ಸುದ್ದಿಮೂಲ ವಾರ್ತೆ ಬೆಂಗಳೂರು, ಅ.08:
ಪರಿಸರ ನಿಯಮ ಉಲ್ಲಂಘನೆ ಹಿನ್ನೆೆಲೆಯಲ್ಲಿ ರಾಮನಗರ ಜಿಲ್ಲಾಡಳಿತ ಬಂದ್ ಮಾಡಿರುವ ಜಾಲಿವುಡ್ ಸ್ಟುಡಿಯೋಗೆ ತಪ್ಪುು ಸರಿಪಡಿಸಿಕೊಳ್ಳಲು ಒಂದು ಅವಕಾಶ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗೆ ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಡಿಸಿಎಂ ಸೂಚನೆ ಹಿನ್ನೆೆಲೆಯಲ್ಲಿ ಜಿಲ್ಲಾಡಳಿತ ಸ್ಟುಡಿಯೋಗೆ ಜಡಿದಿರುವ ಬೀಗ ಮುದ್ರೆೆ ತೆರೆದು ಬಿಗ್ ಬಾಸ್ ಕಾರ್ಯಕ್ರಮಕ್ಕೆೆ ಅವಕಾಶ ಮಾಡಿಕೊಡಲಿದೆ.
ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿಿರುವ ಆರೋಪದ ಮೇಲೆ ಕರ್ನಾಟಕದ ಜನಪ್ರಿಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12’ ನಡೆಯುತ್ತಿಿದ್ದ ಜಾಲಿವುಡ್ ಸ್ಟುಡಿಯೋಸ್ ಮನೆಯನ್ನು ಸರ್ಕಾರ ಬಂದ್ ಮಾಡಿ ಬೀಗ ಜಡಿದಿತ್ತು. ಕೂಡಲೇ ಸ್ಟುಡಿಯೋ ನಿರ್ವಹಣೆ ಮಾಡುವವರು ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡಿ ಪರಿಸರ ನಿಯಮ ಉಲ್ಲಂಘನೆಯಾಗಿರುವುದನ್ನು ಸರಿಪಡಿಸಿಕೊಳ್ಳುವುದಾಗಿ ಮನವಿ ಮಾಡಿದ್ದರು. ಅಲ್ಲದೆ ಸ್ಟುಡಿಯೋಗೆ ಬೀಗ ಜಡಿದಿರುವ ಕ್ರಮವನ್ನು ಪ್ರಶ್ನಿಿಸಿ ಸ್ಟುಡಿಯೋ ಹೈಕೋರ್ಟ್ ಮೆಟ್ಟಿಿಲೇರಿತ್ತು. ಹೈಕೋರ್ಟ್ ವಿಚಾರಣೆಯನ್ನು ಗುರುವಾರಕ್ಕೆೆ ಮುಂದೂಡಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ‘ಜಾಲಿವುಡ್ ಸ್ಟುಡಿಯೋಸ್ಗೆ ’ಇದೊಂದು ಬಾರಿ ಅನುಮತಿ ನೀಡುವಂತೆ’ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಮ್ಮೆೆ ತಪ್ಪುು ಸರಿ ಮಾಡಿಕೊಳ್ಳಲು ಅವಕಾಶ ಕೊಡಿ ಎಂದಿದ್ದೇನೆ. ಉದ್ಯೋೋಗ ಮುಖ್ಯ, ಏನೇ ಇದ್ದರೂ ಅವರಿಗೊಂದು ಅವಕಾಶ ಕೊಡಿ. ಅವರು ಸಮಸ್ಯೆೆ ಬಗೆಹರಿಸಿಕೊಳ್ಳಲಿ. ನಮ್ಮಲ್ಲಿ ಮನೋರಂಜನೆ ಕೂಡ ಮುಖ್ಯ ಎಂದು ಹೇಳಿದ್ದಾರೆ. ಇದೇ ವೇಳೆ ’ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಕೆಲವರು ದೂರು ನೀಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ನಾನೇ ೆನ್ ಮಾಡಿ ಜಿಲ್ಲಾಧಿಕಾರಿ (ಡಿಸಿ) ಮತ್ತು ಪೊಲೀಸ್ ವರಿಷ್ಠಾಾಧಿಕಾರಿ (ಎಸ್ಪಿಿ) ಅವರಿಗೆ ಹೇಳಿದ್ದೇನೆ. ಕಾನೂನನ್ನ ನೋಡಿ ಸಮಸ್ಯೆೆ ಆಗಿದ್ರೆೆ ಅದನ್ನು ಬಗೆಹರಿಸಿಕೊಡಲು ಅವಕಾಶ ಕೊಡಬೇಕು ಅಂತ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಬಾಕ್ಸ್
ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರಿಗೆ ನಾವು ನೋಟಿಸ್ ನೀಡಿಲ್ಲ ಮಾಧ್ಯಮಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರಿಗೆ ನೋಟಿಸ್ ನೀಡಿದೆ. ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ಬಿಂಬಿತವಾಗುತ್ತಿಿದೆ. ಆದರೆ ಇದು ಸುಳ್ಳು. ನಾವು ಜಾಲಿವುಡ್ ಸ್ಟುಡಿಯೋಸ್ಗೆ ಪರಿಸರ ನಿಯಮ ಉಲ್ಲಂಘಿಸಿದ್ದರಿಂದ ಅದನ್ನು ಸರಿಪಡಿಸಿಕೊಳ್ಳುವಂತೆ ಆರು ತಿಂಗಳಿಂದಲೂ ನೋಟಿಸ್ ನೀಡುತ್ತಿಿದ್ದೇವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಾಮಿ ಹೇಳಿದರು. ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಜಾಲಿವುಡ್ ಸ್ಟುಡಿಯೋಸ್ ಅನ್ನು ಏಕಾಏಕಿ ಬಂದ್ ಮಾಡಿ ಬೀಗ ಹಾಕಿಲ್ಲ. ಹಲವು ಬಾರಿ ನೋಟಿಸ್ ನೀಡಿ ತ್ಯಾಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಾಪಿಸಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಆದರೆ ಅವರು ನೋಟಿಸ್ಗೆೆ ಯಾವುದೇ ಬೆಲೆ ನೀಡದ ಹಿನ್ನೆೆಲೆಯಲ್ಲಿ ಅಂತಿಮವಾಗಿ ಬೀಗ ಜಡಿಯಬೇಕಾಯಿತು ಎಂದು ಸಮರ್ಥಿಸಿಕೊಂಡರು.
ಬಾಕ್ಸ್
ಕಲಾವಿದರ ನಟ್ಟುಬೋಲ್ಟ್ ಟೈಟ್ ಮಾಡಿದ್ದಾರೆ
ಜಾಲಿವುಡ್ ಸ್ಟುಡಿಯೋಸ್ಗೆ ರಾಮನಗರ ಜಿಲ್ಲಾಡಳಿತ ಬೀಗ ಜಡಿದ ಹಿನ್ನೆೆಲೆಯಲ್ಲಿ ಪ್ರತಿಕ್ರಿಿಯೆ ನೀಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಾಮಿ ಅವರು ಡಿ.ಕೆ.ಶಿವಕುಮಾರ್ ಹಿಂದೆ ಒಮ್ಮೆೆ ಚಿತ್ರರಂಗದವರ ನಟ್ಬೋೋಲ್ಟ್ ಎಲ್ಲಿ ಟೈಟ್ ಮಾಡಬೇಕು ಎಂಬುದು ಗೊತ್ತು ಎಂದು ಹೇಳಿದ್ದರು. ಅದನ್ನು ಈಗ ಸಾಧಿಸಿದ್ದಾರೆ ಎಂದು ಅವರು ಆಕ್ರೋೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆೆ ಪ್ರತಿಕ್ರಿಿಯೆ ನೀಡಿದ ಮಾಗಡಿ ಶಾಸಕ ಬಾಲಕೃಷ್ಣ ಅವರು ಕುಮಾರಸ್ವಾಾಮಿ ದ್ವೇಷಕ್ಕಾಾಗಿ ಈ ರೀತಿಯ ಹೇಳಿಕೆ ನೀಡುತ್ತಿಿದ್ದಾರೆ. ಜಿಲ್ಲಾಡಳಿತ ಬಿಗ್ಬಾಸ್ ಕಾರ್ಯಕ್ರಮಕ್ಕೆೆ ಯಾವುದೇ ಅಡ್ಡಿಿಪಡಿಸಿಲ್ಲ. ಜಾಲಿವುಡ್ ಸ್ಟುಡಿಯೋಸ್ಗೆ ಮಾತ್ರ ಬೀಗ ಜಡಿದಿದೆ ಎಂದು ಹೇಳಿದರು.
ಕೋಟ್
ಜಾಲಿವುಡ್ ಸ್ಟುಡಿಯೋಸ್ಗೆ ಬೀಗ ಜಡಿದಿರುವ ಹಿನ್ನೆೆಲೆಯಲ್ಲಿ ಕೆಲವರು ನನ್ನನ್ನು ಭೇಟಿ ಮಾಡಿ ಸಮಸ್ಯೆೆ ನಿವಾರಣೆ ಮಾಡುವಂತೆ ಮನವಿ ಮಾಡಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಳಿಗೆ ಹೋಗುವಂತೆ ಹೇಳಿದ್ದೇನೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿಿ

