋತ್ಸವ ಆಗಬೇಕು ಸತ್ತ ನಂತರವೂ ನಮ್ಮ ಕಣ್ಣು ನೋಡಬೇಕೆಂದರೆ ನೇತ್ರದಾನ ಮಾಡಬೇಕೆಂದರು.
ನೇತ್ರದಾನ ಅರಿವು ಕುರಿತು ಗವಿಮಠದಿಂದ ಎಂ ಎಂ ಜೋಶಿ ಆವರಣದವರೆಗೂ ಜಾಥ ನಡೆಯಿತು.
ಈ ಸಂಸರ್ಭದಲ್ಲಿ ಜಿಲ್ಲಾಧಿಕಾರಿ ನಳಿನ್ ಅತುಲ್. ಎಸ್ಪಿ ಯಶೋದಾ ವಂಟಿಗೋಡಿ. ಮುಖಂಡರಾದ ಶಾಂತಣ್ಣ ಮುದಗಲ್.ಎಂ ಎಂ ಜೋಶಿ ಸಂಶೋಧನಾ ವಿದ್ಯಾಲಯದ ನಿರ್ದೇಶಕ ಶ್ರೀನಿವಾಸ ಜೋಶಿ.ಡಾ ಮಂಜುಳಾ ಕರಿಗುದರಿ. ಡಾ ವಿಕಾಶ ಐಲಿ ಸೇರಿ ಹಲವುರು ಇದ್ದರು.