ಸುದ್ದಿಮೂಲ ವಾರ್ತೆ ಬೆಂಗಳೂರು, ನ.20:
ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅಧ್ಯಕ್ಷತೆಯಲ್ಲಿ ವಾರ್ಡ್ ಪುನರ್ ವಿಂಗಡಣಾ ಸಮಿತಿಯನ್ನು ರಚಿಸಲಾಗಿತ್ತು. 2011ರ ಜನಗಳಿ ಮತ್ತು ಇತ್ತೀಚಿನ ಜನ ಸಂಖ್ಯೆೆಯನ್ನು ಪರಿಗಣಿಸಿ ವಾರ್ಡ್ ಗಡಿಗಳನ್ನು ನಿರ್ಧರಿಸುವ ಜವಾಬ್ದಾಾರಿ ಸಮಿತಿಗೆ ಸೇರಿತ್ತು. 368 ವಾರ್ಡ್ಗಳನ್ನು ಸಮಿತಿ ಶಿಾರಸ್ಸು ಮಾಡಿತ್ತು. ಸರ್ಕಾರ ಅಂತಿಮ ಅಧಿಸೂಚನೆಯಯಲ್ಲಿ ಮತ್ತೊೊಂದು ವಾರ್ಡ್ ಸೇರಿಸಿದೆ.
ದ (ಜಿಬಿಎ) ವ್ಯಾಾಪ್ತಿಿಯಲ್ಲಿರುವ ಐದು ನಗರ ಪಾಲಿಕೆಗಳ ವಾರ್ಡ್ ಮರು ವಿಂಗಣೆಯನ್ನು ನಗರಾಭಿವೃದ್ಧಿಿ ಇಲಾಖೆ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು ಪಶ್ಚಿಿಮ ನಗರ ಪಾಲಿಕೆ ವ್ಯಾಾಪ್ತಿಿಯಲ್ಲಿ ಕರಡು ಅಧಿಸೂಚನೆಯಲ್ಲಿ 111 ವಾರ್ಡ್ಗಳಿದ್ದವು. ಅಂತಿಮ ಅಧಿಸೂಚನೆಯಲ್ಲಿ ಈ ಸಂಖ್ಯೆೆ 112ಕ್ಕೆೆ ಹೆಚ್ಚಿಿದೆ. ಉಳಿದ ನಾಲ್ಕು ನಗರ ಪಾಲಿಕೆಗಳ ವಾರ್ಡ್ ಸಂಖ್ಯೆೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಐದು ನಗರ ಪಾಲಿಕೆಯಲ್ಲಿ ಒಟ್ಟಾಾರೆ 369 ವಾರ್ಡ್ಗಳಿವೆ.
ಬಿಬಿಎಂಪಿ ಅಸ್ತಿಿತ್ವದಲ್ಲಿದ್ದಾಗ ಹಲವು ಬಾರಿ ವಾರ್ಡ್ಗಡಿ ಪುನಾರಚಿಸುವ ಪ್ರಯತ್ನಗಳು ನಡೆದಿದ್ದವು. 198 ವಾರ್ಡ್ಗಳನ್ನು 243ಕ್ಕೆೆ ಹೆಚ್ಚಿಿಸಲಾಗಿತ್ತು. ಮತ್ತೆೆ 225ಕ್ಕೆೆ ಇಳಿಸಲಾಗಿತ್ತು. ಗ್ರೇೇಟರ್ ಬೆಂಗಳೂರು ರಚನೆಯಾದ ಬಳಿಕ ಐದು ಪಾಲಿಕೆಗಳನ್ನು ರಚಿಸಲಾಗಿತ್ತು. ಸೆಪ್ಟಂಬರ್ 2ರಂದು ಐದು ನಗರ ಪಾಲಿಕೆಗಳು ಅಸ್ತಿಿತ್ವಕ್ಕೆೆ ಬಂದವು. ಸೆಪ್ಟಂಬರ್ 30ರಂದು ವಾರ್ಡ್ಗಳ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ನವೆಂಬರ್ 1ಕ್ಕೆೆ ಅಂತಿಮ ಅಧಿಸೂಚನೆ ಹೊರಡಿಸಬೇಕಿತ್ತು. ಸುಪ್ರೀೀಂಕೋರ್ಟ್ನಲ್ಲಿ ಅಧಿಕ ಸಮಯ ಕೋರಿದ್ದರೂ ಅನುಮತಿ ಸಿಗಲಿಲ್ಲ. 15 ದಿನದಲ್ಲಿ ವಾರ್ಡ್ಗಳನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸುವಂತೆ ಸುಪ್ರೀೀಂ ಕೋರ್ಟ್ ಸೂಚಿಸಿತ್ತು. ಕೋರ್ಟ್ ಸೂಚನೆಯಂತೆ ಅಂತಿಮ ಆದೇಶ ಹೊರಬಿದ್ದಿದೆ.
ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅಧ್ಯಕ್ಷತೆಯಲ್ಲಿ ವಾರ್ಡ್ ಪುನರ್ ವಿಂಗಡಣಾ ಸಮಿತಿಯನ್ನು ರಚಿಸಲಾಗಿತ್ತು. 2011ರ ಜನಗಳಿ ಮತ್ತು ಇತ್ತೀಚಿನ ಜನ ಸಂಖ್ಯೆೆಯನ್ನು ಪರಿಗಣಿಸಿ ವಾರ್ಡ್ ಗಡಿಗಳನ್ನು ನಿರ್ಧರಿಸುವ ಜವಾಬ್ದಾಾರಿ ಸಮಿತಿಗೆ ಸೇರಿತ್ತು. 368 ವಾರ್ಡ್ಗಳನ್ನು ಸಮಿತಿ ಶಿಾರಸ್ಸು ಮಾಡಿತ್ತು. ಸರ್ಕಾರ ಅಂತಿಮ ಅಧಿಸೂಚನೆಯಯಲ್ಲಿ ಮತ್ತೊೊಂದು ವಾರ್ಡ್ ಸೇರಿಸಿದೆ.
ಯಾವ ಪಾಲಿಕೆ ಎಷ್ಟು ವಾರ್ಡ್ಗಳು
ಬೆಂಗಳೂರು ಕೇಂದ್ರ-63 ವಾರ್ಡ್ಗಳು
ಬೆಂಗಳೂರು ದಕ್ಷಿಣ- 72 ವಾರ್ಡ್ಗಳು
ಬೆಂಗಳೂರು ಉತ್ತರ-72 ವಾರ್ಡ್ಗಳು
ಬೆಂಗಳೂರು ಪಶ್ಚಿಿಮ-112 ವಾರ್ಡ್ಗಳು
ಬೆಂಗಳೂರು ಪೂರ್ವ-50 ವಾರ್ಡ್ಗಳು