ಸುದ್ದಿಮೂಲ ವಾರ್ತೆ ರಾಯಚೂರು, ಜ.28:
ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ೆ.7ರಂದು ಹಮ್ಮಿಿಕೊಂಡ ಜಿಲ್ಲಾ ಮಟ್ಟದ ಗ್ಯಾಾರಂಟಿ ಸಮಾವೇಶ ಕಾರ್ಯಕ್ರಮ ಯಶಸ್ವಿಿಯಾಗಿ ನಡೆಯುವಂತೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಮಟ್ಟದ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನ ಸಮಿತಿಯ ಅಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು.
ನಗರದ ಜಿಲ್ಲಾ ಪಂಚಾಯತಿಯ ಜಲ ನಿರ್ಮಲ ಸಭಾಂಗಣದಲ್ಲಿ ನಡೆದ ಗ್ಯಾಾರಂಟಿ ಸಮಾವೇಶದ ಸಿದ್ಧತೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಯಚೂರು ಜಿಲ್ಲೆ ಮತ್ತು ತಾಲೂಕುವಾರು ವಿವಿಧ ಗ್ಯಾಾರಂಟಿ ಯೋಜನೆಗಳ ಅನುಷ್ಠಾಾನದಲ್ಲಿ ಪ್ರಸ್ತುತ ಅವಧಿವರೆಗೂ ಸಾಧಿಸಿರುವ ಪ್ರಗತಿಯ ವಿವರಗಳ ಮಾಹಿತಿ ವಿಡಿಯೋ ಸಾಕ್ಷ್ಯಚಿತ್ರಗಳ ಮೂಲಕ ಪ್ರದರ್ಶಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿನ ಗ್ಯಾಾರಂಟಿ ಯೋಜನೆಯಗಳ ಲಾನುಭವಿಗಳ ಯಶೋಗಾಥೆಯ. ಅದು ಇತರರಿಗೆ ಪ್ರೇರಣೆಯಾಗಬೇಕು. ಮುಖ್ಯವಾಗಿ ಗ್ಯಾಾರಂಟಿ ಯೋಜನೆಗಳ ಆಶಯ ಮತ್ತು ಆಯಾ ಯೋಜನೆಗಳ ಬಗ್ಗೆೆ ಜನತೆಗೆ ತಿಳಿಸಲು ಅರ್ಹರು ಈ ಯೋಜನೆಯ ವ್ಯಾಾಪ್ತಿಿಗೆ ಬರಬೇಕು ಎನ್ನುವ ಪ್ರಮುಖ ಉದ್ದೇಶದೊಂದಿಗೆ ಜಿಲ್ಲಾ ಮಟ್ಟದ ಗ್ಯಾಾರಂಟಿ ಸಮಾವೇಶ ಹಮ್ಮಿಿಕೊಳ್ಳಲಾಗಿದೆ.
ವಿವಿಧ ಗ್ಯಾಾರಂಟಿ ಯೋಜನೆಗಳ ಪ್ರತಿ ತಾಲೂಕಿನ ಕನಿಷ್ಠ 25 ಸಾಧಕ ಮಹಿಳಾ ಲಾನುಭವಿಗಳ ಗುರುತಿಸಿ ಅವರಿಗೆ ಸಮಾವೇಶಕ್ಕೆೆ ಆಹ್ವಾಾನಿಸಿ ಪ್ರಶಸ್ತಿಿ ನೀಡಿ ಸನ್ಮಾಾನಿಸಿ ಅಭಿಪ್ರಾಾಯದ ವಿಡಿಯೋ ಪ್ರದರ್ಶಿಸಬೇಕು. ಗ್ಯಾಾರಂಟಿ ಯೋಜನೆಗಳ ಯಶೋಗಾಥೆಯ ಕುರಿತು ನಾಟಕ ಪ್ರದರ್ಶನ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಗ್ಯಾಾರೆಂಟಿ ಸಮಿತಿಯ ರಾಯಚೂರು ತಾಲೂಕಾಧ್ಯಕ್ಷ ಪವನ್ ಕಿಶೋರ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ತುರ್ವಿಹಾಳ, ಹನುಮಂತಪ್ಪ ಜಾಲಿಬೆಂಚಿ, ಸಿಇಓ ಈಶ್ವರ ಕುಮಾರ ಕಾಂದೂ ಸೇರಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ೆ.7ರಂದು ಜಿಲ್ಲಾ ಉತ್ಸವದಲ್ಲಿ ಗ್ಯಾರೆಂಟಿ ಸಮಾವೇಶಕ್ಕೆ ಸಿದ್ದತೆ ಮಾಡಿಕೊಳ್ಳಿ – ಮುರಾರಿ

