ಸುದ್ದಿಮೂಲ ವಾರ್ತೆ ಕೊಪ್ಪಳ, ಜ.04:
ಜಾತ್ರೆೆಯಲ್ಲಿ ಮಹಾದಾಸೋಹದ್ದೆೆ ವಿಶೇಷವಾಗಿದೆ. ದಾಸೋಹಕ್ಕಾಾಗಿ ನಾಡಿನಾದ್ಯಂತ ಭಕ್ತರು ದವಸ ಧಾನ್ಯವನ್ನು ನೀಡುತ್ತಿಿದ್ದಾಾರೆ. ಇಲ್ಲಿ ಸಿಂಧನೂರಿನ ಗೆಳೆಯರ ಬಳಗದವರು 10 ಲಕ್ಷ ಮೈಸೂರು ಪಾಕ್. ಕೊಪ್ಪಳ ಗೆಳೆಯರ ಬಳಗದವರು 5 ಲಕ್ಷಕ್ಕೂ ಅಧಿಕ ಮಿರ್ಚಿ. ವಿವಿಧ ಊರುಗಳಿಂದ 25 ಟನ್ ಮಾದಲಿ. 2 ಲಕ್ಷ ರವೇ ಉಂಡಿ. 800 ಕ್ವಿಿಂಟಾಲ್ ಅಕ್ಕಿಿ. ಬ್ಯಾಾಡಗಿಯಿಂದ ಮೆಣಸಿನಕಾಯಿ. ಮಹಾಲಿಂಗಪುರದಿಂದ ಬೆಲ್ಲ ಹೀಗೆ ಆಯಾಯ ಊರಿನ ಉತ್ಪನ್ನಗಳನ್ನು ಮಠದ ದಾಸೋಹಕ್ಕೆೆ ಸಮರ್ಪಿಸುತ್ತಿಿದ್ದಾಾರೆ. ಚಿಕ್ಕಸಿಂದೋಗಿಯ ಈರಪ್ಪ ಎಂಬ ರೈತ ದಾಸೋಹಕ್ಕಾಾಗಿ ಒಂದು ಎಕರೆ ಪಾಲಕ್ ಬೆಳೆದು ಮಠಕ್ಕೆೆ ಅರ್ಪಿಸುತ್ತಾಾರೆ. ಈ ರೀತಿ ಭಕ್ತರ ಸಂಖ್ಯೆೆ ಅಪಾರವಾಗಿದೆ.
ಜಾತ್ರೆೆಯಲ್ಲಿ ಸಾವಿರಾರು ಜನರು ಭಕ್ತರು ಇಲ್ಲಿ ಸೇವೆ ಸಲ್ಲಿಸುತ್ತಾಾರೆ. ಅಡುಗೆ ಮಾಡುವವರು. ತರಕಾರಿ ಕತ್ತರಿಸುವವರು. ಸ್ವಚ್ಛತೆ ಹೀಗೆ ಎಲ್ಲವನ್ನೂ ಭಕ್ತರು ಸ್ವಯಂ ಪ್ರೇೇರಣೆಯಿಂದ ತಮ್ಮ ತಮ್ಮ ಊರುಗಳಿಂದ ಬಂದು ಇಲ್ಲಿ ಸೇವೆ ಸಲ್ಲಿಸುತ್ತಾಾರೆ. ಒಂದು ಕಡೆ ಮಠದ ಸೇವೆ ಹಾಗು ಜಾತ್ರೆೆಯಲ್ಲಿ ಪಾಲ್ಗೊೊಂಡು ಜಾತ್ರೆೆಗೆ ಬರುವ ಸುಮಾರು 25 ಲಕ್ಷ ಜನರಿಗೆ ಊಟ ಬಡಿಸಲು ಸಿದ್ದತೆ ಮಾಡಿಕೊಳ್ಳುತ್ತಾಾರೆ.
ಗವಿಮಠದ ಜಾತ್ರೆೆಗೆ ವಿಶೇಷವಾಗಿರುತ್ತದೆ. ಈ ಜಾತ್ರೆೆಗೆ ಜನರು ಪದಾರ್ಥಗಳನ್ನು ಮಾಡಿಕೊಂಡು ಬಂದು ಮಠಕ್ಕೆೆ ಅರ್ಪಿಸುತ್ತಾಾರೆ. ಇಲ್ಲಿ ಎಲ್ಲವೂ ಅಚ್ಚುಕಟ್ಟಾಾಗಿ ನಡೆಯುತ್ತದೆ ಎನ್ನುತ್ತಾಾರೆ ಸಂಸದ ರಾಜಶೇಖರ ಹಿಟ್ನಾಾಳ.
ಮಹಾರಥೋತ್ಸವದ ಸಿದ್ದತೆ ಪೂರ್ಣಗೊಂಡಿದೆ. ಜನವರಿ 5 ಸಂಜೆ 5 ಗಂಟೆಗೆ ರಥೋತ್ಸವ. ಭಕ್ತ ಹಿತಚಿಂತನಾ ಗೋಷ್ಠಿಿ. ಸಂಗೀತ. ಸಾಂಸ್ಕೃತಿಕ ಕಾರ್ಯಕ್ರಮ. ಮನೋರಂಜನೆ ಹಾಗು ಜಾತ್ರೆೆಯ ಖರೀದಿಗಾಗಿ ಮಾರಾಟ ಮಳಿಗೆಗಳು ಸಿದ್ದವಾಗಿವೆ. ಕೊಪ್ಪಳದ ಗವಿಮಠದ ಅಜ್ಜನ ಜಾತ್ರೆೆಗೆ ನೀವು ಬನ್ನಿಿ.
ಕೊಪ್ಪಳದ ಗವಿಸಿದ್ದಪ್ಪಜ್ಜನ ತೇರಿಗೆ ಸಿದ್ದ, ಇಲ್ಲಿ ದಾಸೋಹದ್ದೆ ಸದ್ದು

