ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.24
ನಾಡಿನ ಕೃಷಿಕರಿಗೆ ಅತ್ಯುಪಯುಕ್ತ ಕೃಷಿಯ ಜ್ಞಾಾನ ಕೈಪಿಡಿ ನೀಡಿ ರೈತರ ಬಾಳಿಗೆ ಬೆಳಕಾದ ಕೃಷಿ-ಋಷಿ, ವೈರಾಗ್ಯ ಚಕ್ರವರ್ತಿ ಎಂದೇನಿಸಿದ ಸಂತೆಕೆಲ್ಲೂರ ಘನಮಠ ನಾಗಭೂಷಣ ಶಿವಯೋಗಿಗಳ ಸುಕ್ಷೇತ್ರ ಸಂತೆಕೆಲ್ಲೂರಲ್ಲಿ ಘನಮಠರ 146ನೇ ಪುಣ್ಯಸ್ಮರಣೆ ನಿಮಿತ್ಯ ನಾನಾ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ನಡೆದವು.
ಘನಮಠ ಶಿವಯೋಗಿಗಳ 146 ನೇ ಪುಣ್ಯಸ್ಮರಣೋತ್ಸವ ನಿಮಿತ್ಯ ಪ್ರತಿವರ್ಷದ ಪದ್ದತಿಯಂತೆ ಬೆಳಗ್ಗೆೆ ಘನಮಠರ ಕತೃಗದ್ದುಗೆಗೆ ರುದ್ರಾಾಭಿಷೇಕ ಸಹಸ್ರ ಬಿಲ್ವಾಾರ್ಚನೆ ಶ್ರೀಮಠದ ಸೂಗಯ್ಯ ಹಿರೇಮಠ ಅವರ ಪೌರೋಹಿತ್ಯದಲ್ಲಿ ನಡೆಯಿತು. ಗುಲಬರ್ಗಾ ಕೆಂಚಬಸವ ಶಿವಾಚಾರ್ಯರಿಂದ ಜಂಗಮ ವಟುಗಳಿಗೆ ದೀಕ್ಷಾ ಕಾರ್ಯಕ್ರಮ ಜರುಗಿದವು. ಶ್ರೀಮಠದ ಗುರುಬಸವಶ್ರೀಗಳು, ಹಾಲ್ವಿಿ, ಜೆರಟಗಿ, ನಂದವಾಡಗಿ, ಅಡವಿ ಅಮರೇಶ್ವರ, ಮಸ್ಕಿಿ, ಮಹಾಂತಿನಮಠ ಪೂಜ್ಯರ ಸಮಕ್ಷಮ ಗ್ರಾಾಮದ ಶಾಂತಲಿಂಗಯ್ಯ ಹಿರೇಮಠ ಪೌರೋಹಿತ್ಯದಲ್ಲಿ 2 ಜೋಡಿ ನೂತನ ವಧುವರರು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆೆ ಕಾಲಿಟ್ಟರು.
