ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.09:
ತಾಲ್ಲೂಕಿನ ಗೋಮರ್ಸಿ ಗ್ರಾಾಮದಲ್ಲಿ ಹಿಂದೂ-ಮುಸ್ಲಿಿಂರ ಭಾವೈಕ್ಯತೆ ಸಂಕೇತವಾದ ಹಜರತ್ ಮೀರಾಂ ಸೈಯದ್ ಶಾಹ ಶಂಶುದ್ದೀನ್ ಖಾದ್ರಿಿ ಅವರ ಉರುಸು ಅದ್ದೂರಿಯಾಗಿ ನಡೆಯಿತು.
ಉರುಸಿನ ಪ್ರಯುಕ್ತ ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮ ಸೇರಿದಂತೆ ಇನ್ನಿಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗಿನ ಜಾವ 5ಗಂಟೆಯಿಂದ ಸೈಯದ್ ಖಾಸೀಂ ಖಾದ್ರಿಿ ಉರ್ ಸರ್ಕಾರ್ ಪಾಷಾ ಸಾಹೇಬ್ ನೇತೃತ್ವದಲ್ಲಿ ಗಂಧ ಮೆರವಣಿಗೆ ನಡೆಯಿತು. ಬಳಿಕ ಧಾರ್ಮಿಕ ವಿಧಾನಗಳ ಪ್ರಕಾರ ಪೂಜಾ-ಪ್ರಾಾರ್ಥನೆಗಳು ನಡೆದವು. ಗೋಮರ್ಸಿ ಸೇರಿ ಸುತ್ತಮುತ್ತಲಿನ ಹಳ್ಳಿಿಗಳಿಂದ ಎಲ್ಲಾಾ ಜಾತಿ ಜನಾಂಗದ ಜನರು ದರ್ಗಾದಲ್ಲಿ ಸಕ್ಕರೆ ಸಮರ್ಪಿಸಿ, ಭಕ್ತಿಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಸೈಯದ್ ಇಸ್ಮಾಾಯಿಲ್ ಖಾದ್ರಿಿ ಅತರ್ಬಾಬಾ ಜಾಗೀರ್ದಾರ್ ಗೋಮರ್ಸಿ, ಸೈಯದ್ ಮೈನುದ್ದೀನ್ ಖಾದ್ರಿಿ ತೆಕ್ಕಲಕೋಟೆ, ಸೈಯದ್ ಷಾ ತಾಹೇರ್ಖಾದ್ರಿಿ ಜಂತಕಲ್, ಸೈಯದ್ ಹಾಜಂಖಾದ್ರಿಿ ಕಂಪ್ಲಿಿ, ಸೈಯದ್ ತುರಾಬ್ ಖಾದ್ರಿಿ ಕಂಪ್ಲಿಿ, ಸೈಯದ್ ಮತೀನ್ ಖಾದ್ರಿಿ ಕಂಪ್ಲಿಿ, ಖಾದರ್ಭಾಷಾ ತಾತನವರು ಗೋಮರ್ಸಿ, ಸೈಯದ್ ಸಜ್ಜಾಾದ್ ಖಾದ್ರಿಿ, ಸೈಯದ್ ಬಾಬಾ ಖಾದ್ರಿಿ, ಮುಖಂಡರಾದ ಸೈಯದ್ ಸಜ್ಜಾಾದ್ಖಾದ್ರಿಿ, ಸೈಯದ್ ಯುನೂಸ್ಪಾಷಾ ಖಾದ್ರಿಿ, ಮರೇಗೌಡ, ಬಸನಗೌಡ, ದೊಡ್ಡಬಸನಗೌಡ, ಶ್ರೀನಿವಾಸ, ಖಲೀಲ್ಪಾಷಾ, ಮಹ್ಮದ್ಸಾಬ್, ರಸೂಲ್ಸಾಬ್, ಬುಡ್ಡಾಾಸಾಬ್ ಮುಜಾವಾರ್, ಶಾಮೀದ್, ಶಾಹೀದ್ ಸೇರಿದಂತೆ ಮಾಡಶಿರವಾರ ಹಾಗೂ ಗೋಮರ್ಸಿ ಗ್ರಾಾ.ಪಂ. ಸದಸ್ಯರು, ಗ್ರಾಾಮಸ್ಥರು ಇತರರು ಇದ್ದರು. ಉರುಸಿನ ಅಂಗವಾಗಿ ರಾತ್ರಿಿ ಖವ್ವಾಾಲಿ ಕಾರ್ಯಕ್ರಮದಲ್ಲಿ ಭಕ್ತರ ಮನಸೂರೆಗೊಂಡಿತು.
ಅದ್ದೂರಿಯಾಗಿ ಜರುಗಿದ ಗೋಮರ್ಸಿ ಶಂಶುದ್ದೀನ್ ಖಾದ್ರಿ ಉರುಸು

