ಸುದ್ದಿಮೂಲ ವಾರ್ತೆ
ಬೆಂಗಳೂರು,ಏ.22: ಕೃಷ್ಣಾನಂದನಗರ ಹಾಗೂ ಮಾರಪ್ಪನಪಾಳ್ಯದ ಶಾಲೆಗಳಲ್ಲಿ 2000 ಕ್ಕೂ ಹೆಚ್ಚಿನ ಮುಸ್ಲಿಂ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರು ಎಸ್ ಎಸ್ಎಲ್ ಸಿ ವರೆಗೂ ಉಚಿತವಾಗಿ ವಿದ್ಯಾಭ್ಯಾಸ ಪಡೆಯುವಂತೆ ಅವಕಾಶ ಕಲ್ಪಿಸಲಾಗಿದೆ ಎಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯನವರು ತಿಳಿಸಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ, ಕಂಠೀರವನಗರದಲ್ಲಿ ಇಂದು, ರಂಜಾನ್ ಹಬ್ಬದ ಪ್ರಯುಕ್ತ, ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿ, ಅವರು ಮಾತನಾಡಿದರು.
ಕಂಠೀರವನಗರದಲ್ಲಿ ಶಾಲೆಯನ್ನು ನಿರ್ಮಿಸಿ ಮಕ್ಕಳು ಸೂಕ್ತವಾಗಿ ಶಿಕ್ಷಣವನ್ನು ಪಡೆಯಲು ಅನುಕೂಲ ಮಾಡಿದ್ದೇನೆ ಎಂದರು.
ನಾವೆಲ್ಲರೂ ಸಹೋದರರಾಗಿ ಪ್ರೀತಿ, ವಿಶ್ವಾಸದಿಂದ ಇರೋಣ. ಎಲ್ಲಾ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮಾಜಿ ಮಹಾನಗರ ಪಾಲಿಕೆ ಸದಸ್ಯ ಮಹದೇವು, ಡಾ.ನಾಗೇಂದ್ರ, ಉಮಾಪತಿ ನಾಯ್ಡು, ಪುಟ್ಟಸ್ವಾಮಿ, ಕೇಶವಮೂರ್ತಿ, ಮಂಜುನಾಥ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು