ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.07:
ಶ್ರಿಡಿ.21 ರಿಂದ 24 ರವರೆಗೆ ನಡೆಯುವ ಪಲ್ಸ್ ಪೋಲಿಯೊ ಅಭಿಯಾನ ಕಾರ್ಯಕ್ರಮದಲ್ಲಿ 0 ದಿಂದ 5 ವರ್ಷದೊಳಗೆ ಎಲ್ಲ ಮಕ್ಕಳಿಗೆ ಕಡ್ಡಾಾಯವಾಗಿ ಪೋಲಿಯೊ ಲಸಿಕೆ ಹಾಕಿಸಿ ಎಂದು ತಹಶೀಲ್ದಾಾರ್ ಅರುಣ್ ಎಚ್.ದೇಸಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಟಾಸ್ಕ್ ೆರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಒಟ್ಟು 250 ಲಸಿಕಾ ಕೇಂದ್ರಗಳು ಹಾಗೂ ಬಸ್ ನಿಲ್ದಾಾಣದಲ್ಲಿ 2 ವಿಶೇಷ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಪಲ್ಸ್ ಪೋಲಿಯೊ ಕುರಿತು ಪ್ರತಿ ಗ್ರಾಾಮ ಪಂಚಾಯಿತಿಗಳಲ್ಲಿ ಕಸದ ವಾಹನಗಳು, ದೇವಸ್ಥಾಾನ, ಮಸೀದಿಗಳ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಬೇಕು. ಶಾಲಾ ಮಕ್ಕಳಿಂದ ಜಾಥಾ ನಡೆಸಿ ಜಾಗೃತಿ ಮೂಡಿಸಬೇಕು. ನಗರಸಭೆಯಿಂದ ನಗರದ ಪ್ರಮುಖ ವೃತ್ತಗಳಲ್ಲಿ ಬ್ಯಾಾನರ್ ಮತ್ತು ಪೋಸ್ಟರ್ ಹಾಕಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬೂತ್ ದಿನದಂದು ಕಡ್ಡಾಾಯವಾಗಿ ಭಾಗವಹಿಸಿ ಮಕ್ಕಳನ್ನು ಕರೆತಂದು ಲಸಿಕೆ ಹಾಕಿಸಬೇಕು. ಜೆಸ್ಕಾಾಂ ಇಲಾಖೆ ಡಿ.14 ರಿಂದ 24 ರವರೆಗೆ ನಗರ ಮತ್ತು ಗ್ರಾಾಮೀಣ ಪ್ರದೇಶಗಳಲ್ಲಿ ಸತತ ವಿದ್ಯುತ್ ಪೂರೈಸಬೇಕು. ಬಸ್ ನಿಲ್ದಾಾಣದಲ್ಲಿ 10 ನಿಮಿಷ ಬಸ್ ನಿಲುಗಡೆ ಮಾಡಿ ಪ್ರಚಾರ ಮಾಡಬೇಕು. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕಾರ್ಮಿಕ ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸಲು ಕಾರ್ಮಿಕ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಖಾಸಗಿ ಆಸ್ಪತ್ರೆೆಗಳಿಗೆ ಬರುವ ಮಕ್ಕಳಿಗೂ ತಪ್ಪದೇ ಲಸಿಕೆ ಹಾಕಬೇಕು ಎಂದು ಸೂಚನೆ ನೀಡಿದರು.
ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆೆಯ ಮುಖ್ಯವೈದ್ಯಾಾಧಿಕಾರಿ ಡಾ.ಸುರೇಶಗೌಡ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಅಯ್ಯನಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ, ಕಾರ್ಮಿಕ ಇಲಾಖೆಯ ನಿರೀಕ್ಷಕಿ ವಿಜಯಲಕ್ಷ್ಮಿಿ, ಸಿಡಿಪಿಓಗಳಾದ ಲಿಂಗನಗೌಡ, ಅಶೋಕ ಉಪಸ್ಥಿಿತರಿದ್ದರು.
ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೊ ಹಾಕಿ

