ಸುದ್ದಿಮೂಲ ವಾರ್ತೆ
ನೆಲಮಂಗಲ,ನ.29 : ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಹಾಗೂ ದೇಹಕ್ಕೊಪ್ಪುವ ಆಹಾರ ತೆಗೆದುಕೊಳ್ಳಬೇಕು ಎಂದು ಮೇಲಣವಿ ಮಠದ ವೀರಸಿಂಹಾಶನ ಸಂಸ್ಥಾನ ಮಠ ಡಾ.ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಜಿಗಳು ತಿಳಿಸಿದರು.
ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗಾ ಕ್ಷೇತ್ರದ ಕಂಬಾಳುವಿನ ಶ್ರೀ ಮೇಲಣವಿ ಮಠದ ವೀರಸಿಂಹಾಶನ ಸಂಸ್ಥಾನ ಮಠ ಹಾಗೂ ತುಮಕೂರಿನ ಉನ್ನತಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಚಾಲನೆ ನೀಡಿ ಮಾತನಾಡಿದರು.
ಮನುಷ್ಯನ ಶರೀರವನ್ನು ವಶಪಡಿಸಿಕೋಳ್ಳಲು ಬೇರೇ ಮಾರ್ಗವಿದೆ. ಆದರೆ, ನಮ್ಮ ಮಾನಸಿಕ ಓತ್ತಡದಿಂದ ಇಂದು ನಾವು ಅನಾರೋಗ್ಯಕ್ಕೆ ತುತ್ತಾಗಿದ್ದೇವೆ. ಪಟ್ಟಣಗಳಲ್ಲಿ ಆಸ್ಪತ್ತೆಗಳು ಸಿಗುತ್ತವೆ ಆದರೆ, ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಶಿಬಿರ ಮಾಡುತ್ತಿರುವ ಉನ್ನತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತಿರುವುದು ಶಾಲಾ ಮಕ್ಕಳು ಹಾಗೂ ಗ್ರಾಮಾಂತರ ಜನತೆಗೆ ಅನುಕೂಲವಾಗುತ್ತದೆ ಎಂದರು.
ಶಿವಗಂಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಬಿ. ಪ್ರಭುದೇವ ಮಾತನಾಡಿ, ನಮ್ಮ ಜೀವನದಲ್ಲಿ ನಾವುಗಳು ಅಧಿಕ ಓತ್ತಡದಿಂದ ಅನಾರೋಗ್ಯ ಹೆಚ್ಚಾಗುತ್ತಿದೆ. ಇಂದು ನಾವು ತಿನ್ನುವ ಆಹಾರವೇ ನಮ್ಮನ್ನು ಆನಾರೋಗ್ಯಕ್ಕೆ ಒಡ್ಡುತ್ತಿದೆ. ಹೀಗಾಗಿ, ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆ ಮಾಡಿಕೊಳ್ಳಿ ಎಂದರು.
ಉನ್ನತಿ ಆಸ್ಪತ್ರೆಯ ಫಿಸಿಷಿಯನ್ ಡಾ.ಅರವಿಂದ ಭಾಗವತ ಮಾತನಾಡಿ, ನಾವುಗಳು ಜಂಕ್ ಪುಡ್, ಅತಿ ಸಿಹಿ ತಿಂಡಿ, ಕೊಬ್ಬಿನ ಆಹಾರ , ಹೆಚ್ಚು ಕೆಫಿನ್ , ಧೂಮಪಾನ , ಮಧ್ಯಪಾನ ಮಾಡುವುದರಿಂದ ಅನಾರೋಗ್ಯ ಉಂಟಾಗುತ್ತದೆ. ಆದರೆ ಇವುಗಳನ್ನು ಬಿಟ್ಟು ನಾವು ಉತ್ತಮ ಆಹಾರ ತಿನ್ನುವುದರಿಂದ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಬಳ್ಳಾರಿಯ ಸಾವಿರ ಮಠದ ಡಾ.ವಾಮಾನ ಚಾರ್ಯ ಸ್ವಾಮಿಜಿ, ಶಿವಗಂಗೆ ಗ್ರಾ.ಪಂ. ಅಧ್ಯಕ್ಷ ಕೆ.ಬಿ.ಪ್ರಭುದೇವ, ಮಕ್ಕಳ ತಜ್ಞ ಡಾ.ಶ್ರೀನಿಧಿ, ಪ್ರಸೂತಿ ತಜ್ಞೆ ಪ್ರತಿಭ , ಶಸ್ತಚಿಕಿತ್ಸಾ ತಜ್ಞ ರಾಹುಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.