ಸುದ್ದಿಮೂಲ ವಾರ್ತೆ
ಮೈಸೂರು, ಅ.22:ದಸರಾ ಪ್ರಯುಕ್ತ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಗೀತಾ ಚೌಡಯ್ಯರ ಹಸು 46 ಲೀಟರ್ ಹಾಲು ನೀಡುವ ಮೂಲಕ ಪ್ರಥಮ ಸ್ಥಾನ ಗಳಿಸಿ, 50 ಸಾವಿರ ರು. ನಗದು ಬಹುಮಾನ ಹಾಗೂ ಟ್ರೋಫಿ ತನ್ನದಾಗಿಸಿಕೊಂಡರು.
36.450 ಕೆ.ಜಿ ಹಾಲು ನೀಡಿದ ಮಂಡ್ಯ ಶೀರ ಹೆಗಡೆಯ ಹಸು ದ್ವಿತೀಯ ಮತ್ತು 34.160 ಕೆ.ಜಿ. ಹಾಲು ನೀಡಿದ ಮೈಸೂರಿನ ಪಿ.ಸಾರವ್ ವಿನೋದ್ ರವೀಂದ್ರ ಅವರ ಹಸು ತೃತಿಯ ಸ್ಥಾನ ಪಡೆದು ಕ್ರಮವಾಗಿ 40,000, 30,000 ನಗದು, ಟ್ರೋಫಿ ಗೆದ್ದಿವೆ
ಹೆಚ್ಚು ಹಾಲು ಕರೆದ ಹಸುಗಳು
ಸ್ಪರ್ಧೆಯಲ್ಲಿ ಬೆಂಗಳೂರು ಕಾಮಾಕ್ಷಿಪಾಳ್ಯದ ಯೋಗೇಶ್ ರವರು 46 ಕೆಜಿg 600 ಗ್ರಾಂ ಹಾಲನ್ನು ಕರೆಯುವುದರ ಮೂಲಕ 50 ಸಾವಿರ ನಗದು ಆಕರ್ಷಕ ಟ್ರೋಪಿಯನ್ನು ಪಡೆದು ಪ್ರಥಮ ಸ್ಥಾನ ಗಳಿಸಿದರು. ಮಂಡ್ಯ ಜಿಲ್ಲೆಯ ದುದ್ದ ಗ್ರಾಮದ ಕೆ ಎಸ್ ಗೋಪಾಲಕೃಷ್ಣಯ್ಯ ರವರು 36 ಕೆಜಿ ಹಾಲನ್ನು ಕರೆಯುವುದರ ಮೂಲಕ 40 ಸಾವಿರ ನಗದು ಹಾಗೂ ಆಕರ್ಷಕ ಟ್ರೋಪಿಯನ್ನು ಪಡೆದು ದ್ವಿತೀಯ ಸ್ಥಾನ ಗಳಿಸಿದರು.
ಮೈಸೂರಿನ ದೇವರಾಜ್ ಮೊಹಲ್ಲದ ಹಾರೋ ವಿನೋದ್ ರವರು 34 ಕೆಜಿ 160 ಗ್ರಾಂ ಹಾಲನ್ನು ಕರೆಯುವುದರ ಮೂಲಕ 30ಸಾವಿರ ನಗದನ್ನು ಗಳಿಸುವ ಮೂಲಕ ತೃತೀಯ ಸ್ಥಾನವನ್ನು ಪಡೆದರು. ಆನೇಕಲ್ ತಾಲೂಕಿನ ಪಿ ಶ್ರೀನಿವಾಸ್ 34 ಕೆಜಿ 70 ಗ್ರಾಂ ಹಾಲನ್ನು ಕರೆಯುವುದರ ಮೂಲಕ 10ಸಾವಿರ ನಗದು ಹಾಗೂ ಆಕರ್ಷಕ ಟ್ರೋಪಿಯನ್ನು ಗಳಿಸಿ ನಾಲ್ಕನೇ ಸ್ಥಾನ ಪಡೆದರು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.
ಮುಂದಿನ ಬಾರಿ ನಗದು ಬಹುಮಾನ ಹೆಚ್ಚಳ
ಹಸುಗಳ ಮಾಲೀಕರಿಗೆ ಬಹುಮಾನ ವಿತರಿಸಿ ಮಾತನಾಡಿದ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್, ಪಶಸಂಗೋಪನೆ ಮತ್ತು ರೈತರಿಗೆ ಉತ್ತೇಜನ ನೀಡಲು ದಸರಾ ಮಹೋತ್ಸವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಹಾಲು ಕರೆಯುವ ಸ್ಪರ್ಧೆ ವಿಶೇಷವಾದದ್ದು. ಹಾಗಾಗಿ ಮುಂದಿನ ಬಾರಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹೆಚ್ಚಿನ ನಗದು ಬಹುಮಾನವನ್ನು ನೀಡಿ ಭಾಗವಹಿಸಲು ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಸಿ ಮಹದೇವಪ್ಪ, ಪಶುಪಾಲನಾ ಇಲಾಖೆಯ ಉಪನಿರ್ದೇಶಕರಾದ ನಾಗರಾಜು, ಹಾಗೂ ರೈತ ದಸರಾ ಉಪ ಸಮಿತಿ ಸದಸ್ಯರು ಇದ್ದರು.