ಸುದ್ದಿಮೂಲ ವಾರ್ತೆ ರಾಯಚೂರು, ಜ.24:
ವಾಜಿಪೇಯಿ ನಗರ ನಿವೇಶನ ಯೋಜನೆಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮತ್ತು ದೇವರಾಜು ಅರಸು ವಿಶೇಷ ವರ್ಗದವರಿಗೆ ನಿವೇಶನ ಮಂಜೂರಿ ವಿಳಂಬ ಖಂಡಿಸಿ ಜ.26 ರಂದು ಜಿಲ್ಲಾಾ ಉಸ್ತುವಾರಿ ಸಚಿವರಿಗೆ ಘೇರಾವ್ ಹಾಕಿ ಪ್ರತಿಭಟನೆ ಮಾಡಲು ಸ್ಲಂ ನಿವಾಸಿಗಳ ಕ್ರಿಿಯಾ ವೇದಿಕೆ ನಿರ್ಧರಿಸಿದೆ.
ಇಂದು ಉದ್ಯಾಾನವನದಲ್ಲಿ ಸಮಿತಿ ಸಭೆ ನಡೆಸಿ ವಾಜಿಪೇಯಿ ನಗರ ನಿವೇಶನ ಯೋಜನೆಯಲ್ಲಿ ಸರ್ವೆ ನಂ 581, 726/727, 929/2 ರಲ್ಲಿ ಭೂ ಮಂಜೂರಿಯಾಗಿ ನಿವೇಶನ ಹಕ್ಕು ಪತ್ರಗಳನ್ನು ಕೂಡ ಹಂಚಿಕೆ ಮಾಡಿ 10 ವರ್ಷಗಳಾದರೂ ಇದುವರೆಗೂ ನಿವೇಶನ ಹಂಚಿಕೆ ಮಾಡದೆ ಜಿಲ್ಲಾಾಡಳಿತ ಮತ್ತು ಮಹಾನಗರ ಪಾಲಿಕೆಯವರು ನಿರ್ಲಕ್ಷ್ಯ ವಹಿಸಿದ್ದಾಾರೆ. ಸಚಿವರು ಸಭೆ, ಕಾರ್ಯಕ್ರಮ, ಧ್ವಜಾರೋಹಣಕ್ಕೆೆ ಬಂದು ಹೋಗುತ್ತಿಿದ್ದಾಾರಷ್ಟೆೆ ಸಮಸ್ಯೆೆ ಪರಿಹರಿಸುತ್ತಿಿಲ್ಲಘಿ. ಹೀಗಾಗಿ, ಸಚಿವರಿಗೆ ಘೇರಾವ್ ಹಾಕಿ ತಮಗೆ ನೀಡಿದ್ದ ಭರವಸೆ ಬಗ್ಗೆೆ ನೆನಪಿಸುತ್ತೇವೆ ಎಂದು ಅಧ್ಯಕ್ಷ ಜನಾರ್ಧನ ಹಳ್ಳಿಿಬೆಂಚಿ ಎಚ್ಚರಿಸಿದರು.

