ಸುದ್ದಿಮೂಲ ವಾರ್ತೆ ಸಿರವಾರ, ಜ.21:
ಸ್ಥಳೀಯ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ ನೋಂದಣಿಯಲ್ಲಿ ಅಕ್ರಮದ ಘಾಟು ಬಯಲಿಗೆ ಬಂದಿದೆ.
ಒಂದಲ್ಲ ಒಂದು ಲೋಪಗಳಿಗೆ ಸರ್ಕಾರಿ ಕಚೇರಿ ಸಿಬ್ಬಂದಿಗಳು ಕಾರಣವಾಗುತ್ತಿಿರುವುದು ಇತ್ತೀಚೆಗೆ ಹೆಚ್ಚುತ್ತಿಿವೆ ಆ ಸಾಲಿಗೆ ಇಲ್ಲಿನ ಪಟ್ಟಣ ಪಂಚಾಯತಿಯ ದಿನಗೂಲಿ ಸಿಬ್ಬಂದಿ ಕಂಪ್ಯೂೂಟರ್ ಡಾಟಾ ಆಪರೇಟರ್ ಸಚಿನ್ ಚಾಗಿ ಮತ್ತೊೊಂದು ಸೇರ್ಪಡೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವರ್ಷ ಮಾನ್ವಿಿ ಪುರಸಭೆಗೆ ಸಚಿನ್ ಚಾಗಿ ವರ್ಗಾವಣೆ ಮಾಡಲಾಗಿದೆ. 2025 ಜನವರಿಯಿಂದ ನವೆಂಬರ್ವರೆಗೆ 5840 ಜನನ ಹಾಗೂ 29 ಮರಣ ಪ್ರಮಾಣ ಪತ್ರ ಅಕ್ರಮವಾಗಿ ನೀಡಿರುವುದಾಗಿ ಮೇಲಾಧಿಕಾರಿಗಳ ಗಮನಕ್ಕೆೆ ಬಂದಿದೆ.
ಒಂದು ವರ್ಷದಿಂದ ಸಿರವಾರ ಪಟ್ಟಣ ಪಂಚಾಯಿತಿಯಿಂದ ಸರ್ಕಾರದ ಜನನ ಮರಣ ನೋಂದಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡದಿರುವುದಕ್ಕೆೆ ಅನುಮಾನಗೊಂಡ ಹಿನ್ನೆೆಲೆಯಲ್ಲಿ ಇಲಾಖೆಯ ಅಪರ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಿಕ ನಿರ್ದೇಶಕರ ಜಂಟಿ ತನಿಖಾ ತಂಡ ಭೇಟಿ ನೀಡಿ ಮಾಹಿತಿ ತಡಕಾಡಿದ್ದರು.
ಜಿಲ್ಲಾ ಸಾಂಖ್ಯಿಿಕ ಸಂಗ್ರಹಣಾಧಿಕಾರಿ, ಜಿಲ್ಲಾ ಅಪರ ಜನನ-ಮರಣ ನೋಂದಣಾಧಿಕಾರಿಗಳಿಗೆ ಪ್ರತಿ ವರ್ಷ ಕಾನೂನು ಮಾಹಿತಿ ಹಾಗೂ ಸರ್ಕಾರಿ ಖಜಾನೆ ಲೆಕ್ಕ ಶೀರ್ಷಿಕೆ ಪ್ರತಿ ತಿಂಗಳು ಸಂದಾಯ ಮಾಡದೆ ಬಾಕಿ ಇರುವುದು ಪತ್ತೆೆ ಮಾಡಲಾಗಿತ್ತು.