ಪಲ್ಲಕ್ಕಿಿ ಮೆರವಣಿಗೆ : ಬಸವಾದಿ ಶರಣರ ವಚನ ಸಾಹಿತ್ಯ ಹಾಗೂ ಘನಮಠೇಶ್ವರರ ಭಾವಚಿತ್ರವಿರಿಸಿದ ಪಲ್ಲಕ್ಕಿಿ ಮೆರವಣಿಗೆ ಗ್ರಾಾಮದ ಪ್ರಮುಖ ಬೀದಿಗಳಲ್ಲಿ ತಾರಾ ನಗರ ಚಂದ್ರಯ್ಯಸ್ವಾಾಮಿಗಳ ವೀರಗಾಸೆ ಮತ್ತು ನಾನಾ ಕಲಾಗೊಂಬೆ, ಮರಗುಣಿತ ಡೋಲು ಭಾಜಾ ಭಂಜಂತ್ರಿಿ ಕಳಸ ಕನ್ನಡಿಯೊಂದಿಗೆ ವೈಭವದಿಂದ ಮೆರವಣಿಗೆ ನಡೆಯಿತು. ಜೆರಟಗಿ ಮಹಾಂತ ಸ್ವಾಾಮಿಗಳು, ಘನಮಠೇಶ್ವರ ಮಠದ ಗುರುಬಸವಶ್ರೀಗಳು ಮಹಾಂತ ಶ್ರೀಗಳು, ಹಾಲ್ವಿಿ ಮಹಾಂತ ಶ್ರೀಗಳು, ಯಡ್ರಾಾಮಿ ಸಿದ್ದಲಿಂಗ ಸ್ವಾಾಮಿಗಳು ರಾಜಶೇಖರ ಶಿವಾಚಾರ್ಯರು ಚೌದಾಪುರಿ, ನಂದವಾಡಗಿ ಚನ್ನಬಸವ ಶಿವಾಚಾರ್ಯರು, ಮಸ್ಕಿಿ ವರ ರುದ್ರಮುನಿ ಶಿವಾಚಾರ್ಯರು ಮಹಾಂತಿನಮಠ ಮಹಾಂತ ಶಿವಾಚಾರ್ಯರ ಪ್ರಶಾಂತ ದೇವರ ಸಮ್ಮುಖದಲ್ಲಿ ಉತ್ಸವಕ್ಕೆೆ ಚಾಲನೆ ನೀಡಲಾಯಿತು.
ಸಹಸ್ರಾಾರು ಭಕ್ತರ ಆಗಮನ: ಶ್ರೀ ಮಠದ ಸದ್ಬಕ್ತರಾದ ಕೆ.ಅಮರೇಗೌಡ ಪಾಟೀಲ್, ಸಿದ್ದರಾಮಪ್ಪ ಸಾಹುಕಾರ, ಆದನಗೌಡ ಪಾಟೀಲ್, ಡಾ, ಸಿ.ಬಿ ನಾವದಗಿ, ಮಹಾಂತಪ್ಪ ನಾವದಗಿ ವಕೀಲರು, ದೊಡ್ಡಪ್ಪ ಸಾಹುಕಾರ, ಮರೇಗೌಡ ಪಾಟೀಲ್, ಶ್ರೀನಿವಾಸಮೂರ್ತಿ ಕುಲಕರ್ಣಿ, ಗವಿಸಿದ್ದಪ್ಪ ಸಾಹುಕಾರ, ಗುರುನಾಥರೆಡ್ಡಿಿ ದೇಸಾಯಿ, ರಮೇಶ ಶಾಸಿ, ವೆಂಕನಗೌಡ ಬಸಾಪೂರ, ಮಲ್ಲನಗೌಡ ಹಳ್ಳಿಿ, ಅಯ್ಯನಗೌಡ, ವೀರೇಶ ವಿರಕ್ತಮಠ, ಡಾ,ಶರಣಪ್ಪ ಜಾವೂರು, ರಡ್ಡೆೆಪ್ಪ ಕಾಚಾಪೂರ ಅಮರಣ್ಣ ಹಳ್ಳಿಿ, ನಾಗಭೂಷಣ ರೇವಣಿಮಠ, ಶ್ರೀಧರ ಕಿರಗಿ, ಶರಣಗೌಡ ಬಸಾಪೂರ ಸಂಗಣ್ಣ ಮಟ್ಟೂರು, ಮಲ್ಲಣ್ಣ, ಪಂಪಣ್ಣ, ಪ್ರಭು, ಚುನಾಯಿತ ಪ್ರತಿನಿಧಿಗಳು ಗಣ್ಯರು ನೂರಾರು ಯುವಕರು ಸಹಸ್ರಾಾರು ಭಕ್ತರಿದ್ದರು.
ಘನಮಠ ಶಿವಯೋಗಿಗಳ ಪಲ್ಲಕ್ಕಿ ಉತ್ಸವ ಸಾಮೂಹಿಕ ವಿವಾಹ, ಬೆಳ್ಳಿಛತ್ರಿ ಕಳಸಾರೋಹಣ

