ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.23: ಭಾರತೀಯ ವಜ್ರಾಭರಣ ವಲಯದಲ್ಲಿ ಸೊಬಗು ಮತ್ತು ನಾವೀನ್ಯತೆಗೆ ಹೆಸರಾದ ಕೀರ್ತಿಲಾಲ್ ನ ಗ್ಲೋ ಬೈನಿಂದ ಸೊಗಸಾದ ಸಂಗ್ರಹ “ಮೀರಾಜ್” ಆಭರಣಗಳನ್ನು ಪರಿಚಯಿಸಲಾಗಿದೆ ಈ ಸಂಗ್ರಹ ಸ್ನಿಗ್ದ ಸೌಂದರ್ಯದ ಪ್ರತೀಕವಾಗಿದ್ದು, ದೈನಂದಿನ ಜೀವನದಲ್ಲಿ ಈ ಆಭರಣಗಳು ಜಾದು ಮಾಡಲಿವೆ. ವೃತ್ತಿಪರ ಜೀವನದ ಪಯಣಕ್ಕೆ ಮೆರಗು ನೀಡುತ್ತವೆ.
ನಗರದ ಎಚ್.ಎಸ್.ಆರ್. ಬಡಾವಣೆಯಲ್ಲಿ ಅಮೂಲ್ಯ ಮಿರಾಜ್ ಸಂಗ್ರಹಗಳನ್ನು ಪರಿಚಯಿಸಲಾಗಿದೆ. ನಟಿ, ರೂಪದರ್ಶಿ ಶ್ವೇತ ಆರ್. ಪ್ರಸಾದ್ ಮಿರಾಜ್ ಆಭರಣಗಳನ್ನು ಪರಿಚಯಿಸಿ, ವಡವೆಗಳಿಗೆ ಮತ್ತಷ್ಟು ಹೊಳಪು ತಂದರು.ಮಿರಾಜ್ ಆಭರಣಗಳು ಅತ್ಯಂತ ಹಗುರವಾಗಿದ್ದು, ಯುವ ಸಮೂಹಕ್ಕೆ ಒಪ್ಪುವ ವಿನ್ಯಾಸಗಳನ್ನು ಹೊಂದಿದೆ. ಆಭರಣಗಳು ಅತ್ಯಂತ ಹಗುರವಾಗಿದ್ದು, ಧರಿಸಿದರೆ ಆಕರ್ಷವಾಗಿ ಕಾಣುತ್ತವೆ. ಜೊತೆಗೆ ಬೆಲೆಯೂ ಕಡಿಮೆ. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಿಗೂ ಆಭರಣ ಖರೀದಿ ಹಿತಕರವಾಗಿರಲಿದೆ.
ಆಗಸದಲ್ಲಿ ಸಂಜೆಯ ಪ್ರಶಾಂತ ಕ್ಷಣಗಳಲ್ಲಿ ಸೂರ್ಯ ಚಂದ್ರ ಸಮಾಗಮ ಸಂದರ್ಭದಲ್ಲಿ ಕಂಡು ಬರುವ ಬಣ್ಣದ ಹೊಳಪು ಈ ಆಭರಣಗಳಿವೆ. ಮಿರಾಜ್ ಆಗಸದಲ್ಲಿ ಬೆಳಕು ಮತ್ತು ನೆರಳಿನ ಮೋಡಿ ಮಾಡುವ ಸಂಕೇತದಂತೆ ಸೂಕ್ಮವಾಗಿ ರಚಿಸಲಾಗಿದೆ. ಕೈ ಕುಸರಿಯಿಂದಾಗಿ ಆಭರಣಗಳ ತೇಜಸ್ಸು ಹೆಚ್ಚಿದ್ದು, ಕಾಲಾತೀತವಾದ ವಿನ್ಯಾಸಗಳಲ್ಲಿ ಹೊಂದಿಸಲಾಗಿದೆ.
ಗ್ಲೋ ನ ಕ್ರೀಯೇಟೀವ್ ಡೈರೆಕ್ಟರ್ ಸೀಮಾ ಮೆಹ್ತಾ ಮಾತನಾಡಿ, “ನಾವು ನಿಸರ್ಗದತ್ತ ಸಾರವನ್ನು ಸೆರೆ ಹಿಡಿಯಲು ಮತ್ತು ಅದನ್ನು ಧರಿಸಬಹುದಾದ ಕಲೆಯನ್ನಾಗಿ ಪರಿವರ್ತಿಸಲು ಬಯಸಿದ್ದೇವೆ. ಮಿರಾಜ್ ಸಂಗ್ರಹದ ಪ್ರತಿಯೊಂದು ತುಣುಕು ನಮ್ಮನ್ನು ಆವರಿಸಿರುವ ಸೌಂದರ್ಯದ ಪ್ರತಿಬಿಂಬವಾಗಿದ್ದು, ಇದನ್ನು ಆನಂದಿಸುವುದನ್ನು ನೆನಪಿಸುತ್ತದೆ” ಎಂದರು.
ಮಿರಾಜ್ ಸಂಗ್ರಹ ಹೇಗಿದೆ ಎಂದರೆ ಆಕಾಶ ಕಾಯಗಳ ಆಕರ್ಷಕ ಕಮಾನುಗಳನ್ನು ಅನುಕರಿಸುವ ಸೂಕ್ಷ್ಮ ಹಾರಗಳಿಂದ ಹಿಡಿದು ಮರು ಭೂಮಿಯ ಮರಳಿನಲ್ಲಿ ಹೊಳೆಯುವಂತಹ ಉಂಗುರಗಳವರೆಗೆ ಅದ್ಭುತ ಶ್ರೇಣಿಯನ್ನು ಒಳಗೊಂಡಿದೆ. ಪ್ರತಿಯೊಂದು ಆಭರಣ ಅಸಾಧಾರಣ ಕುಸುರಿ, ವಿನ್ಯಾಸ, ಸೊಬಗಿನಿಂದ ಕೂಡಿದೆ. ಮಿರಾಜ್ ಸಂಗ್ರಹ ವೈಯಕ್ತಿಕ ಆದ್ಯತೆಗಳಿಗೆ ಸರಿಹೊಂದುವಂತೆ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ನೀಡುತ್ತದೆ. ಗ್ರಾಹಕರು ತಮ್ಮ ವಿಶಿಷ್ಟ ಶೈಲಿ ಮತ್ತು ವ್ಯಕ್ತಿತ್ವಕ್ಕೆ ಇವು ಒಪ್ಪುವಂತಿವೆ ಎಂದು ಹೇಳಿದರು.