ಸುದ್ದಿಮೂಲ ವಾರ್ತೆ ರಾಯಚೂರು, ಜ.27:
ರಾಜ್ಯದ ಶಿಶುಕೇಂದ್ರಿಿತ ವಿಶೇಷ ಶಾಲೆಗಳ ಶಿಕ್ಷಕರ, ಸಿಬ್ಬಂದಿಗಳ ವೇತನ ತಾರತಮ್ಯ ಸೇರಿ ಇತರೆ ಸಮಸ್ಯೆೆಗಳ ಈಡೇರಿಸಲು ಒತ್ತಾಾಯಿಸಿ ಜ. 28 ರಂದು ಬೆಂಗಳೂರಿನ ಸ್ವಾಾತಂತ್ರ್ಯ ಉದ್ಯಾಾನವನದಲ್ಲಿ ರಾಜ್ಯ ಮಟ್ಟದ ಸಾರ್ವತ್ರಿಿಕ ಮುಷ್ಕರ ಹಮ್ಮಿಿಕೊಳ್ಳಲಾಗಿದೆ ಎಂದು ಶ್ರೀ ಮಾಣಿಕಪ್ರಭು ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಸುನಿಲ್ ದೇಶಂಪಾಂಡೆ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಶಿಶು ಕೇಂದ್ರಿಿಕೃತ ಅನುದಾನ ಪಡೆಯುತ್ತಿಿರುವ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ 1982 ಅನುದಾನದಡಿಯಲ್ಲಿ ಬರುವ ಸಿಬ್ಬಂದಿಗೆ ಎಲ್ಲ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಇಲಾಖೆ ನಿರ್ದೇಶಕರು ರಾಜ್ಯದ ವಿಶೇಷ ಶಾಲೆಗಳ ಅನುದಾನ ಶೇ.40ರಷ್ಟು ಹೆಚ್ಚಳದ ಪ್ರಸ್ತಾಾವನೆ ಈಗಲೂ ಜಾರಿ ಮಾಡದೆ ಸರ್ಕಾರ ಕಡೆಗಣಿಸಿದೆ ಎಂದು ದೂರಿದರು.
ಸರ್ವೋಚ್ಚ ನ್ಯಾಾಯಾಲಯ ನೀಡಿರುವ ಆದೇಶದ ಪ್ರಕಾರ ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರಿಗೆ ಪೂರ್ಣ ಪ್ರಮಾಣದ ಆರ್ಥಿಕ ಸೌಲಭ್ಯ ಒದಗಿಸಲು ಆಗ್ರಹಿಸಿ ಈ ಹೋರಾಟ ನಡೆಯಲಿದೆ ಎಂದರು. ಸುದ್ದಿಗೋಷ್ಠಿಿಯಲ್ಲಿ ಆರ್.ಎಂ ಯತ್ನಳ್ಳಿಿಘಿ, ಶ್ರೀಧರ, ಆಂಜನೇಯ, ಟಿಕರಾಜ್ ಕಾವ್ಯ, ರೇಖಾ ಕುಲಕರ್ಣಿ ಇದ್ದರು.

