ಸುದ್ದಿಮೂಲ ವಾರ್ತೆ ಬೀದರ್, ಜ.19:
ಔರಾದ (ಬಾ) ಪಟ್ಟಣದ ಎಪಿಎಂಸಿ ಹಾಗೂ ಸರ್ಕಾರಿ ಗೈರಾಣು ಭೂಮಿಗಳಲ್ಲಿ ಕಳೆದ ಸುಮಾರು 40 ವರ್ಷಗಳಿಂದ ವಾಸವಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ 750ಕ್ಕೂ ಹೆಚ್ಚು ಕುಟುಂಬಗಳಿಗೆ ಇದುವರೆಗೂ ಹಕ್ಕುಪತ್ರ (ಾರಂ ನಂ.10) ನೀಡದೆ ಹಾಗೂ ಹದ್ದುಬಸ್ತ್ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾಾರ್ ಕಚೇರಿ ಆವರಣದಲ್ಲಿ ಅಹೋರಾತ್ರಿಿ ಅನಿರ್ದಿಷ್ಟಾಾವಧಿಯ ಧರಣಿ ಸತ್ಯಾಾಗ್ರಹ ಆರಂಭಿಸಲಾಗಿದೆ.
ಸರ್ವೆ ನಂ.183ರಲ್ಲಿ ಇರುವ 40 ಎಕರೆ 30 ಗುಂಟೆ ಭೂಮಿಯಲ್ಲೂ ಹಾಗೂ ಸರ್ವೆ ನಂ.205ರಲ್ಲಿ ಇರುವ 50 ಎಕರೆ 11 ಗುಂಟೆ ಭೂಮಿಯಲ್ಲೂ ತಲಾ 2 ಎಕರೆ ಭೂಮಿ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗಾಗಿ ಮಂಜೂರು ಮಾಡಲಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಇದುವರೆಗೆ ಯಾವುದೇ ಪ್ರಗತಿ ಸಾಧಿಸಿಲ್ಲ. ಈ ಹಿನ್ನೆೆಲೆಯಲ್ಲಿ ಇಂಡಿಯನ್ ನ್ಯಾಾಷನಲ್ ಭೀಮ್ ಆರ್ಮಿಯ ಸಂಸ್ಥಾಾಪಕ ರಾಜ್ಯಾಾಧ್ಯಕ್ಷ ದೀಲಿಪಕುಮಾರ ವರ್ಮಾ ಅವರು ತಹಸೀಲ್ದಾಾರರಿಗೆ ಮನವಿ ಪತ್ರ ಸಲ್ಲಿಸಿ, ಧರಣಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಧರಣಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಶೇಖರ ಶೇರಿಕಾರ, ಔರಾದ ತಾಲೂಕು ಅಧ್ಯಕ್ಷ ಪ್ರವೀಣ ಕಾರಂಜೆ, ಗೌರವಾಧ್ಯಕ್ಷ ಸಂಪತ್ತ ಸಕ್ಪಾಾಲ್, ಉಪಾಧ್ಯಕ್ಷ ಸಂತೋಷ ಸೂರ್ಯವಂಶಿ, ಖಜಾಂಚಿ ಸುಂದರ ಮೇತ್ರೆೆ, ಪ್ರೇೇಮ ಘೋಡಬೋಲೆ, ಪ್ರಧಾನ ಕಾರ್ಯದರ್ಶಿ ದಿನೇಶ ಶಿಂಧೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಹುಲ್ ವಿ. ಖಂದಾರೆ ಸೇರಿದಂತೆ ಹಲವು ಮುಖಂಡರು ಉಪಸ್ಥಿಿತರಿದ್ದರು.
ಅನಿರ್ದಿಷ್ಠಾವಧಿ ಧರಣಿ : ಅಲೆಮಾರಿ-ಅರೆ ಅಲೆಮಾರಿ ಜನಾಂಗದವರಿಗೆ ಹಕ್ಕು ಪತ್ರ ನೀಡಿ

