ಸುದ್ದಿಮೂಲ ವಾರ್ತೆ
ಕೆಜಿಎಫ್, ಆ.25: ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗೋಪೇನಹಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಾಲಕರು ಕಬಡ್ಡಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದೇ ಶಾಲೆಯ ಬಾಲಕಿಯರು ವಾಲಿಬಾಲ್ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಹೆಸರು ತಂದಿದ್ದಾರೆ. ಇದೇ ರೀತಿ ಜಿಲ್ಲಾ ಮಟ್ಟದಲ್ಲಿ ನಿಮ್ಮ ಗುರಿಯನ್ನು ಸಾಧಿಸಬೇಕೆಂದು ಶಿಕ್ಷಕರು ಹಾರೈಸಿದ್ದಾರೆ.
ದೈಹಿಕ ಶಿಕ್ಷಕರಾದ ಬಾಬು , ಬಿಆರ್ಪಿ ಶಂಕರ್ , ಶಾಲೆಯ ಮುಖ್ಯೋಪಾಧ್ಯಾಯ ರಂಗಪ್ಪ , ಮಕ್ಕಳಿಗೆ ತರಬೇತಿ ಕೊಟ್ಟಿರುವ ಯುವ ಪ್ರತಿಭೆ ಕಿರಣ್ ಮತ್ತು ಎಲ್ಲಾ ಪ್ರೀತಿಯ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಶಾಲೆಯ ಪರವಾಗಿ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿದ್ದಾರೆ.