ಸುದ್ದಿಮೂಲ ವಾರ್ತೆ ಕೊಪ್ಪಳ , ಜ.06:
ಅಕ್ಕಿಿ ಕಾಳು ನೆಲದ ಮೇಲೆ ಬಿದ್ದಿದ್ದರೆ ಕಾಣುವುದು ಕಷ್ಟ. ಆದರೆ ಇದೇ ಅಕ್ಕಿಿ ಕಾಳಿನ ಗಾತ್ರದಲ್ಲಿ ಶ್ರೀಗವಿಸಿದ್ದೇಶ್ವರ ಸ್ವಾಾಮಿಯ ಗದ್ದುಗೆ ತಯಾರಿಸಿದ್ದಾಾರೆ ಕೊಪ್ಪಳದ ಕಲಾವಿದ ಪ್ರಕಾಶ ಶಿಲ್ಪಿಿ.
ಪ್ರಕಾಶ ಶಿಲ್ಪಿಿ ಇತ್ತೀಚಿಗೆ ಗವಿಮಠದ ಮುಂದೆ ಹೋಗುವಾಗ ದಾಸೋಹಕ್ಕೆೆ ಸಮರ್ಪಿಸಲು ತಂದಿರುವ ಅಕ್ಕಿಿಯ ಕೆಲವು ಕಾಳುಗಳು ನೆಲದ ಮೇಲೆ ಬಿದ್ದಿದ್ದವು. ಈ ಅಕ್ಕಿಿ ಕಾಳುಗಳನ್ನು ಆಯ್ದುಕೊಂಡು ಬಂದು ಸಂಗ್ರಹಿಸಿದ ಇದೇ ಅಕ್ಕಿಿ ಕಾಳಿನಲ್ಲಿ ಗವಿಸಿದ್ದೇಶ್ವರ ಕರ್ತೃ ಗದ್ದುಗೆ ತಯಾರಿಸಿದ್ದಾಾರೆ.
ಚಿಕ್ಕ ಕಲ್ಲಿನಲ್ಲಿ ಇಡೀ ದಿನ ಕಣ್ಣಲ್ಲಿ ಕಣ್ಣಿಿಟ್ಟು ಸುಂದರ ಮೂರ್ತಿಯನ್ನು ಕೆತ್ತನೆ ಮಾಡಿದ್ದಾಾರೆ. ಪ್ರತಿ ಧಾನ್ಯದಲ್ಲಿಯೂ ಒಂದೊಂದು ದೇವರಿರುತ್ತಾಾನೆ. ಅದೇ ರೀತಿ ಈ ಕಾಳಿನಲ್ಲಿ ಶ್ರೀಗವಿಸಿದ್ದೇಶ ಒಡಮೂಡಿದ್ದಾಾನೆ ಎನ್ನುತ್ತಾಾರೆ ಕಲಾವಿದ.
ಪ್ರಕಾಶ ಶಿಲ್ಪಿಿ ಈ ಹಿಂದೆ ಅಕ್ಕಿಿ ಕಾಳಿನ ಗಾತ್ರದಷ್ಟು ಮಹಾತ್ಮ ಗಾಂಧಿ, ಶಿವಲಿಂಗವನ್ನು ತಯಾರಿಸಿ ಗಮನ ಸೆಳೆದಿದ್ದರು. ಈಗ ಅವರು ಅಕ್ಕಿಿ ಕಾಳಿನ ಗಾತ್ರದಷ್ಟು ಶ್ರೀಗವಿಸಿದ್ದೇಶ್ವರ ಮೂರ್ತಿ ಗದ್ದುಗೆ ತಯಾರಿಸಿ ಗಮನ ಸೆಳೆಯುತ್ತಿಿದ್ದಾಾರೆ.
ಅಕ್ಕಿ ಕಾಳಿನಷ್ಟು ಗವಿಸಿದ್ದೇಶನ ಗದ್ದುಗೆ, ಮೂರ್ತಿ ಕಲಾವಿದನ ಕೈಚಳಕಕ್ಕೆ ಮೆಚ್ಚುಗೆ