ಸಾರ್ವಜನಿಕರು ಜನನ ಮತ್ತು ಮರಣ ಪ್ರಮಾಣ ಪತ್ರಕ್ಕಾಾಗಿ ಸೂಕ್ತ ದಾಖಲೆಗಳು ಸಲ್ಲಿಸದಿದ್ದರೂ, ಪ್ರಮಾಣ ಪತ್ರ ನೀಡಿ ಅದರ ಹೆಸರಲ್ಲಿ ಶುಲ್ಕ ಪಾವತಿಸಿಕೊಂಡ ಹಣ ದುರ್ಬಳಕೆ, ನೈರ್ಮಲ್ಯ ಆರೋಗ್ಯ ಅಧಿಕಾರಿ ಐಡಿ, ಲಾಗಿನ್ ಮಾಡಿದಾಗ ಒಟಿಪಿಗಾಗಿ ನೀಡಿದ್ದ ಅವರ ಮೊಬೈಲ್ ಸಂಖ್ಯೆೆ ದುರ್ಬಳಕೆ ಮಾಡಿಕೊಂಡಿರುವುದು ತನಿಖೆಗೆ ಅಧಿಕಾರಿಗಳ ಗಮನಕ್ಕೆೆ ಬಂದಿದೆ. ಮುಖ್ಯಾಾಧಿಕಾರಿ ಜೊತೆಗೆ ನೈರ್ಮಲ್ಯ ಅಧಿಕಾರಿಯ ಗಮನಕ್ಕೆೆ ತಾರದೆ ಹಣ ಪಡೆದು ಪ್ರಮಾಣ ಪತ್ರ ವಿತರಣೆ ಮಾಡಿರುವುದಾಗಿ ಸಿರವಾರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸರಕಾರಕ್ಕೆೆ ಪಾವತಿ ಮಾಡಬೇಕಾದ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದು ಇಲಾಖೆಯ ತನಿಖೆಯ ಜೊತೆಗೆ ಸ್ಥಳೀಯ ಪಟ್ಟಣ ಪಂಚಾಯತಿ ಯಿಂದ ಶಿಸ್ತುಕ್ರಮ ಕೈಗೊಂಡು ಬಗ್ಗೆೆ ವರದಿ ಕೇಳಿದ ಕಾರಣ ಬೆಂಗಳೂರು ಹಾಗೂ ಜಿಲ್ಲೆಯ ಅಧಿಕಾರಿಗಳ ಆದೇಶದ ಮೇರೆಗೆ ಪಟ್ಟಣ ಪಂಚಾಯತಿ ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಪ್ರಾಾಥಮಿಕ ತನಿಖೆಯಲ್ಲಿ ಆರೋಪಿ ಸಚಿನ್ ಚಾಗಿಯೇ ತಪ್ಪೊೊಪ್ಪಿಿಗೆ ಪತ್ರ ನೀಡಿ, 1ಲಕ್ಷದ 50 ಸಾವಿರ ರೂಪಾಯಿ ಪಾವತಿ ಮಾಡಿದ್ದಾನೆ.
ಇತ್ತೀಚೆಗೆ ಪಟ್ಟಣ ಪಂಚಾಯತಿಗೆ ಲೋಕಾಯುಕ್ತರ ತಂಡ ಭೇಟಿ ನೀಡಿ ತನಿಖೆ ಮಾಡಿ ದಾಖಲೆ ವಶಕ್ಕೆೆ ತೆಗೆದುಕೊಂಡು ಹೋಗಿದ್ದಾರೆ. ಈ ಕ್ರಮದಲ್ಲಿ ಭಾಗಿಯಾದವರು ಹೆಸರು ಇನ್ನೂ ಬೆಳಕಿಗೆ ಬಂದಿಲ್ಲ ದಿನಗೂಲಿ ನೌಕರ ಸಚಿನ್ ಮಾತ್ರ ಮುಖ್ಯ ಆರೋಪಿಯಾಗಿದ್ದಾನೆ. ಈ ಬಗ್ಗೆೆ ವಂಚನೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿಿದೆ ಎಂದು ಸಿಪಿಐ ಎಂ.ಶಶಿಕಾಂತ ಸುದ್ದಿಮೂಲಕ್ಕೆೆ ತಿಳಿಸಿದ್ದಾಾರೆ.
ಅಚ್ಚರಿ ಎಂದರೆ ಲಾಗಿನ್ಗೆ ಮೊಬೈಲ್ ಸಂಖ್ಯೆೆ ನೀಡಿದ್ದ ನೈರ್ಮಲ್ಯ ಅಧಿಕಾರಿಗೆ ಒಟಿಪಿ ಬಾರದೆ ಇರುವುದನ್ನೂ ಗಮನಿಸದೆ ಇರುವುದು ಮತ್ತೊೊಂದು ಮುಖ್ಯಾಾಧಿಕಾರಿಯೂ ಗಮನಿಸದೆ ಕೆಲಸ ಮಾಡಿರುವುದು ವಿಪರ್ಯಾಸವೊ ಅಥವಾ ಇವರ ಪಾತ್ರದ ಬಗ್ಗೆೆಯೂ ತನಿಖೆಯಾದರೆ ಹುಳುಕು ಯಾರದ್ದು ಎಂಬುದು ಹೊರ ಬರಬಹುದಾಗಿದೆ.
ಸಿರವಾರ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಮತ್ತು ತಂದ ದಿನಗೂಲಿ ನೌಕರನ ಕರಾಮತ್ತುಘಿ ಠಾಣೆ ಏರಿದ ಜನನ,ಮರಣ ನೋಂದಣಿ ಪತ್ರಘಿ,ಶುಲ್ಕದ ಗೋಲ್-ಮಾಲ್

